ನವದೆಹಲಿ: ಬರೋಬ್ಬರಿ 260 ಅಡಿ ಉದ್ದ ಕೇಬಲ್ ಸೇತುವೆ ನಿರ್ಮಾಣ ಮಾಡಿ ಭಾರತೀಯ ಯೋಧರು ದಾಖಲೆ ಬರೆದಿದ್ದಾರೆ. ಸಿಂಧೂ ನದಿಯ ಲೇಹ್ದಲ್ಲಿ ಈ ಸೇತುವೆ ನಿರ್ಮಾಣ ಮಾಡಿರುವುದು ವಿಶೇಷ.
ಕೇವಲ 40 ದಿನಗಳಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಇದಕ್ಕೆ 'ಮೈತಿ- ಸೇತುವೆ' ಎಂದು ನಾಮಕರಣ ಮಾಡಲಾಗಿದೆ. ಇದರ ನಿರ್ಮಾಣಕ್ಕಾಗಿ 500 ಟನ್ಗಳಷ್ಟು ನಿರ್ಮಾಣ ಸಾಮಗ್ರಿ ಬಳಕೆ ಮಾಡಲಾಗಿದೆ. ಇದು ಭಾರತೀಯ ಯೋಧರಿಂದ ನಿರ್ಮಾಣವಾಗಿರುವ ವೈಯಕ್ತಿಕ ದಾಖಲೆಯಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಸೇತುವೆಯನ್ನ 1947-48, 1962, 1971 ಮತ್ತು 1999ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಿದ್ದ ಯೋಧರು ಇದರ ಉದ್ಘಾಟನೆ ಮಾಡಿದ್ದಾರೆ. ಸಮಾರಂಭದಲ್ಲಿ ನಾಯ್ಕ್ ಫನ್ಚೋಕ್ ಅಂಗುಡಸ್ ಮತ್ತು ನಾಯ್ಕ್ ಶೆಜ್ವಾನ್ ಸ್ಟೊಬ್ಡಾನ್ ಹಾಗೂ ಇಬ್ಬರು ಹಿರಿಯ ಲಡಾಕಿ ಯುದ್ಧ ಯೋಧರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.
ಭಾರತೀಯ ಯೋಧರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಕಡಿಮೆ ದಿನಗಳಲ್ಲಿ ಸೇತುವೆ ನಿರ್ಮಾಣವಾಗಿರುವುದಕ್ಕಾಗಿ ಸ್ಥಳೀಯರು ಕೂಡ ಶಬ್ಬಾಸ್ಗಿರಿ ನೀಡಿದ್ದಾರೆ. ಪ್ರಮುಖವಾಗಿ ಈ ಸೇತುವೆ ಹವಾಮಾನ ವೈಪ್ಯರಿತ್ಯ ಉದ್ಭವವಾಗುವ ಸಮಯದಲ್ಲಿ ಸಹಾಯಕ್ಕೆ ಬರುತ್ತದೆ ಎನ್ನಲಾಗಿದೆ.