ನವದೆಹಲಿ: ಭಾರತದಲ್ಲಿ 2014ರಲ್ಲಿ ಲೆಪರ್ಡ್ಗಳ ಸಂಖ್ಯೆಯು ಸುಮಾರು 8,000 ಇತ್ತು. ಆದ್ರೆ 2018ರಲ್ಲಿ ಇವುಗಳ ಸಂಖ್ಯೆ 12,000 ಕ್ಕಿಂತ ಹೆಚ್ಚಾಗಿದೆ. ಈ ಮೂಲಕ ಚಿರತೆಗಳ ಸಂತತಿ ಹೆಚ್ಚಾಗಿದೆ ಎಂದು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ಹೇಳಿದ್ದಾರೆ.
ಪರಿಸರ ಸಚಿವಾಲಯವೂ ‘ಭಾರತದಲ್ಲಿ ಚಿರತೆಗಳ ಸ್ಥಿತಿ 2018’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ನಮ್ಮ ದೇಶದ ಪರಿಸರ, ಹುಲಿಗಳು ಮತ್ತು ಸಿಂಹಗಳ ಜೊತೆ ಇವುಗಳಿಗೂ ಕೂಡ ಅನುಕೂಲಕರವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕ್ಯಾಮರಾವನ್ನು ಬಳಸಿಕೊಂಡು ಚೀತಾಗಳ ಗಣತಿಯನ್ನು ಮಾಡಲಾಗಿದೆ. ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದು, 3,421 ಚಿರತೆಗಳಿವೆ. ನಂತರ ಕರ್ನಾಟಕದಲ್ಲಿ1,783 ಮತ್ತು ಮಹಾರಾಷ್ಟ್ರದಲ್ಲಿ 1,690 ಚಿರತೆಗಳಿವೆ ಎಂದು ಅಂದಾಜಿಸಲಾಗಿದೆ.
ಓದಿ:ಹೈದರಾಬಾದ್ನಲ್ಲಿವೆ ಅಪರೂಪದ ಒಂಟೆ ಮರಿಗಳು!
2018 ರ ಹೊತ್ತಿಗೆ ಭಾರತದಲ್ಲಿ 12,852 ಚಿರತೆಗಳಿವೆ, ಇದು 2014ಕ್ಕಿಂತ ಶೇ.60ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಕಳೆದ 120 - 200 ವರ್ಷಗಳಲ್ಲಿ ಚಿರತೆಗಳು ಮಾನವನ ಅತಿಕ್ರಮಣದಿಂದ ಶೇ. 75-90ರಷ್ಟು ಕಡಿಮೆಯಾಗಿವೆ. ಬೇಟೆಯಾಡುವುದು, ಅವುಗಳ ಆವಾಸಸ್ಥಾನವನ್ನು ಆಕ್ರಮಿಸಿಕೊಳ್ಳುವುದು, ನೈಸರ್ಗಿಕ ಬೇಟೆ ಮತ್ತು ಸಂಘರ್ಷಗಳು ಚಿರತೆ ಸಂಖ್ಯೆಗೆ ಪ್ರಮುಖ ಕಾರಣಗಳಾಗಿವೆ.
ಮಧ್ಯ ಭಾರತ ಮತ್ತು ಪೂರ್ವದಲ್ಲಿ ಅತಿ ಹೆಚ್ಚು ಅಂದರೆ 8,071 ಚಿರತೆಗಳು ಕಂಡುಬಂದಿವೆ. ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್, ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಪೂರ್ವ ಘಾಟ್‌ಗಳಲ್ಲಿವೆ. ಕರ್ನಾಟಕ, ತಮಿಳುನಾಡು, ಗೋವಾ ಮತ್ತು ಕೇರಳವನ್ನು ಒಳಗೊಂಡಿರುವ ಪಶ್ಚಿಮಘಟ್ಟ ಪ್ರದೇಶದಲ್ಲಿ 3,387 ಚಿರತೆಗಳಿವೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರವನ್ನು ಒಳಗೊಂಡಿರುವ ಶಿವಾಲಿಕ್ ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ 1,253 ಚಿರತೆಗಳಿವೆ. ಈಶಾನ್ಯ ಬೆಟ್ಟಗಳಲ್ಲಿ ಕೇವಲ 141 ಚಿರತೆಗಳಿವೆ ಎಂದು ತಿಳಿದುಬಂದಿದೆ.