ಮುಂಬೈ: ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಚೀನಾದಲ್ಲಿ ಹಲವು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದಾರೆ. ಚೀನಾದ ಒಂದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತದ 27 ವಿದ್ಯಾರ್ಥಿಗಳು ತಮ್ಮ ತಾಯ್ನೆಲಕ್ಕೆ ಬರಲಾರದೇ ಒದ್ದಾಡುತ್ತಿದ್ದಾರೆ.
ನೆರೆಯ ಮಹಾರಾಷ್ಟ್ರ 7 ಸೇರಿದಂತೆ ಭಾರತದ ಒಟ್ಟು 27 ವಿದ್ಯಾರ್ಥಿಗಳು ಚೀನಾದ ವುಹಾನ್ ನಗರದಿಂದ 90 ಕಿಲೋಮೀಟರ್ ದೂರದ ಕ್ಸಿಯಾಂಗ್ನಲ್ಲಿರುವ ಹುಬೈ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಇವರಿಗೆಲ್ಲಾ ಹೃದಯ ಸಂಬಂಧಿ ಕಾಯಿಲೆ ಬಂದಿದೆ. ಅವರೆಲ್ಲ ಅನಾರೋಗ್ಯದಿಂದ ಒದ್ದಾಡುತ್ತಿದ್ದು, ಎಲ್ಲೆಂದರಲ್ಲಿ ನರಳಿ ಬೀಳುತ್ತಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳನ್ನು ದೇಶದಿಂದ ಹೊರಹೋಗುವುದನ್ನು ವಿಶ್ವವಿದ್ಯಾಲಯ ನಿಷೇಧಿಸಿದೆ. ಹೀಗಾಗಿ ಈ ಎಲ್ಲಾ ವಿದ್ಯಾರ್ಥಿಗಳು ಭಾರತಕ್ಕೆ ಮರಳಲಾಗದೆ ಒದ್ದಾಡುತ್ತಿದ್ದು, ತಮ್ಮನ್ನು ತಾಯ್ನೆಲಕ್ಕೆ ಸೇರಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ವಿವಿ ಹಾಗೂ ಚೀನಾ ಸರ್ಕಾರದ ಮುಂದೆ ತಮ್ಮನ್ನು ತಾಯ್ನೆಲಕ್ಕೆ ಕಳಿಸಿಕೊಡಿ ಎಂದು ಬೇಡುತ್ತಿದ್ದಾರೆ.
ಸದ್ಯ ಸಿಕ್ಕಿಬಿದ್ದಿರುವ ಮಹಾರಾಷ್ಟ್ರದ ಎಲ್ಲಾ ಏಳು ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಸಹಾಯ ಕೋರಿದ್ದಾರೆ.