ETV Bharat / bharat

ಶಾಲೆಯ ಕೊಠಡಿಯಲ್ಲಿರಬೇಕಾದ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ: ಸುನೀಲ್ ಗವಾಸ್ಕರ್ ಆತಂಕ

ಇತ್ತೀಚೆಗೆ ದೇಶದಲ್ಲಿ ಹೆಚ್ಚಾಗಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

author img

By

Published : Jan 11, 2020, 11:52 PM IST

Gavaskar says country is in turmoil,ದೇಶ ಗೊಂದಲದಲ್ಲಿದೆ ಎಂದ ಗವಾಸ್ಕರ್
ಸುನೀಲ್ ಗವಾಸ್ಕರ್

ನವದೆಹಲಿ: ನಮ್ಮ ದೇಶ ಸದ್ಯ ಗೊಂದಲದಲ್ಲಿದೆ. ಶಾಲಾ ಕೊಠಡಿಯಲ್ಲಿರಬೇಕಾದ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ ಎಂದು ಇತ್ತೀಚೆಗೆ ದೇಶದಲ್ಲಿ ಹೆಚ್ಚಾಗಿರುವ ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಸುನೀಲ್ ಗವಾಸ್ಕರ್, ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ

ಲಾಲ್​ ಬಹದ್ಧೂರ್ ಶಾಸ್ತ್ರಿ ಮೆಮೋರಿಯಲ್​ನ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವ ವೇಳೆ ಮಾತನಾಡಿದ ಅವರು 'ಶಾಲಾ ಕಾಲೇಜಿನಲ್ಲಿರಬೇಕಾದ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಅವರಲ್ಲಿ ಕೆಲವರು ಆಸ್ಪತ್ರೆ ಸೇರಿದ್ದು, ಅಲ್ಲೇ ಅವರ ಭವಿಷ್ಯ ಕೊನೆಗಾಣುತ್ತಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಈಗಲೂ ಕೊಠಡಿಯಲ್ಲಿದ್ದು, ಅವರು ತಮ್ಮ ಭವಿಷ್ಯದ ಜೊತೆ ಭಾರತದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ' ಎಂದಿದ್ದಾರೆ.

'ನಾವೆಲ್ಲರೂ ಒಟ್ಟಾಗಿರುವಾಗ ಮಾತ್ರ ಒಂದು ರಾಷ್ಟ್ರವಾಗಿ ನಾವು ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ. ನಮ್ಮಲ್ಲಿ ಪ್ರತಿಯೊಬ್ಬರೂ ಭಾರತೀಯರಾಗಿರಬೇಕು, ಇದನ್ನೇ ಕ್ರೀಡೆ ನಮಗೆ ಕಲಿಸಿದೆ. ನಾವು ಒಟ್ಟಿಗೆ ಸೇರಿದಾಗ ಗೆಲುವು ಸಾಧಿಸುತ್ತೇವೆ' ಎಂದು ಗವಾಸ್ಕರ್ ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.