ಗುವಾಹಟಿ: ಅಂತಾರಾಷ್ಟ್ರೀಯ ಚಹಾ ದಿನಾಚರಣೆಯಂದು, ಅಸ್ಸೋಂ ಚಹಾವನ್ನು 'ಇಮ್ಯುನಿಟಿ ಬೂಸ್ಟರ್' ಆಗಿ ಉತ್ತೇಜಿಸುವಂತೆ ಅಸ್ಸಾಂ ಚಹಾ ಬೆಳೆಗಾರರು ಚಹಾ ಮಂಡಳಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಈಶಾನ್ಯ ಚಹಾ ಸಂಘ (ನೆಟಾ)ದ ಸಲಹೆಗಾರ ಬಿಡಿಯಾನಂದ ಬಾರ್ಕಕೋಟಿ ,ಇಡೀ ಜಗತ್ತು ಕೊರೊನಾ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಅಸ್ಸೋಂ ಚಹಾವನ್ನು 'ಇಮ್ಯುನಿಟಿ ಬೂಸ್ಟರ್' ಎಂದು ಉತ್ತೇಜಿಸಲು ಇದು ಅತ್ಯುತ್ತಮ ಸಮಯ. ನಾವು ಅಸ್ಸೋಂ ಚಹಾವನ್ನು ರೋಗ ನಿರೋಧಕ ಶಕ್ತಿ ವರ್ಧಕ ಎಂದು ಉತ್ತೇಜಿಸಲು ಚಹಾ ಮಂಡಳಿ ಮತ್ತು ಭಾರತ ಸರ್ಕಾರದ ಆಯುಷ್ ಸಚಿವಾಲಯವನ್ನು ಸಂಪರ್ಕಿಸಲಿದ್ದೇವೆ ಎಂದು ಹೇಳಿದರು.
ಚಹಾ ದಿನಾಚರಣೆಯ ಅಂಗವಾಗಿ, ಚಹಾ ಉದ್ಯಮದ ಅಭಿವೃದ್ದಿಗಾಗಿ ಕೆಲಸ ಮಾಡಲು ರಚಿಸಲಾದ ಟೀ ವಿಷನ್ ಎಂಬ ಎನ್ಜಿಓ 'ಟೀ-ಆರೋಗ್ಯ ಮತ್ತು ಸ್ವಾಸ್ಥ್ಯಕ್ಕಾಗಿ ಒಂದು ಅದ್ಭುತ ಪಾನೀಯ' ಎಂಬ ಪುಸ್ತಕವನ್ನು ಪ್ರಕಟಿಸಿದೆ. ಟೋಕ್ಲೈ ಚಹಾ ಸಂಶೋಧನಾ ಸಂಸ್ಥೆಯ ( ಟಿಟಿಆರ್ಐ)) ಮುಖ್ಯ ಸಲಹಾ ಅಧಿಕಾರಿ ಡಾ. ಪ್ರದೀಪ್ ಬರುವಾ ಪುಸ್ತಕ ಬರೆದಿದ್ದಾರೆ. ಈ ಪುಸ್ತಕವು ಚಹಾದ ರಾಸಾಯನಿಕ ಘಟಕಗಳು, ಔಷಧೀಯ ಗುಣ, ಪೌಷ್ಠಿಕಾಂಶದ ಮೌಲ್ಯಗಳ ಕುರಿತಾದ ವೈಜ್ಞಾನಿಕ ಪತ್ರಿಕೆಗಳ ವಿಮರ್ಶೆಯನ್ನು ಒಳಗೊಂಡಿದೆ.