ನವದೆಹಲಿ: ವಿಶ್ವವು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಕೊರೊನಾ ಸೋಂಕು ಹರಡುವ ಭೀತಿಯನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರವನ್ನು ವಿಶ್ವಾದ್ಯಂತ ಅನೇಕ ನಾಯಕರು ಮತ್ತು ವಿಶ್ಲೇಷಕರು ಶ್ಲಾಘಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ನಾಯಕ, ಅಮ್ಜದ್ ಅಯೂಬ್ ಮಿರ್ಜಾ, ಮೋದಿಯವರ 21 ದಿನಗಳ ಲಾಕ್‌ಡೌನ್ ಅನ್ನು ಶ್ಲಾಘಿಸಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಗಹಾಗೂ ಗಿಲ್ಗಿಟ್ ಬಾಲ್ಟಿಸ್ತಾನದ ಪರಿಸ್ಥಿತಿ ಹದಗೆಡುತ್ತಿದೆ ಎಂದಿದ್ದಾರೆ.
'ನಾಯಕತ್ವದ ಮತ್ತು ರಾಷ್ಟ್ರೀಯ ಕ್ರಿಯಾ ಯೋಜನೆಯ ಕೊರತೆಯಿಂದಾಗಿ ಪಾಕಿಸ್ತಾನದಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ. ಕೊರೊನಾ ಸೋಂಕಿಗೆ ತುತ್ತಾದವರನ್ನು ಪ್ರತ್ಯೇಕವಾಗಿರಿಸಲು ಪಿಒಕೆಗೆ ಕಳುಹಿಸಲಾಗುತ್ತಿದೆ. ಇದು ಸ್ವೀಕಾರಾರ್ಹವಲ್ಲ. ಏಕೆಂದರೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ವೈರಸ್ ಹರಡುವಿಕೆಯ ಪ್ರಮಾಣ ಹೆಚ್ಚಾಗುತ್ತದೆ ಎಂದಿದ್ದಾರೆ.
ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ನಾಯಕ ಪ್ರಧಾನಿ ಮೋದಿ ನಿರೀಕ್ಷೆಯಂತೆ ರಚನಾತ್ಮಕ ಪಾತ್ರವನ್ನು ವಹಿಸುತ್ತಿದ್ದಾರೆ. 'ಯಾವುದೇ ನಾಗರಿಕರು ಹಿಂದೆ ಉಳಿಯುವಂತಿಲ್ಲ' ಎಂಬ ಅವರ ನೀತಿಯು ವಿರೋಧ ಪಕ್ಷಗಳಿಂದಲೂ ಲಾಕ್ಡೌನ್ಗೆ ಬೆಂಬಲ ಸಿಗುವಂತೆ ಮಾಡಿದೆ ಎಂದು ವಾಷಿಂಗ್ಟನ್ ಮೂಲದ ಗಿಲ್ಗಿಟ್ ಬಾಲ್ಟಿಸ್ತಾನ್ ರಾಜಕೀಯ ನಾಯಕ ಸೆಂಗೆ ಹೆಚ್. ಸೆರಿಂಗ್ ಹೇಳಿದ್ದಾರೆ.
ಮೋದಿಯವರ ಕಠಿಣ ಕ್ರಮವನ್ನು ವಿಶ್ವದಾದ್ಯಂತ ಹಲವರು ಶ್ಲಾಘಿಸಿದ್ದಾರೆ. ಅಮೆರಿಕದ ಉದ್ಯಮಿ ಮಾರ್ಕ್ ಬೆನಿಯೋಫ್, 'ಭಾರತದ ಪ್ರಧಾನಮಂತ್ರಿ ದೇಶದ ಎಲ್ಲಾ 1.3 ಬಿಲಿಯನ್ ಜನರನ್ನು 3 ವಾರಗಳವರೆಗೆ ತಮ್ಮ ಮನೆಯ ಒಳಗೆ ಇರಲು ಆದೇಶಿಸಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ಕೈಗೊಂಡ ಅತಿದೊಡ್ಡ ಮತ್ತು ಅತ್ಯಂತ ಕಠಿಣ ಕ್ರಮ ಇದಾಗಿದ್ದು. ಅಮೆರಿಕದಲ್ಲಿರುವ ನಮಗೂ ಇಂತಹ ಕ್ರಮದ ಅಗತ್ಯವಿದೆ ಎಂದಿದ್ದಾರೆ.