ತಾಂತ್ರಿಕ ಕ್ರಾಂತಿ ದೇಶಾದ್ಯಂತ ನೀರಿನಂತೆ ಹರಿಯುತ್ತಿದ್ದು, ಯಾರೂ ಊಹಿಸದ ರೀತಿಯಲ್ಲಿ ವಿಜ್ಞಾನ ಬೆಳೆದು ನಿಂತಿರುವುದು ಕಣ್ಣಿಗೆ ಕಾಣುತ್ತಿದೆ. ಕೈಯಲ್ಲಿ ಮೊಬೈಲ್, ಅದಕ್ಕೆ ಇಂಟರ್ನೆಟ್ ಸೇವೆ ಇಲ್ಲದೆ ಯಾರೂ ನಮಗೆ ಕಾಣುವುದಿಲ್ಲ. ಸಿಕ್ಕರೂ ಅಪರೂಪ. ಒಂದು ಕಾಲದಲ್ಲಿದ್ದ ಲ್ಯಾಂಡ್ಲೈನ್ ಸಾಮ್ರಾಜ್ಯವನ್ನು ಅಳಿಸಿ ಹಾಕಿ ಮೊಬೈಲ್ ಎಂಬ ರಾಜ ರಾಜ್ಯಭಾರ ಮಾಡುತ್ತಿದ್ದಾನೆ.
ದಶಕಗಳ ಹಿಂದೆ ಮೂರು ನಿಮಿಷಗಳ ಇಂಟರ್ನೆಟ್ ಬಳಕೆಗೆ ₹ 1.20 ಪಾವತಿಸಬೇಕಿತ್ತು. ಅಂದರೆ ಸೆಕೆಂಡಿಗೆ 52 ಕಿಲೋಬೈಟ್ ಬಳಕೆ. 3 ವರ್ಷಗಳ ಹಿಂದೆ (ಸೆಪ್ಟೆಂಬರ್ 5) ರಿಲಯನ್ಸ್ ಜಿಯೋ ನೀಡಿರುವ ಇಂಟರ್ನೆಟ್ ಕೊಡುಗೆ ದೇಶದ ಮೂಲೆಮೂಲೆಗೂ ವಿಸ್ತರಿಸಿ ಸಂಚಲನ ಸೃಷ್ಟಿಸಿತು. ಇದರಿಂದಾಗಿ ಅತ್ಯಂತ ಕಡಿಮೆ ದರದಲ್ಲಿ ಕಟ್ಟ ಕಡೆಯ ವ್ಯಕ್ತಿಯೂ ಇಂಟರ್ನೆಟ್ ಸೇವೆ ಪಡೆಯುವಂತಾಯ್ತು. ಪ್ರಸ್ತುತ ಈ ಜಿಯೋ ಇಂಟರ್ನೆಟ್, ಮೊಬೈಲ್ ಸೇವೆ ದೂರದರ್ಶನದತ್ತಲೂ ಹೆಜ್ಜೆ ಇಟ್ಟಿದೆ. ಈಚೆಗೆ ರಿಲಯನ್ಸ್ 'ಜಿಯೋ ಫೈಬರ್' ಯೋಜನೆಗೆ ಚಾಲನೆ ನೀಡಲಾಗಿದ್ದು, ಅಲ್ಪ ದರದಲ್ಲಿಯೇ ಎಲ್ಲಾ ಚಾನೆಲ್ಗಳನ್ನು ವೀಕ್ಷಿಸಬಹುದು. ಇಂಟರ್ನೆಟ್, ಮೊಬೈಲ್ ದೂರದರ್ಶನ ಚಾನೆಲ್ಗಳನ್ನು ದೇಶವ್ಯಾಪಿ ಒದಗಿಸುವ ಮೂಲಕ ಹೊಸ ಅಧ್ಯಾಯ ಸೃಷ್ಟಿಸಿದೆ.
ಹೇಗಿದೆ ಬೆಳವಣಿಗೆ..!
ಮೊದಲು ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಇಂಟರ್ನೆಟ್ ಸೇವೆ ಈಗ ಪ್ರತಿಯೊಬ್ಬರಿಗೂ ಸಿಗುವಂತಾಗಿದೆ. ಅದಕ್ಕೆ ಸಂಬಂಧಿಸಿದಂತೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಪ್ರಕಾರ ಮಾಹಿತಿ ಇಲ್ಲಿದೆ.
ಅಂಕಿ-ಅಂಶ
- ಶೇ 63.67- 2019ರ ಮಾರ್ಚ್ವರೆಗೆ ಇಂಟರ್ನೆಟ್ ಬಳಕೆದಾರರ ಸಂಖ್ಯೆ
- ಶೇ 96.4 - ಮೊಬೈಲ್, ವೈರ್ಲೆಸ್ ಸಾಧನಗಳಿಗೆ ಇಂಟರ್ನೆಟ್ ಸೇವೆ ಪಡೆಯುವವರ ಸಂಖ್ಯೆ
- ಶೇ 40 - ನಗರದ ಪ್ರದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ
- ಶೇ 36 - ಗ್ರಾಮೀಣ ಪ್ರದೇಶದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ
- ದೇಶದ ಪ್ರತಿ 100 ಜನರಗೆ ಸರಾಸರಿ ಶೇ 48.48ರಷ್ಟು ಇಂಟರ್ನೆಟ್ ಚಂದಾದಾರರು ಇದ್ದಾರೆ
- ನಗರ ಪ್ರದೇಶದಲ್ಲಿ ಪ್ರತಿ 100 ಮಂದಿಗೆ ಶೇ 97.94ರಷ್ಟು ಅಂತರ್ಜಾಲ ಸೌಕರ್ಯವಿದೆ
- ಗ್ರಾಮೀಣ ಪ್ರದೇಶದಲ್ಲಿ ಪ್ರತಿ 100 ಮಂದಿಗೆ ಶೇ 25.36ರಷ್ಟು ಮಂದಿಗೆ ಅಂತರ್ಜಾಲ ಸೇವೆ
- ಪ್ರಪಂಚಕ್ಕೆ ಹೋಲಿಸಿದರೆ, ಭಾರತದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ ಕಡಿಮೆ (ತಿಂಗಳಿಗೆ 9.06 GB)
- ಭಾರತದಲ್ಲಿ ಒಂದು GB ಇಂಟರ್ನೆಟ್ಗೆ ₹ 7.95, ಇದು ಕೆಲವು ನಗರದಲ್ಲಿ ಕಪ್ ಟೀಗಿಂತ ಕಡಿಮೆ
- 25.15 ಕೋಟಿ- 2014ರಲ್ಲಿದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ
- 66 MB - 2014ರಲ್ಲಿ ಒಬ್ಬರು ತಿಂಗಳಿಗೆ ಬಳಕೆ ಮಾಡುತ್ತಿದ್ದ ಅಂತರ್ಜಾಲ ಸೇವೆ
- 389 ನಿಮಿಷ- 2014ರಲ್ಲಿ ಒಬ್ಬರು ತಿಂಗಳಿಗೆ ಅಂತರ್ಜಾಲ ಬಳಕೆಗೆ ತೆಗೆದುಕೊಳ್ಳುತ್ತಿದ್ದ ಸಮಯ
- 692 ನಿಮಿಷ- 2019ರಲ್ಲಿ ಒಬ್ಬರು ತಿಂಗಳಿಗೆ ಅಂತರ್ಜಾಲ ಬಳಕೆಗೆ ತೆಗೆದುಕೊಳ್ಳುತ್ತಿರುವ ಸಮಯ
- 2015ರಲ್ಲಿ ಅಂತರ್ಜಾಲ ಸೇವೆ ಗ್ರಾಮೀಣ ಪ್ರದೇಶದಲ್ಲಿ ಶೇ 9ರಷ್ಟಿತ್ತು. ಅದೀಗ ಶೇ 25ಕ್ಕೆ ಏರಿದೆ
- ದೇಶದ 10 ಹೊಸ ಬಳಕೆದಾರರಲ್ಲಿ 9 ಮಂದಿ ಭಾರತೀಯ ಭಾಷೆಗಳಲ್ಲಿ ಇಂಟರ್ನೆಟ್ ಬಳಕೆ (ಅಧಿಕವಾಗಿ ಗ್ರಾಮೀಣ ಪ್ರದೇಶ)
- 24.5 ಕೋಟಿ- ದೇಶದಲ್ಲಿ ಯೂಟ್ಯೂಬ್ ಬಳಕೆದಾರರ ಸಂಖ್ಯೆ (ಕಳೆದ ಡಿಸೆಂಬರ್ವರೆಗೆ)
- ಶೇ 75 ರಷ್ಟು ಮಂದಿ ವಿಡಿಯೋಗಳನ್ನೇ ವೀಕ್ಷಿಸುವ ಸ್ಮಾರ್ಟ್‌ಫೋನ್ ಬಳಕೆದಾರರು
- 2014ರಲ್ಲಿ 25.10 ಕೋಟಿ ನಿಮಿಷಗಳು ಔಟ್ಗೋಯಿಂಗ್ ಕರೆಯಲ್ಲಿ ಮಾತನಾಡುತ್ತಿದ್ದರು. ಅದೀಗ 19 ಕೋಟಿಗೆ ಇಳಿಕೆ ಕಂಡಿದೆ. (ಇಂಟರ್ನೆಟ್ ಬಳಕೆ ಮತ್ತು ಚಾಟಿಂಗ್ನಲ್ಲಿ ಮಗ್ನರಾಗಿರುವುದು ಇದಕ್ಕೆ ಕಾರಣ)
- ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳ ಬೆಳವಣಿಗೆಯು ರಾಜ್ಯದ ಒಟ್ಟು ದೇಶೀಯ ಉತ್ಪನ್ನ ಶೇ1.2ರಷ್ಟು ಹೆಚ್ಚಿಸಿದೆ
- ಪ್ರಸ್ತುತ ಶೇ 10ರಷ್ಟು ಮೊಬೈಲ್ ಫೋನ್ ಬಳಕೆಯ ಹೆಚ್ಚಳ