ETV Bharat / bharat

'ಸಿಎಎ-ಎನ್​ಆರ್​ಸಿ ವಿರೋಧಿಸುವ ಬುದ್ಧಿಜೀವಿಗಳೆಲ್ಲ ಟಿಎಂಸಿ ನಾಯಿಗಳು': ಬಿಜೆಪಿ ಸಂಸದ - ಸಿಎಎ ವಿರೋಧಿಸುವ ಬುದ್ದಿಜೀವಿಳು ನಾಯಿಗಳು

ಟಿಎಂಸಿ ಪಕ್ಷದಿಂದ ಹಣ ಪಡೆದ ಬುದ್ಧಿಜೀವಿಗಳು ಸಿಎಎ ಮತ್ತು ಎನ್​​ಆರ್​ಸಿಯನ್ನ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದ ಹೇಳಿಕೆ ನೀಡಿದ್ದಾರೆ.

Intellectuals against CAA NRC are dogs of TMCಬುದ್ದಿಜೀವಿಗಳೆಲ್ಲ ನಾಯಿಗಳು
ಬಿಜೆಪಿ ಸಂಸದ ಸೌಮಿತ್ರ ಖಾನ್
author img

By

Published : Jan 20, 2020, 11:43 AM IST

ಬಸಿರ್ಹತ್(ಪಶ್ಚಿಮ ಬಂಗಾಳ): ಸಿಎಎ ಮತ್ತು ಎನ್​ಆರ್​​ಸಿಯನ್ನ ವಿರೋಧಿಸುತ್ತಿರುವ ಬುದ್ಧಿಜೀವಿಗಳೆಲ್ಲ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಿಗಳು ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  • BJP MP Soumitra Khan in Basirhat yesterday: The intellectual persons who are being paid by the state govt and are not supporting this (the Citizenship Amendment Act and National Register of Citizens) are the dogs of Trinamool. pic.twitter.com/MkmWmtSjoG

    — ANI (@ANI) January 20, 2020 " class="align-text-top noRightClick twitterSection" data=" ">

ಬಿಶ್ನುಪುರ್ ಕ್ಷೇತ್ರದ ಸಂಸದ ಸೌಮಿತ್ರ ಖಾನ್ ಭಾನುವಾರ ​​ಬಸಿರ್ಹತ್​ನಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿ, ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಹಣ ಪಡೆದುಕೊಂಡಿರುವ ಬುದ್ಧಿಜೀವಿಗಳು ಸಿಎಎ ಮತ್ತು ಎನ್​ಆರ್​ಸಿಗೆ ಬೆಂಬಲ ನೀಡುತ್ತಿಲ್ಲ. ಅವರೆಲ್ಲ ಟಿಎಂಸಿ ಪಕ್ಷದ ನಾಯಿಗಳು ಎಂದಿದ್ದಾರೆ.

ಈ ಹಿಂದೆ ಟಿಎಂಸಿ ಪಕ್ಷದಲ್ಲಿದ್ದ ಸೌಮಿತ್ರ ಖಾನ್ 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇವೆರಡನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ ಎಂದಿದ್ದಾರೆ.

ಇದಕ್ಕೂ ಮೊದಲು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಷ್, ಸಿಎಎ ವಿರೋಧಿಸುವ ಬುದ್ಧಿಜೀವಿಗಳನ್ನ 'ಬೆನ್ನುಮೂಳೆ ಇಲ್ಲದವರು', 'ದೆವ್ವಗಳು', 'ಪರಾವಲಂಬಿಗಳು' ಎಂದು ಕರೆದಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.