ನವದೆಹಲಿ: ಒಂದು ಬಾರಿಗೆ ಲಾಕ್ಡೌನ್ ತೆರವಾಗಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿದ್ರೆ ಹಲವಾರು ಮುಂಜಾಗ್ರತಾ ಕ್ರಮಗಳೊಂದಿಗೆ ನಮ್ಮ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ಇಂಡಿಗೋ ಏರ್ಲೈನ್ಸ್ನ ಸಿಇಓ ರೊನೊಜಾಯ್ ದತ್ತಾ ಹೇಳಿದ್ದಾರೆ.
ಮಂಗಳವಾರ ಈ ಬಗ್ಗೆ ಮಾತನಾಡಿರುವ ಅವರು ವಿಮಾನಗಳಲ್ಲಿ ಕೆಲಕಾಲ ಊಟ ಕೊಡುವುದನ್ನು ನಿಲ್ಲಿಸಲಾಗುತ್ತದೆ. ವಿಮಾನದ ಶೇ 50ರಷ್ಟು ಆಸನಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದಿರುವ ಅವರು ಇಂತಹ ಕ್ಲಿಷ್ಟಕರದ ಪರಿಸ್ಥಿತಿಯಲ್ಲಿ ಎಲ್ಲಾ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ನಾವು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಹಾಗೂ ಆರೋಗ್ಯ ಆಧಾರಿತ ಸೇವೆಗಳಿಗೆ ಒತ್ತು ನೀಡುತ್ತೇವೆ ಎಂದಿದ್ದು, ಹೊಸ ಪ್ರಕ್ರಿಯೆಗಳನ್ನು ವಿಮಾನಯಾನ ಸೇವೆಯಲ್ಲಿ ಆರಂಭಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಭಾರತದಲ್ಲಿ 21 ದಿನಗಳ ಲಾಕ್ ಮತ್ತೆ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಲಾಕ್ಡೌನ್ ತೆರವಾದ ನಂತರ ಎಲ್ಲಾ ವಾಣಿಜ್ಯ ವಿಮಾನ ಸೇವೆಗಳ ಚೇತರಿಸಿಕೊಳ್ಳಲು ಕಾದುಕುಳಿತಿವೆ.