ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾಗತಿಕ ಹಣಕಾಸು ಕುರಿತ 'ದಿ ರೈಸ್ ಆಫ್ ಫೈನಾನ್ಸ್: ಕಾರಣಗಳು, ಪರಿಣಾಮಗಳು ಮತ್ತು ಗುಣಪಡಿಸುವಿಕೆ' ಎಂಬ ಪುಸ್ತಕವೊಂದನ್ನು ನಿನ್ನೆ ಅನಾವರಣಗೊಳಿಸಿದ್ದಾರೆ.
ವಿಶ್ವ ಮತ್ತು ಭಾರತೀಯ ಆರ್ಥಿಕತೆ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳಿಗೆ ಈ ಪುಸ್ತಕವು ಪರಿಹಾರವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಜಾಗತಿಕ ಆರ್ಥಿಕತೆಯ ಮೇಲೆ ಏನು ಪರಿಣಾಮ ಬೀರುತ್ತಿದೆ ಹಾಗೂ ಭಾರತೀಯ ಆರ್ಥಿಕತೆ ಮಂದಗತಿಯಲ್ಲಿ ಏಕೆ ಸಾಗುತ್ತಿದೆ ಎಂದು ಹಲವರು ಪ್ರಶ್ನಿಸುವ ವೇಳೆ ಈ ಪುಸ್ತಕ ಬಿಡುಗಡೆಯಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಪುಸ್ತಕದಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.
ಈ ಪುಸ್ತಕವು ಜಾಗತಿಕವಾಗಿ ಆರ್ಥಿಕರಣದ ಏರಿಕೆಯನ್ನು ಪರಿಶೀಲಿಸುತ್ತದೆ. ವಿಶ್ವ ಮತ್ತು ಭಾರತೀಯ ಆರ್ಥಿಕತೆಯು ಪ್ರಸ್ತುತ ಎದುರಿಸುತ್ತಿರುವ ಸನ್ನಿವೇಶಗಳಿಗೆ ಸೂಚಿಸಲಾದ ಪರಿಹಾರಗಳನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ ಎಂದು ಸೀತಾರಾಮನ್ ಹೇಳಿದ್ದಾರೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಆರು ವರ್ಷಗಳಲ್ಲಿ ಕನಿಷ್ಠ ಶೇಕಡಾ 5 ಕ್ಕೆ ಇಳಿದಿದೆ. ಗ್ರಾಹಕರ ಬೇಡಿಕೆಯಲ್ಲಿ ಕ್ಷೀಣಿಸುತ್ತಿರುವುದು, ಜಾಗತಿಕ ಮಾರುಕಟ್ಟೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಹಾಗೂ ಖಾಸಗಿ ಹೂಡಿಕೆಯಿಂದಾಗಿ ಆರ್ಥಿಕ ಬೆಳವಣಿಗಯಲ್ಲಿ ಇಳಿಮುಖವಾಗಿದೆ ಎಂದರು.
ಅಕ್ಟೋಬರ್ನಲ್ಲಿ ಆರ್ಬಿಐ ದೇಶದ ಆರ್ಥಿಕ ಬೆಳವಣಿಗೆಗಾಗಿ ತನ್ನ ವಿತ್ತೀಯ ನೀತಿಯಲ್ಲಿ ಕಡಿತಗೊಳಿಸಿತ್ತು. ಶೇಕಡಾ 6.9ರಷ್ಟು ಇದ್ದದ್ದನ್ನು ಶೇ 6.1 ಕ್ಕೆ ಇಳಿಸಿತ್ತು. ಈ ಮೂಲಕ 2019-20ರ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದೆ. ಕಾರ್ಪೊರೇಟ್ ತೆರಿಗೆ ದರ ಕಡಿತ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂಡವಾಳ ನೀಡುವುದು, ರಿಯಾಲ್ಟಿ ವಲಯವನ್ನು ಹೆಚ್ಚಿಸಲು 25 ಸಾವಿರ ಕೋಟಿ ರೂ.ಗಳ ಅನುದಾನ ನೀಡುವುದು ಸೇರಿದಂತೆ ಅನೇಕ ಕ್ರಮಗಳನ್ನು ಇತ್ತೀಚೆಗಷ್ಟೇ ಸರ್ಕಾರ ಪ್ರಕಟಿಸಿದೆ.