ETV Bharat / bharat

ಕೈಗೆಟಕುವ ಬೆಲೆಗೆ ಕೋವಿಡ್​ ಟೆಸ್ಟ್​ ಶೋಧಿಸಿದ ಟಾಟಾ: ಮೊದಲ ಬಾರಿಗೆ 'ಕ್ರಿಸ್ಪರ್​' ಪರೀಕ್ಷೆಗೆ ಅಸ್ತು! - ಕ್ಲಸ್ಟರ್ಡ್ ರೆಗ್ಯುಲರ್‌ ಇಂಟರ್‌ಸ್ಪೇಸ್ಡ್ ಶಾರ್ಟ್ ಪಾಲಿಂಡ್ರೊಮಿಕ್ ರಿಪೀಟ್ಸ್

ದೇಶದಲ್ಲಿ ಮೊದಲ ಬಾರಿಗೆ ಸಿಆರ್‍ಎಸ್‍ಪಿಆರ್ ಕೋವಿಡ್-19 ಪರೀಕ್ಷೆಯನ್ನು ವಾಣಿಜ್ಯ ಉದ್ದೇಶ ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ದೊರೆತಿದೆ ಎಂದು ಟಾಟಾ ಗ್ರೂಪ್​ ತಿಳಿಸಿದೆ..

COVID-19 test
ಕೋವಿಡ್ ಟೆಸ್ಟ್​
author img

By

Published : Sep 19, 2020, 10:32 PM IST

Updated : Sep 20, 2020, 6:52 AM IST

ನವದೆಹಲಿ: ಭಾರತದ ಮೊದಲ ಬಾರಿಗೆ ಕ್ಲಸ್ಟರ್ಡ್ ರೆಗ್ಯುಲರ್‌ ಇಂಟರ್‌ಸ್ಪೇಸ್ಡ್ ಶಾರ್ಟ್ ಪಾಲಿಂಡ್ರೊಮಿಕ್ ರಿಪೀಟ್ಸ್ (ಸಿಆರ್‍ಎಸ್‍ಪಿಆರ್) ಕೋವಿಡ್-19 ಪರೀಕ್ಷೆಯನ್ನು ದೇಶದಲ್ಲಿ ಬಳಸಲು ಅನುಮೋದನೆ ನೀಡಿಲಾಗಿದೆ ಎಂದು ಕೇಂದ್ರ ಶನಿವಾರ ತಿಳಿಸಿದೆ.

ಟಾಟಾ ಗ್ರೂಪ್ ಮತ್ತು ಸಿಎಸ್ಐಆರ್-ಐಜಿಐಬಿ ಅಭಿವೃದ್ಧಿಪಡಿಸಿದ ಸಿಆರ್‍ಎಸ್‍ಪಿಆರ್ ಕೋವಿಡ್ -19 ಪರೀಕ್ಷೆಯನ್ನು ಭಾರತದಲ್ಲಿ ಬಳಸಲು ಅನುಮೋದಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಕೋವಿಡ್​-19 ಸೋಂಕಿಗೆ ಕಾರಣವಾಗುವ ಸಾರ್ಸ್​-ಕೋವಿ-2 (SARS-CoV-2) ವೈರಸ್‌ನ ಜೀನೋಮಿಕ್ ಅನುಕ್ರಮವನ್ನು ಪತ್ತೆಹಚ್ಚಲು ನೆರವಾಗುತ್ತದೆ. ಈ ಪರೀಕ್ಷೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಿಆರ್‍ಎಸ್‍ಪಿಆರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಎಂದು ಟಾಟಾ ಸನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಸಿಆರ್‍ಎಸ್‍ಪಿಆರ್ ಕೋವಿಡ್-19 ಪರೀಕ್ಷೆಯನ್ನು ವಾಣಿಜ್ಯ ಉದ್ದೇಶ ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ದೊರೆತಿದೆ ಎಂದು ಟಾಟಾ ಗ್ರೂಪ್​ ತಿಳಿಸಿದೆ. ಕೋವಿಡ್ -19ಗೆ ಕಾರಣವಾಗುವ ವೈರಸ್ ನ ಯಶಸ್ವಿಯಾಗಿ ಪತ್ತೆಹಚ್ಚಲು ವಿಶೇಷವಾಗಿ ಅಳವಡಿಸಲಾಗಿರುವ ಕ್ಯಾಸ್ 9 ಪ್ರೋಟೀನ್ ನಿಯೋಜಿಸುವ ವಿಶ್ವದ ಮೊದಲ ರೋಗನಿರ್ಣಯ ಪರೀಕ್ಷೆಯನ್ನು ಟಾಟಾ ಗ್ರೂಪ್ ಸಿಆರ್‍ಎಸ್​​ಪಿಆರ್ ಪರೀಕ್ಷೆ ಮೂಲಕ ನಡೆಸಲಿದೆ.

ಇದು ಭಾರತೀಯ ವೈಜ್ಞಾನಿಕ ಸಮುದಾಯಕ್ಕೆ ಮಹತ್ವದ ಸಾಧನೆ ಎಂಬುದನ್ನು ಸೂಚಿಸುತ್ತದೆ. ಆರ್& ಡಿಯಿಂದ 100 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ನಿಖರತೆ, ಪ್ರಮಾಣಿತ ಮತ್ತು ವಿಶ್ವಾಸಾರ್ಹ ಪರೀಕ್ಷೆಯಾಗಿದೆ. ಟಾಟಾ ಸಿಆರ್‍ಎಸ್​​ಪಿಆರ್ ಪರೀಕ್ಷೆಯು ಸಾಂಪ್ರದಾಯಿಕ ಆರ್‌ಟಿ-ಪಿಸಿಆರ್ ಪರೀಕ್ಷೆಗಳ ನಿಖರತೆಯ ಮಟ್ಟ ಸಾಧಿಸುತ್ತದೆ. ಇದೊಂದು ತ್ವರಿತ, ಕಡಿಮೆ ವೆಚ್ಚದ ಉಪಕರಣಗಳು ಮತ್ತು ಉತ್ತಮ ಬಳಕೆಯದಾಗಿದೆ. ಸುಲಭವಾಗಿ ಪರೀಕ್ಷೆ ನಡೆಸಬಹುದಾಗಿದೆ.

ಸಿಆರ್‍ಎಸ್‍ಪಿಆರ್ ಕೋವಿಡ್ -19 ಪರೀಕ್ಷೆಯನ್ನು ತ್ವರಿತವಾಗಿ ಮಾಡಬಹುದಾಗಿದೆ. ಆರ್ಥಿಕ ಹೊರೆ ತಗ್ಗಿಸಲು ರಾಷ್ಟ್ರಕ್ಕೆ ನೆರವಾಗಲಿದೆ. ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ ದರದಲ್ಲಿ 'ಮೇಡ್ ಇನ್ ಇಂಡಿಯಾ' ಉತ್ಪನ್ನದೊಂದಿಗೆ ಪರೀಕ್ಷಾ ಕಿಟ್ ಪ್ರವೇಶಿಸಬಹುದು ಎಂಬುದು ಟಾಟಾ ಸಂಸ್ಥೆಯ ಅಭಿಪ್ರಾಯವಾಗಿದೆ.

Last Updated : Sep 20, 2020, 6:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.