ETV Bharat / bharat

24 ಗಂಟೆಯಲ್ಲಿ 44,281 ಹೊಸ ಕೇಸ್: 50 ಸಾವಿರಕ್ಕೂ ಅಧಿಕ ಸೋಂಕಿತರು ಒಂದೇ ದಿನ ಡಿಸ್ಚಾರ್ಜ್​​!

author img

By

Published : Nov 11, 2020, 10:46 AM IST

ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಇದೀಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕಳೆದ 24 ಗಂಟೆಯಲ್ಲಿ 50 ಸಾವಿರಕ್ಕೂ ಕಡಿಮೆ ಕೋವಿಡ್ ಪ್ರಕರಣ ದಾಖಲಾಗಿವೆ.

Covid case in india
Covid case in india

ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಇದೀಗ ಕಳೆದ 24 ಗಂಟೆಯಲ್ಲಿ 44,281 ಹೊಸ ಕೇಸ್​ ದಾಖಲಾಗಿರುವುದು ಪತ್ತೆಯಾಗಿದೆ.

  • With 44,281 new #COVID19 infections, India's total cases surge to 86,36,012. With 512 new deaths, toll mounts to 1,27,571

    Total active cases are 4,94,657 after a decrease of 6,557 in the last 24 hrs.

    Total cured cases are 80,13,784 with 50,326 new discharges in the last 24 hrs. pic.twitter.com/9CT7MxxcdP

    — ANI (@ANI) November 11, 2020 " class="align-text-top noRightClick twitterSection" data=" ">

ಸದ್ಯ ಭಾರತದಲ್ಲಿ 86,36,012 ಒಟ್ಟಾರೆ ಸೋಂಕಿತ ಪ್ರಕರಣಗಳಾಗಿದ್ದು, ಸದ್ಯ ದೇಶದಲ್ಲಿ 4,94,657 ಸಕ್ರಿಯ ಪ್ರಕರಣಗಳಿವೆ. ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, 512 ಜನರು ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 50,326 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು, ಈ ಮೂಲಕ ಇಲ್ಲಿಯವರೆಗೆ 80,13,784 ಜನರು ಗುಣಮುಖರಾದಂತೆ ಆಗಿದೆ.

ಇನ್ನು ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ಬರೋಬ್ಬರಿ 7,830 ಹೊಸ ಪ್ರಕರಣ ಕಾಣಿಸಿಕೊಂಡಿವೆ. ಈ ಮೂಲಕ ಡೆಲ್ಲಿಯಲ್ಲಿ 4.5 ಲಕ್ಷ ಕೋವಿಡ್​ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 7,143ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.