ನವದೆಹಲಿ: ಕೇಂದ್ರ ರೈಲ್ವೆ ಮಾಹಿತಿ ವ್ಯವಸ್ಥೆಗಳು (ಸಿಆರ್ಎಸ್) ಅಭಿವೃದ್ಧಿಪಡಿಸಿದ ಯೂಸರ್ ಡಿಪೋ ಮಾಡ್ಯೂಲ್ (ಯುಡಿಎಂ) ಅನ್ನು ಪಶ್ಚಿಮ ರೈಲ್ವೆಯ ಎಲ್ಲಾ ಬಳಕೆದಾರ ಡಿಪೋಗಳಲ್ಲಿ ಡಿಜಿಟಲ್ ರೂಪದಲ್ಲಿ ಹೊರತಂದಿದೆ.
"ಸಿಆರ್ಎಸ್ ಅಭಿವೃದ್ಧಿಪಡಿಸಿದ ಯೂಸರ್ ಡಿಪೋ ಮಾಡ್ಯೂಲ್ (ಯುಡಿಎಂ) ಅನ್ನು ಪಶ್ಚಿಮ ರೈಲ್ವೆಯ ಎಲ್ಲಾ ಬಳಕೆದಾರ ಡಿಪೋಗಳಲ್ಲಿ ಸೆ.28 ರಂದು ಸದಸ್ಯ ಪಿ ಸಿ ಶರ್ಮಾ ಅವರು ಡಿಜಿಟಲ್ ರೂಪದಲ್ಲಿ ಹೊರತಂದಿದ್ದಾರೆ" ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಭಾರತೀಯ ರೈಲ್ವೆಯ ಎಲ್ಲಾ ವಲಯಗಳಲ್ಲಿ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಸಚಿವಾಲಯ ಹೇಳಿದೆ.
ಸುಧಾರಿತ ನಿರ್ವಹಣೆಯ ಜೊತೆಗೆ ಆರ್ಥಿಕತೆ, ದಕ್ಷತೆ ಮತ್ತು ಪಾರದರ್ಶಕತೆಗೆ ಈ ವ್ಯವಸ್ಥೆಯು ಅನುಕೂಲವಾಗಲಿದೆ. ಇದು ಸುಧಾರಿತ ಸೇವಾ ಮಟ್ಟ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.