ನವದೆಹಲಿ: ಸ್ವಚ್ಛ ಸರ್ವೇಕ್ಷಣ್- 2020 ಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿಯೂ ಮಧ್ಯ ಪ್ರದೇಶದ ಇಂದೋರ್ ನಗರ ಭಾರತದ ಸ್ವಚ್ಛಂದ ನಗರ ಪ್ರಶಸ್ತಿಗೆ ಭಾಜನವಾಗಿದೆ.
ವಿಶೇಷವೆಂದರೆ ಸತತ ನಾಲ್ಕನೇ ಬಾರಿಗೆ ಇಂದೋರ್ ನಗರ ಈ ಪ್ರಶಸ್ತಿಯನ್ನು ಪಡೆಯುತ್ತಿದೆ. 2017, 2018 ಹಾಗೂ 2019ರಲ್ಲೂ ಇಂದೋರ್ ನಗರ ಭಾರತದ ಸ್ವಚ್ಛಂದ ನಗರ ಪ್ರಶಸ್ತಿಯನ್ನು ಪಡೆದಿತ್ತು. ಸ್ವಚ್ಛ ಸರ್ವೇಕ್ಷಣ್ ಅಭಿಯಾನದ ಮೊದಲನೇ ಆವೃತ್ತಿಯಲ್ಲಿ ನಮ್ಮ ರಾಜ್ಯದ ಮೈಸೂರು ಪ್ರಥಮ ಸ್ಥಾನ ಪಡೆದಿತ್ತು. ಆ ಬಳಿಕ ಸತತ ನಾಲ್ಕು ಬಾರಿ ಇಂದೋರ್ ಈ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಬಾರಿ ಭಾರತದ ಸ್ವಚ್ಛಂದ ನಗರ ಪ್ರಶಸ್ತಿ ವಿಭಾಗದಲ್ಲಿ ಇಂದೋರ್ ಮೊದಲ ಸ್ಥಾನ ಪಡೆದರೆ, ಗುಜರಾತ್ನ ಸೂರತ್ ನಗರ ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನ ಪಡೆದಿದೆ.
ಇನ್ನು ಮೆಗಾ ಸಿಟಿ ವಿಭಾಗದಲ್ಲಿ ಬೆಂಗಳೂರು ಅತ್ಯುತ್ತಮ ಸ್ವಯಂ ಸುಸ್ಥಿರ ನಗರ ಎಂಬ ಗರಿ ಪಡೆದುಕೊಂಡಿದೆ.