ETV Bharat / bharat

2 ಗಂಟೆಗಳಲ್ಲಿ ಹಾಜರಾಗಿ: ಚಿದಂಬರಂ ಮನೆಗೆ ನೋಟಿಸ್​ ಅಂಟಿಸಿದ ಸಿಬಿಐ

ಐಎನ್​ಎಕ್ಸ್​ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್​​ ನಿರಾಕರಿಸಿದ್ದು, ಇದೀಗ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಇದರ ಮಧ್ಯೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ, ಅವರಿಗೆ ನೋಟಿಸ್​ ಜಾರಿ ಮಾಡಿದೆ.

ಮಾಜಿ ಸಚಿವ ಪಿ.ಚಿದಂಬರಂ
author img

By

Published : Aug 20, 2019, 7:28 PM IST

Updated : Aug 20, 2019, 11:59 PM IST

ನವದೆಹಲಿ: 2007ರಲ್ಲಿ ಕೇಂದ್ರದ ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಅವರ ಮೇಲೆ ಕೇಳಿ ಬಂದಿರುವ ಐಎನ್​ಎಕ್ಸ್​​ ಮೀಡಿಯಾ ಕೇಸ್​​​ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದಲ್ಲಿ ಅವರೇ ಕಿಂಗ್​​ಪಿನ್​ ಎಂಬ ಆರೋಪ ಕೇಳಿಬಂದಿದ್ದು ಈ ಕಾರಣ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ತಿರಸ್ಕೃತಗೊಂಡಿದೆ.

ಸದ್ಯ ಅವರು ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದು, ಸದ್ಯ ಅವರು ಕಣ್ಮರೆಯಾಗಿದ್ದಾರೆ. ಜಾರಿ ನಿರ್ದೇಶನಾಲಯ ಹಾಗೂ ಐಟಿ ಅಧಿಕಾರಿಗಳು ಚಿದಂಬರಂ ಮನೆ ಮೇಲೆ ದಾಳಿ ಮಾಡಿದ್ದು, ಅವು ಅಲ್ಲಿಲ್ಲ ಎಂಬ ಮಾಹಿತಿ ಬಂದಿದೆ.

ತಲೆಮರೆಸಿಕೊಂಡಿರುವ ಚಿದಂಬರಂ ಅವರು ಮುಂದಿನ ಎರಡು ಗಂಟೆಗಳಲ್ಲಿ ಹಾಜರಾಗಬೇಕೆಂದು ಸಿಬಿಐ ಅಧಿಕಾರಿಗಳು ಅವರ ಮನೆ ಬಾಗಿಲಿಗೆ ನೋಟಿಸ್​ ಅಂಟಿಸಿದ್ದಾರೆ.

ನೋಟಿಸ್​ ಜಾರಿ

ನಿರೀಕ್ಷಣಾ ಜಾಮೀನಿನ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್​​, ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವುದು ಮೆಲ್ನೋಟಕ್ಕೆ ಕಂಡುಬಂದಿರುವ ಕಾರಣ, ನಿರೀಕ್ಷಣಾ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ತಿಳಿಸಿದೆ. ಹೀಗಾಗಿ ಕಾಂಗ್ರೆಸ್​​ನ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾಗಿದೆ.

  • Delhi: A team of Central Bureau of Investigation (CBI) officers arrives at the residence of P Chidambaram. Earlier today, Delhi High Court had dismissed his both anticipatory bail pleas in connection with INX Media case. pic.twitter.com/Zjn4XDiJk7

    — ANI (@ANI) August 20, 2019 " class="align-text-top noRightClick twitterSection" data=" ">

ಈ ಪ್ರಕರಣದಲ್ಲಿ ಬರೋಬ್ಬರಿ 305ಕೋಟಿ ರೂಪಾಯಿ ವಂಚನೆ ನಡೆದಿದ್ದು, ಬಂಧನದ ಭೀತಿ ಸಹ ಎದುರಿಸುತ್ತಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ಸುನೀಲ್​ ಗೌರ್​, ಇದೊಂದು ಅತಿದೊಡ್ಡ ಅವ್ಯವಹಾರ ಪ್ರಕರಣವಾಗಿದ್ದು, ತನಿಖೆಗೆ ಒಳಪಡಿಸುವ ಕಾರಣ ಅರ್ಜಿ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 2007ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಲ್ಲಿ ಕೆಲವು ಅವ್ಯವಹಾರ ಮೂಲಕ ಐಎನ್‌ಎಕ್ಸ್ ಮೀಡಿಯಾ ಹೌಸ್‌ಗೆ "ನೆರವು' ಮಾಡಿಕೊಟ್ಟಿದ್ದ ಪ್ರಕರಣ ಇದಾಗಿದೆ.ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ,ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ನಿವಾಸಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ.

ಸುಪ್ರೀಂಗೆ ಅರ್ಜಿ:

ಇನ್ನು ದೆಹಲಿ ಹೈಕೋರ್ಟ್​​ ನೀಡಿರುವ ಆದೇಶವನ್ನ ಪ್ರಶ್ನೆ ಮಾಡಿ ಅವರು ಸುಪ್ರೀಂಕೋರ್ಟ್​ಗೆ ಹೋಗಲು ನಿರ್ಧರಿಸಿದ್ದಾರೆ. ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಚಿದಂಬರಂ ಪರ ವಕೀಲರು ಕೋರಿಕೊಂಡಿದ್ದು, ತುರ್ತು ವಿಚಾರಣೆಗೆ ಕಾರಣಗಳನ್ನು ಮಂಗಳವಾರ ತಿಳಿಸುವಂತೆ ಸುಪ್ರೀಂ ಕೋರ್ಟ್​ ಹೇಳಿದೆ.

  • Delhi: Central Bureau of Investigation (CBI) has put up a notice outside the residence of P Chidambaram to appear before them in the next two hours. Earlier today, Delhi High Court had dismissed his both anticipatory bail pleas in connection with INX Media case. pic.twitter.com/IeEI5IkvGF

Intro:Body:

ಐಎನ್ಎಕ್ಸ್ ಮೀಡಿಯಾ ಕೇಸ್​​ನಲ್ಲಿ ಚಿದಂಬರಂ ಕಿಂಗ್​ಪಿನ್​​​... ನಿರೀಕ್ಷಣಾ ಜಾಮೀನು ಅಸಾಧ್ಯ ಎಂದ ಹೈಕೋರ್ಟ್​! 

ನವದೆಹಲಿ: 2007ರಲ್ಲಿ ಕೇಂದ್ರದ ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಅವರ ಮೇಲೆ ಕೇಳಿ ಬಂದಿರುವ ಐಎನ್​ಎಕ್ಸ್​​ ಮೀಡಿಯಾ ಕೇಸ್​​​ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದಲ್ಲಿ ಅವರೇ ಕಿಂಗ್​​ಪಿನ್​ ಎಂದು ಕಂಡು ಬಂದಿರುವ ಕಾರಣ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ತಿರಸ್ಕೃತಗೊಂಡಿದೆ. 

ನಿರೀಕ್ಷಣಾ ಜಾಮೀನಿನ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​​, ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವುದು ಮೆಲ್ನೋಟಕ್ಕೆ ಕಂಡುಬಂದಿರುವ ಕಾರಣ, ನಿರೀಕ್ಷಣಾ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ತಿಳಿಸಿದೆ. ಹೀಗಾಗ್ಇ ಕಾಂಗ್ರೆಸ್​​ನ ಮಾಜಿ ಸಚಿವ ಪಿ ಚಿದಂಬರಂ ಅವರಿಗೆ ಭಾರೀ ಹಿನ್ನಡೆಯಾಗಿದೆ. 

ಈ ಪ್ರಕರಣದಲ್ಲಿ ಬರೋಬ್ಬರಿ 305ಕೋಟಿ ರೂಪಾಯಿ ವಂಚನೆ ನಡೆದಿದ್ದು, ಬಂಧನದ ಭೀತಿ ಸಹ ಎದುರಿಸುತ್ತಿದ್ದಾರೆ. ಇನ್ನು ದೆಹಲಿ ಹೈಕೋರ್ಟ್​​ ನೀಡಿರುವ ಆದೇಶವನ್ನ ಪ್ರಶ್ನೆ ಮಾಡಿ ಅವರು ಸುಪ್ರೀಂಕೋರ್ಟ್​ಗೆ ಹೋಗಲು ನಿರ್ಧರಿಸಿದ್ದಾರೆ. 

ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​ ನ್ಯಾಯಮೂರ್ತಿ ಸುನೀಲ್​ ಗೌರ್​, ಇದೊಂದು ಅತಿದೊಡ್ಡ ಅವ್ಯವಹಾರ ಪ್ರಕರಣವಾಗಿದ್ದು, ತನಿಖೆಗೆ ಒಳಪಡಿಸುವ ಕಾರಣ ಅರ್ಜಿ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 2007ರ ಅವಧಿಯಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ವಿದೇಶಿ ಬಂಡವಾಳ ಉತ್ತೇಜನ ಮಂಡಳಿಯಲ್ಲಿ ಕೆಲವು ಅವ್ಯವಹಾರ ಮೂಲಕ ಐಎನ್‌ಎಕ್ಸ್ ಮೀಡಿಯಾ ಹೌಸ್‌ಗೆ "ನೆರವು' ಮಾಡಿಕೊಟ್ಟಿದ್ದ ಪ್ರಕರಣ ಇದಾಗಿದೆ.ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ,ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ನಿವಾಸಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. 

Conclusion:
Last Updated : Aug 20, 2019, 11:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.