ಕುಪ್ವಾರಾ (ಜಮ್ಮು ಮತ್ತು ಕಾಶ್ಮೀರ): ಭಾರತದ ಗಡಿಯೊಳಗೆ ಹಾರಾಟ ನಡೆಸುತ್ತಿದ್ದ ಪಾಕಿಸ್ತಾನದ ಕ್ವಾಡ್ಕಾಪ್ಟರ್ ಡ್ರೋನ್ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನಲ್ಲಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅನುಮಾನಾಸ್ಪದವಾಗಿ ಡ್ರೋನ್ ಹಾರಾಟ ನಡೆಸುತ್ತಿತ್ತು. ಇದನ್ನು ಗಮನಿಸಿದ ಭಾರತೀಯ ಯೋಧರು ಇಂದು ಬೆಳಗ್ಗೆ 8 ಗಂಟೆಗೆ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ.
ಪಾಕಿಸ್ತಾನ ಪಡೆಗೆ ಸೇರಿರುವ ಈ ಡ್ರೋನ್ಅನ್ನು ಚೀನಾ ಮೂಲದ DJI Mavic 2 Pro ಎಂಬ ಕಂಪನಿ ನಿರ್ಮಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.