ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಫಲಾನುಭವಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಈ ಕುರಿತಂತೆ ಸ್ವತಃ ಪಿಎಂ ಅವರೇ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
-
The world’s largest vaccination drive is underway in India. Our frontline warriors are getting vaccinated across the nation. At 1:15 PM tomorrow, 22nd January, I would interact with beneficiaries and vaccinators of Covid vaccination drive in Varanasi, via video conferencing.
— Narendra Modi (@narendramodi) January 21, 2021 " class="align-text-top noRightClick twitterSection" data="
">The world’s largest vaccination drive is underway in India. Our frontline warriors are getting vaccinated across the nation. At 1:15 PM tomorrow, 22nd January, I would interact with beneficiaries and vaccinators of Covid vaccination drive in Varanasi, via video conferencing.
— Narendra Modi (@narendramodi) January 21, 2021The world’s largest vaccination drive is underway in India. Our frontline warriors are getting vaccinated across the nation. At 1:15 PM tomorrow, 22nd January, I would interact with beneficiaries and vaccinators of Covid vaccination drive in Varanasi, via video conferencing.
— Narendra Modi (@narendramodi) January 21, 2021
ಕೊರೊನಾ ನಿಯಂತ್ರಣ ಮಾಡುವಲ್ಲಿ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ದೇಶದಾದ್ಯಂತ ಕೋವಿಡ್ ಲಸಿಕೆ ಹಾಕುವ ಅಭಿಯಾನವನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಫಲಾನುಭವಿಗಳು ಮತ್ತು ವ್ಯಾಕ್ಸಿನೇಟರ್‌ಗಳೊಂದಿಗೆ ಇಂದು ಮಧ್ಯಾಹ್ನ 1: 15ಕ್ಕೆ ವಿಡಿಯೋ ಸಂವಾದ ನಡೆಸಲಿದ್ದು, ಅವರ ಅನುಭವದ ಕುರಿತು ಮಾಹಿತಿ ಪಡೆಯಲಿದ್ದಾರೆ. ಈ ಸಂಬಂಧ ಪಿಎಂ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
-
This interaction would give first hand opportunity to hear their experiences as well as feedback. I would urge you all to watch tomorrow’s interaction.
— Narendra Modi (@narendramodi) January 21, 2021 " class="align-text-top noRightClick twitterSection" data="
">This interaction would give first hand opportunity to hear their experiences as well as feedback. I would urge you all to watch tomorrow’s interaction.
— Narendra Modi (@narendramodi) January 21, 2021This interaction would give first hand opportunity to hear their experiences as well as feedback. I would urge you all to watch tomorrow’s interaction.
— Narendra Modi (@narendramodi) January 21, 2021
ಆರು ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ :
ಈ ಸಂಬಂಧ ಸಿಎಂಒ ಡಾ.ವಿ.ಬಿ ಸಿಂಗ್ ಅವರು ಮಾಹಿತಿ ನೀಡಿದ್ದು, ವಾರಣಾಸಿ ಜಿಲ್ಲೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಹನ ನಡೆಸಲಿದ್ದಾರೆ. ಮಹಿಳಾ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಸಿಎಚ್‌ಸಿ ಆನೆ ಮಾರುಕಟ್ಟೆಯಲ್ಲಿರುವ ನೌಕರರೊಂದಿಗೆ ಈ ಸಂವಾದ ನಡೆಯಲಿದೆ. ದಾದಿ, ವೈದ್ಯರು, ಇಬ್ಬರು ಎಎನ್‌ಎಂಗಳು, ಸ್ಕ್ಯಾವೆಂಜರ್, ಎಲ್‌ಟಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದರು.
15 ಕೇಂದ್ರಗಳಲ್ಲಿ ಲಸಿಕೆ ನೀಡಿಕೆ:
ಜಿಲ್ಲೆಯ ಸುಮಾರು 15 ಕೇಂದ್ರಗಳಲ್ಲಿ ಇಂದು ಎರಡು ಸೆಷನ್‌ಗಳಲ್ಲಿ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಸುಮಾರು 3,000 ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ಈ ಸಂಬಂಧ ಗುರುವಾರವೇ ಎಲ್ಲ ಕೇಂದ್ರಗಳಿಗೆ ವ್ಯಾಕ್ಸಿನೇಷನ್ ಅನ್ನು ತಲುಪಿಸಲಾಗಿದೆ.
ಜ.16 ರಿಂದ ಆರಂಭವಾದ ಅಭಿಯಾನ:
ಜ. 16 ರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ. ಮೊದಲಿಗೆ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಎರಡನೇ ಹಂತದಲ್ಲಿ ರಾಜಕೀಯ ನಾಯಕರಿಗೆ ಲಸಿಕೆ ಹಾಕತ್ತದೆ.