ನವದೆಹಲಿ: ಸೇನಾ ಸಂಘರ್ಷದ ನಂತರ ಲಡಾಖ್‌ನ ವಿವಾದಿತ ಗಲ್ವಾನ್ ಪ್ರದೇಶದಲ್ಲಿ ತಮ್ಮ ಸೇನೆಯನ್ನು ಉಭಯ ದೇಶಗಳು ಹಿಂಪಡೆದಿವೆ ಎಂದು ಭಾರತೀಯ ಸೇನೆ ತಿಳಿಸಿದೆ.
ಭಾರತ ಮತ್ತು ಚೀನಾದ ಸೈನಿಕರು ಗಲ್ವಾನ್ ಪ್ರದೇಶದಲ್ಲಿ ನಿನ್ನೆ ಹಾಗೂ ಇಂದು ಘರ್ಷಣೆ ನಡೆಸಿದ್ದರು. ಚೀನಾ ಒಳ ನುಸುಳಿರುವ ಗಲ್ವಾನ್ ಪ್ರದೇಶದಲ್ಲಿ ಸದ್ಯ ಶೂನ್ಯ ತಾಪಮಾನವಿದ್ದು, ಅತಿ ಎತ್ತರದ ಪರ್ವತ ಪ್ರದೇಶ ಇದಾಗಿದೆ.
ಈ ಜಾಗದಲ್ಲಿ ನಡೆದಿದ್ದ ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಭಾರತೀಯ ಪಡೆಯ 20 ಸೈನಿಕರು ಹುತಾತ್ಮರಾಗಿ, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾರತೀಯ ಪಡೆಗಳು ನಡೆಸಿದ ಪ್ರತಿ ದಾಳಿಯಲ್ಲಿ ಚೀನಾ ಪಡೆಯ 43 ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಈ ಪೈಕಿ ಹಲವರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ವಿವಾದಿತ ಪ್ರದೇಶದಲ್ಲಿ ದಾಳಿ ನಡೆಸಿದ್ದ ಚೀನಾ ಪಡೆಗಳು ಭಾರತೀಯ ಪಡೆಗಳ ಒಬ್ಬ ಸೇನಾಧಿಕಾರಿ ಹಾಗೂ ಇಬ್ಬರು ಯೋಧರನ್ನು ಕೊಂದಿತ್ತು.