ಅಂಬಾಲಾ (ಹರಿಯಾಣ): ಕಳೆದ ಜುಲೈ ತಿಂಗಳಲ್ಲಿ ಫ್ರಾನ್ಸ್ನಿಂದ ಭಾರತಕ್ಕೆ ಬಂದಿದ್ದ ಐದು ರಫೇಲ್ ಯುದ್ಧ ವಿಮಾನಗಳು ಇಂದು ಅಧಿಕೃತವಾಗಿ ವಾಯುಸೇನೆ ಸೇರ್ಪಡೆಗೊಂಡಿವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎದುರಾಳಿ ಚೀನಾ, ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿರುವ ಇಂತಹ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆಗೊಳ್ಳುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಸೇರಿಕೊಂಡಿದ್ದು, ಈ ವೇಳೆ ಮಾತನಾಡಿರುವ ರಾಜನಾಥ್ ಸಿಂಗ್, ಗಡಿ ಭಾಗದಲ್ಲಿ ಸದ್ಯ ಕಠಿಣ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂದರ್ಭಗಳಲ್ಲಿ ರಫೇಲ್ ಯುದ್ಧ ವಿಮಾನ ಸೇರ್ಪಡೆಗೊಂಡಿರುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
-
#WATCH Indigenous light combat aircraft Tejas performs during Rafale induction ceremony, at Ambala airbase pic.twitter.com/5SSQQHzDnT
— ANI (@ANI) September 10, 2020 " class="align-text-top noRightClick twitterSection" data="
">#WATCH Indigenous light combat aircraft Tejas performs during Rafale induction ceremony, at Ambala airbase pic.twitter.com/5SSQQHzDnT
— ANI (@ANI) September 10, 2020#WATCH Indigenous light combat aircraft Tejas performs during Rafale induction ceremony, at Ambala airbase pic.twitter.com/5SSQQHzDnT
— ANI (@ANI) September 10, 2020
ರಾಷ್ಟ್ರದ ಭದ್ರತೆ, ದೇಶದ ಗಡಿ ರಕ್ಷಣೆಗೆ ಭಾರತ ಸದಾ ಸಿದ್ಧ ಹಾಗೂ ಬದ್ಧವಾಗಿದೆ. ನಮ್ಮ ಸಾರ್ವಭೌಮತೆಗೆ ಧಕ್ಕೆ ತರುವ ದುಸ್ಸಾಹಸ ಮಾಡುತ್ತಿರುವ ನೆರೆಯ ರಾಷ್ಟ್ರಗಳಿಗೆ ಇದೀಗ ನಾವು ಸ್ಪಷ್ಟ ಸಂದೇಶ ರವಾನೆ ಮಾಡಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ದೃಷ್ಠಿಕೋನ, ನಿಲುವು ಜಗತ್ತಿನ ಮುಂದೆ ಸಾರಿದ್ದೇವೆ ಎಂದಿದ್ದಾರೆ.
ಕಾಲಕ್ಕೆ ಅನುಗುಣವಾಗಿ ಬದಲಾಗಬೇಕಾಗಿದೆ. ಗಡಿಯಲ್ಲಿ ಯಾವುದೇ ರೀತಿಯ ಪ್ರಬಲ ವಿರೋಧ ಎದುರಿಸಲು ನಾವು ಸನ್ನದ್ಧ. ಭಾರತ-ಫ್ರಾನ್ಸ್ ನಡುವಿನ ಸಂಬಂಧ ಇದೀಗ ಮತ್ತೊಂದು ದಿಕ್ಕು ಪಡೆದುಕೊಂಡಿದೆ ಎಂದಿದ್ದಾರೆ. ಇದೇ ವೇಳೇ 1999ರ ಕಾರ್ಗಿಲ್ ಯುದ್ಧದಲ್ಲಿ ಫ್ರಾನ್ಸ್ ಯುದ್ಧ ವಿಮಾನ ಬಳಕೆ ಮಾಡಿಕೊಂಡಿದ್ದ ವಿಷಯವನ್ನ ರಾಜನಾಥ್ ಸಿಂಗ್ ಸ್ಮರಿಸಿದರು.
ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾ ವಿದೇಶಾಂಗ ಸಿವ್ ವಾಂಗ್ ಯಿ ಅವರೊಂದಿಗೆ ಮಾತುಕತೆ ಸಹ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
-
#WATCH Indian Air Force’s 'Sarang Aerobatic Team' performs at the Rafale induction ceremony in Ambala pic.twitter.com/KI4X3cHAl7
— ANI (@ANI) September 10, 2020 " class="align-text-top noRightClick twitterSection" data="
">#WATCH Indian Air Force’s 'Sarang Aerobatic Team' performs at the Rafale induction ceremony in Ambala pic.twitter.com/KI4X3cHAl7
— ANI (@ANI) September 10, 2020#WATCH Indian Air Force’s 'Sarang Aerobatic Team' performs at the Rafale induction ceremony in Ambala pic.twitter.com/KI4X3cHAl7
— ANI (@ANI) September 10, 2020
ಇದೇ ವೇಳೆ ಫ್ರಾನ್ಸ್ಗೆ ಭಾರತದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಿದ ರಾಜನಾಥ್ ಸಿಂಗ್, ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡಲು ಆಹ್ವಾನ ನೀಡಿದರು. ಕಾರ್ಯಕ್ರಮದಲ್ಲಿ ಫ್ರಾನ್ಸ್‌ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಭಾರತ ಫ್ರಾನ್ಸ್ನಿಂದ 36 ಫೈಟರ್ ಜೆಟ್ ಖರೀದಿ ಸಂಬಂಧ 59,000 ಕೋಟಿ ರೂ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈಗಾಗಲೇ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿವೆ.