ETV Bharat / bharat

ದೇಶದಲ್ಲಿ ಕೊರೊನಾದಿಂದ ಶೇ.92 ರಷ್ಟು ಮಂದಿ ಗುಣಮುಖ.. 'ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ' ಎಂದ ಆರೋಗ್ಯ ಇಲಾಖೆ - ದೇಶದಲ್ಲಿ ಕೊರೊನಾದಿಂದ ಶೇ.92 ರಷ್ಟು ಮಂದಿ ಗುಣಮುಖ

ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಹೊಸ ಕೋವಿಡ್​ ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಮತ್ತೆ ಸ್ವಲ್ಪ ಏರಿಕೆ ಕಂಡುಬಂದಿದೆ. ನಿನ್ನೆ 50,209 ಸೋಂಕಿತರು ಪತ್ತೆಯಾಗಿದ್ದು, 704 ಮಂದಿ ಮೃತಪಟ್ಟಿದ್ದಾರೆ.

India's covid recovery rate rises to 92.09%
ದೇಶದಲ್ಲಿ ಕೊರೊನಾದಿಂದ ಶೇ.92 ರಷ್ಟು ಮಂದಿ ಗುಣಮುಖ
author img

By

Published : Nov 5, 2020, 10:32 AM IST

ನವದೆಹಲಿ: ದೇಶದಲ್ಲಿನ ಒಟ್ಟು ಕೋವಿಡ್​ ಸೋಂಕಿತರ ಪೈಕಿ ಶೇ.92.09 ರಷ್ಟು ಅಂದರೆ 77,11,809 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ ಶೇ.6.42 ರಷ್ಟು (5,27,962) ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

'ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ' ಎಂದು ಆರೋಗ್ಯ ಇಲಾಖೆ ಟ್ವೀಟ್​

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ವೈರಸ್​ನಿಂದ ತಪ್ಪಿಸಿಕೊಳ್ಳಲು ಆಗಾಗ ಕೈ ತೊಳೆಯುತ್ತಿರುವುದೇ ಉತ್ತಮ ಮಾರ್ಗವಾಗಿದೆ. ಹ್ಯಾಂಡ್​ ವಾಶ್​ ಎಷ್ಟು ಮುಖ್ಯ ಎಂಬುದರ ಕುರಿತು ಆರೋಗ್ಯ ಇಲಾಖೆ ತನ್ನ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿ, ಜಾಗೃತಿ ಮೂಡಿಸಿದೆ.

ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಹೊಸ ಕೋವಿಡ್​ ಸೋಂಕಿತರ ಹಾಗೂ ಸಾವಿನ ಸಂಖ್ಯೆಯಲ್ಲಿ ಮತ್ತೆ ಸ್ವಲ್ಪ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 50,209 ಸೋಂಕಿತರು ಪತ್ತೆಯಾಗಿದ್ದು, 704 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 83,64,086 ಹಾಗೂ ಮೃತರ ಸಂಖ್ಯೆ 1,24,315ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ಶೇ.1.49ಕ್ಕೆ ಇಳಿಕೆಯಾಗಿದೆ.

India's covid recovery rate rises to 92.09%
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ನವೆಂಬರ್​ 4ರ ವರೆಗೆ 11,42,08,384 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 12,09,425 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.