ಲಡಾಖ್ : ಭಾರತೀಯ ಸೇನಾ ಬೆಂಗಾವಲು ಪಡೆ ಬುಧವಾರ ಲಡಾಖ್‌ನ ಗಡಿ ಪ್ರದೇಶಕ್ಕೆ ತೆರಳುತ್ತಿದೆ. ನಿನ್ನೆ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ.
ದಶಕಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಅತ್ಯಂತ ಹಿಂಸಾತ್ಮಕ ಘರ್ಷಣೆಯ ನಂತರ ಭಾರತದೊಂದಿಗೆ ತನ್ನ ಹಿಮಾಲಯನ್ ಗಡಿ ವಿವಾದಕ್ಕೆ ಶಾಂತಿಯುತ ಪರಿಹಾರವನ್ನು ಕೋರುತ್ತಿರುವುದಾಗಿ ಚೀನಾ ಬುಧವಾರ ಹೇಳಿದೆ.
ಭಾರತದ ಸೈನಿಕರು ವೀರ ಮರಣಕ್ಕೆ ದೇಶವು ಹೆಮ್ಮೆಪಡುತ್ತದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಡಾಖ್ ಪ್ರದೇಶದಲ್ಲಿ ಸೋಮವಾರ ನಡೆದ ಘರ್ಷಣೆಯು 1975ರ ನಂತರ ಭಾರತ ಮತ್ತು ಚೀನಾ ನಡುವಿನ ಮೊದಲ ಹಿಂಸಾತ್ಮಕ ಘರ್ಷಣೆಯಾಗಿದೆ. ಉದ್ವಿಗ್ನತೆಯನ್ನು ಸರಾಗಗೊಳಿಸುವುದು ಉಭಯ ರಾಷ್ಟ್ರಗಳಿಗೆ ಕಷ್ಟಕರವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಉಭಯ ದೇಶಗಳ ವಿದೇಶಾಂಗ ಮಂತ್ರಿಗಳು ಬುಧವಾರ ದೂರವಾಣಿಯಲ್ಲಿ ಮಾತನಾಡಿದರು. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಎರಡೂ ಕಡೆಯವರು ಸಂವಹನ ಮತ್ತು ಸಮನ್ವಯವನ್ನು ಬಲಪಡಿಸಬೇಕು ಎಂದು ಚೀನಾದ ವಾಂಗ್ ಯಿ ಒತ್ತಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದುವರೆಗೂ ತನ್ನ ಪಡೆಯ ಸೈನಿಕರ ಸಾವು-ನೋವಿನ ಕುರಿತು ಚೀನಾ ಬಹಿರಂಗ ಪಡಿಸಿಲ್ಲ.