ETV Bharat / bharat

ಜೋ ಬೈಡೆನ್‌ ಪ್ರಚಾರದ ತಂತ್ರಗಾರ ಈ ನಮ್ಮ ಹೆಮ್ಮೆಯ ಕನ್ನಡಿಗ! - ಮೂರ್ತಿ ಅವರ ಅಮೆರಿಕನ್ ಸರ್ಕಾರಿ ಸೇವೆ

ಡೊನಾಲ್ಡ್‌ ಟ್ರಂಪ್‌ ಅವರ ಪ್ರತಿಸ್ಪರ್ಧಿ ಜೋ ಬೈಡೆನ್‌ ಅವರು ಒಂದು ವೇಳೆ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದಲ್ಲಿ, ಅದರ ಶ್ರೇಯಸ್ಸನ್ನು ಹಂಚಿಕೊಳ್ಳುವ ತಂಡದಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಡಾ. ವಿವೇಕ್‌ ಎಚ್‌. ಮೂರ್ತಿ ಕೂಡ ಒಬ್ಬರಾಗಿರುತ್ತಾರೆ. 2014ರಲ್ಲಿಅಂದಿನ ಅಧ್ಯಕ್ಷ ಬರಾಕ್‌ ಒಬಾಮ ಅವರ ತಂಡದಲ್ಲಿದ್ದ ಅತಿಕಿರಿಯ ವಯಸ್ಸಿನ ವಿವೇಕ್‌ ವೃತ್ತಿಯಲ್ಲಿ ಪ್ರಧಾನ ಶಸ್ತ್ರಚಿಕಿತ್ಸಕ (ಸರ್ಜನ್‌). ಅವರು ಸದ್ಯ ಬೈಡೆನ್‌ ಅವರ ರಣತಂತ್ರ ತಂಡದ ಪ್ರಮುಖರಾಗಿದ್ದಾರೆ.

ಡಾ. ವಿವೇಕ್‌ ಎಚ್‌. ಮೂರ್ತಿ
ಡಾ. ವಿವೇಕ್‌ ಎಚ್‌. ಮೂರ್ತಿ
author img

By

Published : Nov 3, 2020, 4:42 PM IST

ವಾಷಿಂಗ್ಟನ್‌: ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಗೆರೆ ಗ್ರಾಮದವರಾದ 43 ವರ್ಷ ಡಾ. ವಿವೇಕ್‌ ಅವರು ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ವರ್ಷಕ್ಕೊಮ್ಮೆ ತವರಿಗೆ ಬಂದು ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಈಗಲೂ ಭಾರಿ ನೆರವನ್ನು ನೀಡುವ ಸಂಪ್ರದಾಯ ಇರಿಸಿಕೊಂಡಿದ್ದಾರೆ. ಮದ್ದೂರು ತಾಲೂಕಿನ ಶಾಲೆಗಳಿಗೆ 100ಕ್ಕೂ ಹೆಚ್ಚು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿವೇಕ್ ಹಿಂದುಳಿದ ವರ್ಗದ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ್ ಅರಸ್​ ಅವರ ಆಪ್ತ ಸಹವರ್ತಿ ಎಚ್.ಟಿ. ನಾರಾಯಣ್ ಶೆಟ್ಟಿ ಅವರ ಮೊಮ್ಮಗರಾಗಿದ್ದಾರೆ. ತಮ್ಮ ಗ್ರಾಮದ ವ್ಯಕ್ತಿಯೊಬ್ಬರು ಶ್ವೇತಭವನದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದಕ್ಕೆ ಹಳ್ಳಿಗೆರೆ ಗ್ರಾಮಸ್ಥರು ಸಂತೋಷಗೊಂಡಿದ್ದಾರೆ.

ಡಾ. ವಿವೇಕ್‌ ಎಚ್‌. ಮೂರ್ತಿ
ಡಾ. ವಿವೇಕ್‌ ಎಚ್‌. ಮೂರ್ತಿ

ಡಾ ವಿವೇಕ್ ಮೂರ್ತಿ ಅವರು ತಮ್ಮ ತವರೂರನ್ನು ಇಂದಿಗೂ ಮರೆತಿಲ್ಲ. ಅವರು ಪ್ರತಿವರ್ಷ ಹಳ್ಳಿಗೆರೆಗೆ ಭೇಟಿ ನೀಡುತ್ತಾರೆ. ಪೂರ್ವಜರ ಸ್ಥಳ ಹಾಗೂ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಮಿಲಿಯನ್ ಡಾಲರ್​ಗಳನ್ನು ದೇಣಿಗೆ ನೀಡಿದ್ದಾರೆ.

ಡಾ. ಮೂರ್ತಿ ಅವರು ಮೈಸೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇವರು ಡಾ.ಎಚ್.ಎನ್.ಲಕ್ಷ್ಮಿ ನರಸಿಂಹ ಮೂರ್ತಿ ಅವರ ಪುತ್ರ. ಅವರು ಯುಕೆನಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದ್ದಾರೆ. ಡಾ.ಮೂರ್ತಿ ಅವರ ಸಹೋದರಿ ರಶ್ಮಿ ಫ್ಲೋರಿಡಾದಲ್ಲಿ ವೈದ್ಯರಾಗಿದ್ದಾರೆ.

ಡಾ.ವಿವೇಕ್‌ ಅವರು 2011ರಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಾರ್ವಜನಿಕ ಆರೋಗ್ಯ ವಿಷಯಗಳ ಕುರಿತಂತೆ ಅಮೆರಿಕದ ಪ್ರಧಾನ ರಾಷ್ಟ್ರೀಯ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸ್ಕೋಪ್ ಫೌಂಡೇಶನ್:

ಇದು ಅವರ ಸ್ವಂತ ವೈದ್ಯಕೀಯ ಸಂಸ್ಥೆಯಾಗಿದೆ. ಇದರ ಮೂಲಕ ಅವರು ಉಚಿತ ಕಣ್ಣಿನ ಶಿಬಿರಗಳನ್ನು ಆಯೋಜಿಸಿ, ಸುಮಾರು 60 ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಅವರು ಮದ್ದೂರ್ ತಾಲೂಕಿನ ಮತ್ತು ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ 100 ಕಂಪ್ಯೂಟರ್‌ಗಳನ್ನು ಸಹ ನೀಡಿದ್ದಾರೆ.

ವಿವೇಕ್ ಮೂರ್ತಿ ಮತ್ತು ಅವರ ಕುಟುಂಬದವರು ಮಂಡ್ಯ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಕಂಪ್ಯೂಟರ್ ದಾನ ಮಾಡುವ ಅಭಿಲಾಷೆಯನ್ನು ಸಹ ಹೊಂದಿದ್ದಾರೆ. ವಿದ್ಯುತ್ ಸರಬರಾಜು ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಲಿಲ್ಲ.

ಶಾಲೆಗಳಲ್ಲಿ ಕಂಪ್ಯೂಟರ್‌ಗಳನ್ನು ಬಳಸುವಂತೆ ಸೌರ ಕಿಟ್‌ಗಳನ್ನು ಒದಗಿಸಲು ಸ್ಕೋಪ್ ಫೌಂಡೇಶನ್ ನಿರ್ಧರಿಸಿದೆ. ಉಚಿತ ಆರೋಗ್ಯ ರಕ್ಷಣೆ ಮತ್ತು ಸೇವೆಗಳನ್ನು ಸುಧಾರಿಸುವ ಮಾರ್ಗಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆಗಳನ್ನು ನೀಡುವ ಇಚ್ಛೆಯನ್ನು ಡಾ.ಮೂರ್ತಿ ಹೊಂದಿದ್ದಾರೆ.

ಡಾ. ವಿವೇಕ್‌ ಎಚ್‌. ಮೂರ್ತಿ
ಡಾ. ವಿವೇಕ್‌ ಎಚ್‌. ಮೂರ್ತಿ

ಡಾ.ವಿವೇಕ್‌ ಎಚ್‌. ಮೂರ್ತಿ ಅವರ ಜನನ:

ಡಾ. ಮೂರ್ತಿ ಲಂಡನ್​ನಲ್ಲಿ ಜನಿಸಿದರು ಮತ್ತು ಯುಎಸ್​ನಲ್ಲಿ ಬೆಳೆದರು. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಬಿ.ಎ. ಪಡೆದರು.ಯೇಲ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಮಾಡಿದರು. ಯೇಲ್ ಸ್ಕೂಲ್ ಆಫ್ ಮೆಡಿಸಿನ್‌ನಿಂದ ಎಂಡಿ ಮಾಡಿದರು.

ಮೂರ್ತಿ ಅವರ ಗುಂಪನ್ನು ಡಾಕ್ಟರ್ಸ್ ಫಾರ್ ಅಮೆರಿಕ ಎಂದು ಕರೆಯಲಾಗುತ್ತಿತ್ತು. 2008 ಮತ್ತು 2012 ಎರಡರಲ್ಲೂ ಒಬಾಮರ ಚುನಾವಣೆಯ ಪ್ರಚಾರಕರಾಗಿದ್ದರು.

ಅಮೆರಿಕನ್ ಸರ್ಕಾರಿ ಸೇವೆ:

2011ರಲ್ಲಿ ಡಾ.ಮೂರ್ತಿ ಅವರು ಅಮೆರಿಕದ ಅತ್ಯುನ್ನತ ಆರೋಗ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಮಿತಿಯಲ್ಲಿ 20 ಮಂದಿ ತಜ್ಞ ವೈದ್ಯರಿದ್ದರು. ವಿವೇಕ್ ಅದರಲ್ಲಿರುವ ಭಾರತೀಯ ಮೂಲದ ಏಕೈಕ ವ್ಯಕ್ತಿ. ಅವರ ಸಮಿತಿ ನೀಡಿದ ವರದಿಯು, ಸೆನೆಟ್‌ನಲ್ಲಿ ಅಂಗೀಕಾರವಾಗಿತ್ತು. ಅವರು ಯಾಲೆ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಎಂ.ಡಿ. ಪದವಿ ಪಡೆದುಕೊಂಡಿದ್ದಾರೆ. 37 ವಯಸ್ಸಿನ ವಿವೇಕ್, ಅಮೆರಿಕ ಡಾಕ್ಟರ್‌ ಅಸೋಸಿಯೇಷನ್‌ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. ಇದು ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಅಮೆರಿಕ­ದಲ್ಲಿ ಸಿಗುತ್ತಿರುವ ಉನ್ನತ ಮಟ್ಟದ ಗೌರವವಾಗಿದೆ. ಅಧಿಕಾರ ಸ್ವೀಕರಿಸಿದ ನಂತರ ಒಟ್ಟು ನಾಲ್ಕು ವರ್ಷಗಳವರೆಗೆ ಅವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವರು.

2007 ರಿಂದ ಎಪರ್ನಿಕಸ್ ಎಂದು ಕರೆಯಲಾಗುತ್ತಿದ್ದ ಟ್ರಯಲ್ ನೆಟ್‌ವರ್ಕ್‌ಗಳ ಸಹ-ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಯುಎಸ್​ನಲ್ಲಿ ಪ್ರಬಲ ಗನ್ ಲಾಬಿಯಿಂದ ತೀವ್ರ ಪ್ರತಿರೋಧದ ಹೊರತಾಗಿಯೂ, ಒಬಾಮಾ ಅವರು ಅವರನ್ನು 2014 ರಲ್ಲಿ ಸರ್ಜನ್ ಜನರಲ್ ಆಗಿ ನೇಮಿಸಿದ್ದರು. ಸರ್ಜನ್ ಜನರಲ್ ಆಗಿ, ಮೂರ್ತಿ ಸಾರ್ವಜನಿಕ ಆರೋಗ್ಯ ವಿಷಯಗಳ ಬಗ್ಗೆ ರಾಷ್ಟ್ರದ ಉನ್ನತ ವಕ್ತಾರರಾಗಿ ಸೇವೆ ಸಲ್ಲಿಸಿದರು. ಬೋರಿಸ್ ಲುಶ್ನಿಯಾಕ್ ಅವರಿಗೆ ಮೊದಲು ಆಕ್ಟಿಂಗ್ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ಅಧ್ಯಕ್ಷ ಬರಾಕ್ ಒಬಾಮ ಮತ್ತು ಹಾರ್ವರ್ಡ್ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ ಅವರು ನೇಮಕಗೊಂಡ ಅಮೆರಿಕದ ಮಾಜಿ ಸರ್ಜನ್ ಜನರಲ್ ಡಾ.ವಿವೇಕ್ ಮೂರ್ತಿ ಅವರು ಆರ್ಥಿಕ ವಿಷಯಗಳ ಬಗ್ಗೆ ಬಿಡೆನ್‌ಗೆ ಮಾಹಿತಿ ನೀಡಿದವರಲ್ಲಿ ಸೇರಿದ್ದಾರೆ ಎಂದು ವರದಿ ತಿಳಿಸಿದೆ

ಜೋ ಬಿಡನ್ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಯುಎಸ್​ನ ಅಧ್ಯಕ್ಷರಾದರೆ. ಕರ್ನಾಟಕ ಮೂಲದ ಭಾರತೀಯ ಅಮೆರಿಕನ್ ಒಬ್ಬರು ಹೊಸ ಆಡಳಿತದಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.