ETV Bharat / bharat

ದೇಶದಲ್ಲಿ 1 ಕೋಟಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; 1.45 ಲಕ್ಷ ಸಾವು

ಅಮೆರಿಕ ನಂತರ ಭಾರತ ಒಂದು ಕೋಟಿ ಕೊರೊನಾ ಸೋಂಕಿತರನ್ನು ಹೊಂದಿದ ದೇಶವಾಗಿದೆ. ಇಲ್ಲಿಯವರೆಗೆ ಒಟ್ಟು 95.5 ಲಕ್ಷ ಸೋಂಕಿತರು ಈ ಮಾರಕ ಖಾಯಿಲೆಯಿಂದ ಗುಣಮುಖರಾಗಿದ್ದಾರೆ. ಕಳೆದ ವರ್ಷ ಜನವರಿ 30ರಂದು ಕೇರಳದಲ್ಲಿ ಮೊದಲ ಸೋಂಕಿತ ಪ್ರಕರಣ ದಾಖಲಾಗಿತ್ತು. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 1.45 ಲಕ್ಷ ಜನರು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ.

India's COVID19 case tally crosses the 1-crore mark
ದೇಶದಲ್ಲಿ 1 ಕೋಟಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
author img

By

Published : Dec 19, 2020, 10:10 AM IST

Updated : Dec 19, 2020, 10:41 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ 25,153 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1 ಕೋಟಿಯ ಗಡಿ ದಾಟಿದೆ. ಮೃತರ ಸಂಖ್ಯೆ 1,45,136 ಕ್ಕೆ ಏರಿಕೆಯಾಗಿದೆ.

ಓದಿ: ಮಾರುಕಟ್ಟೆಗಳಲ್ಲಿ ವಿಶೇಷ ಸ್ಥಾನ ಪಡೆದ ಒಡಿಶಾದ ಸಾವಯವ ‘ಅರಿಶಿನ’

ಇದುವರೆಗೆ 95,50,712 ಜನ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 3,08,751 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. (ಸದ್ಯ ಕೇವಲ ಶೇ 3.14 ರಷ್ಟು ಸಕ್ರಿಯ ಪ್ರಕರಣಗಳಿವೆ)

ಡಿಸೆಂಬರ್ 18 ರವರೆಗೆ 16,00,90,514 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ನಿನ್ನೆ ಒಂದೇ ದಿನ 11,71,868 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ದಾಖಲೆ ಸಂಖ್ಯೆಯಲ್ಲಿ ಗುಣಮುಖ:

ದೇಶದಲ್ಲಿ ಕಳೆದ ಮೇ ತಿಂಗಳಲ್ಲಿ 50 ಸಾವಿರ ಸೋಂಕಿತರು ಗುಣಮುಖರಾಗಿದ್ದು, ಡಿಸೆಂಬರ್‌ ವೇಳೆ ರೋಗದಿಂದ ಚೇತರಿಕೆ ಕಂಡವರ ಸಂಖ್ಯೆ 95 ಲಕ್ಷ ದಾಟಿತ್ತು ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ. ಈ ಮೂಲಕ ಗುಣಮುಖರಾಗುವವರ ಸಂಖ್ಯೆ ಸಕ್ರಿಯ ಪ್ರಕರಣಗಳ 30ರಷ್ಟು ಪಟ್ಟು ಹೆಚ್ಚು ಕಾಣುತ್ತಿದೆ.

Last Updated : Dec 19, 2020, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.