ETV Bharat / bharat

ವಸತಿ ಕ್ಷೇತ್ರದ ಬೆನ್ನು ಮೂಳೆ ಮುರಿದ ಕೊರೊನಾ​: ಶೇ 2ರಷ್ಟು ಬಡ್ಡಿ ದರದ ಸಾಲಕ್ಕೆ ಮನವಿ

ರಿಯಲ್ ಎಸ್ಟೇಟ್, ಮೂಲಸೌಕರ್ಯ ಕ್ಷೇತ್ರ, ಕಚ್ಚಾ ವಸ್ತುಗಳ ಉದ್ಯಮ ಮತ್ತು ಊರಕ ವಸ್ತುಗಳನ್ನು ಒದಗಿಸುವ ಎಂಎಸ್‌ಎಂಇ ವಲಯದ ಸುಮಾರು 12-13 ಕೋಟಿ ಕಾರ್ಮಿಕರ ಉದ್ಯೋಗಗಳು ಅಪಾಯದಲ್ಲಿದೆ. 2008-09ರ ಆರ್ಥಿಕ ಬಿಕ್ಕಟ್ಟಿಗಿಂತ ಈಗಿನ ಬಿಕ್ಕಟ್ಟು ದೊಡ್ಡದಾಗಿದೆ. ಭಾರತದ ವಸತಿ ವಲಯವು ಹಿಂದೆಂದೂ ಎದುರಿಸಿದಂತಹ ಸಮಸ್ಯೆ ವಿರುದ್ಧ ಸೆಣಸಾಡುತ್ತಿದೆ ಎಂದು ಕ್ರೆಡೈ ಅಧ್ಯಕ್ಷ ಜಾಕ್ಸೆ ಶಾ ಹೇಳಿದರು.

housing sector
ರಿಯಲ್ ಎಸ್ಟೇಟ್
author img

By

Published : May 29, 2020, 9:32 PM IST

ನವದೆಹಲಿ: ಈಗಾಗಲೇ ದ್ರವ್ಯತೆ ಕಾಳಜಿ, ಕ್ಷೀಣಿಸಿದ ಬೇಡಿಕೆ ಮತ್ತು ಹೆಚ್ಚಿನ ದಾಸ್ತಾನು ಅನುಭವಿಸುತ್ತಿದ್ದ ಭಾರತದ ವಸತಿ ವಲಯಕ್ಕೆ ಕೊರೊನಾ ವೈರಸ್​ ಹಾಗೂ ದೇಶ ವ್ಯಾಪಿ ಲಾಕ್​ಡೌನ್​​ ಅತಿದೊಡ್ಡ ಬಿಕ್ಕಟ್ಟು ತಂದೊಡ್ಡಿದೆ ಎಂದು ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್‌ ಆಫ್ ಇಂಡಿಯಾ (ಕ್ರೆಡೈ) ಅಧ್ಯಕ್ಷ ಜಾಕ್ಸೆ ಶಾ ಕಳವಳ ವ್ಯಕ್ತಪಡಿಸಿದರು.

ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಶಾ, ಕಳೆದ ನಾಲ್ಕು ವರ್ಷಗಳಲ್ಲಿ ವಸತಿ ವಲಯವು ಹಲವು ಅಡೆತಡೆಗಳನ್ನು ಎದುರಿಸಿಕೊಂಡು ಬರುತ್ತಿದೆ. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನ ಮತ್ತು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಬಹುದೊಡ್ಡ ಅಡ್ಡಿಯನ್ನುಟ್ಟು ಮಾಡಿದ್ದವು ಎಂದರು.

ರಿಯಲ್ ಎಸ್ಟೇಟ್, ಮೂಲಸೌಕರ್ಯ ಕ್ಷೇತ್ರ, ಕಚ್ಚಾ ವಸ್ತುಗಳ ಉದ್ಯಮ ಮತ್ತು ಊರಕ ವಸ್ತುಗಳನ್ನು ಒದಗಿಸುವ ಎಂಎಸ್‌ಎಂಇ ವಲಯದ ಸುಮಾರು 12-13 ಕೋಟಿ ಕಾರ್ಮಿಕರ ಉದ್ಯೋಗಗಳು ಅಪಾಯದಲ್ಲಿದೆ. 2008-09ರ ಆರ್ಥಿಕ ಬಿಕ್ಕಟ್ಟಿಗಿಂತ ಈಗಿನ ಬಿಕ್ಕಟ್ಟು ದೊಡ್ಡದಾಗಿದೆ. ಭಾರತದ ವಸತಿ ವಲಯವು ಹಿಂದೆಂದೂ ಎದುರಿಸಿದಂತಹ ಸಮಸ್ಯೆ ವಿರುದ್ಧ ಸೆಣಸಾಡುತ್ತಿದೆ ಎಂದು ಹೇಳಿದರು.

ವಲಯದ ಉಳಿವಿಗಾಗಿ ತಕ್ಷ ಬೆಂಬಲ ಕೋರಿ ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪತ್ರ ಬರೆಯಲಾಗಿದೆ. ವಲಯದ ಆದಾಯ ಪುನರುಜ್ಜೀವನಕ್ಕೆ ಧನ ಸಹಾಯ ಮಾಡಬೇಕು. ಶೇ 2ರಷ್ಟು ಬಡ್ಡಿ ದರದಲ್ಲಿ ಸಾಲ ಅಥವಾ ಗೃಹ ಸಾಲಗಳ ಮೇಲಿನ ಬಡ್ಡಿ ಮನ್ನಾ ಘೋಷಿಸುವಂತೆ ಮನವಿ ಮಾಡಿದ್ದೇನೆ. ಬಡ್ಡಿ ಮನ್ನಾ ಅಂದಾಜು 8,000 ಕೋಟಿ ರೂ.ಯಷ್ಟು ಆಗಬಹುದು ಎಂದು ಶಾ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.