ETV Bharat / bharat

ವಿಧಾನಸಭೆಯಲ್ಲಿ ಮಂಡನೆಯಾಗಲಿದೆ 'ಸರ್​ಪಂಚ್​ ನೇರ ಆಯ್ಕೆ ವಿಧೇಯಕ - ಉದ್ಧವ್ ಠಾಕ್ರೆ

ಫೆಬ್ರವರಿ 24ರಿಂದ ಪ್ರಾರಂಭವಾಗಲಿರುವ ಮಹಾರಾಷ್ಟ್ರ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಉದ್ಧವ್ ಠಾಕ್ರೆ ಸರ್ಕಾರವು ಜನರಿಂದಲೇ ನೇರವಾಗಿ ಆಯ್ಕೆ ಆಗುವ ಸರ್​ಪಂಚ್​ ನೇರ ಆಯ್ಕೆ ವಿಧೇಯಕ ಮಂಡಿಸಲಿದ್ದು, ಅದರ ಪ್ರಕಾರ ಜನರು ನೇರವಾಗಿ ಗ್ರಾಮ ಸರ್​​ಪಂಚ್​ ಅವರನ್ನು ಆಯ್ಕೆ ಮಾಡಬಹುದು. ಈ ಮಸೂದೆ ತಿದ್ದುಪಡಿ ಮಾಡಲು ದೇವೇಂದ್ರ ಫಡ್ನವಿಸ್ ಕೂಡಾ ನಿರ್ಧರಿಸಿದ್ದರು.

uddhav
uddhav
author img

By

Published : Feb 22, 2020, 8:37 PM IST

ಮುಂಬೈ: ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಹಾರಾಷ್ಟ್ರ ಸರ್ಕಾರ ಸರ್​ಪಂಚ್​ ಆಯ್ಕೆಗೆ ನೇರ ಮತದಾನ ಮಾಡುವಂತೆ ವಿಧೇಯಕ ಮಂಡನೆಗೆ ನಿರ್ಧರಿಸಿದೆ, ಇದರ ಅಡಿಯಲ್ಲಿ ಜನರು ನೇರವಾಗಿ ತಮ್ಮ ಗ್ರಾಮದ ಸರ್​ಪಂಚ್​​ (ಗ್ರಾಮ ಪಂಚಾಯತ್ ಅಧ್ಯಕ್ಷ) ರನ್ನು ಆಯ್ಕೆ ಮಾಡಬಹುದು.

ಈ ಕುರಿತು ಸುಗ್ರೀವಾಜ್ಞೆಯ ಘೋಷಣೆಗೆ ಸಹಿ ಹಾಕಲು ರಾಜ್ಯಪಾಲ ಬಿ.ಎಸ್. ಕೊಶ್ಯರಿ ನಿರಾಕರಿಸಿದ್ದರು. ಹೀಗಾಗಿ ಫೆಬ್ರವರಿ 24ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಿ ಸದನದ ಅಂಗೀಕಾರ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಈ ಸಂಬಂಧ ವಿಧೇಯಕ ಮಂಡನೆಗೆ ನಿರ್ಧರಿಸಿದ್ದು, ಇದೇ ವಿಷಯವನ್ನು ದೃಢಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್, "ನಾವು ಬಜೆಟ್ ಅಧಿವೇಶನದಲ್ಲಿ ಮಸೂದೆಯನ್ನು ತಂದು ಅದನ್ನು ಅಂಗೀಕರಿಸುತ್ತೇವೆ" ಎಂದು ಹೇಳಿದ್ದಾರೆ.

ಸರ್​​ಪಂಚ್​ ಹುದ್ದೆಗೆ ನೇರ ಚುನಾವಣೆಯ ನಿಯಮವನ್ನು ಈ ಹಿಂದಿನ ಬಿಜೆಪಿ ನೇತೃತ್ವದ ದೇವೇಂದ್ರ ಫಡ್ನವಿಸ್ ಸರ್ಕಾರದ ಅವಧಿಯಲ್ಲಿ ತರಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.