ETV Bharat / bharat

ಎಲ್ಲಿ ಹೋಯ್ತು AN-32 ವಿಮಾನ? ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಸಿಗದ ಸುಳಿವು! - undefined

ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ AN-32 ವಿಮಾನಕ್ಕಾಗಿ ರಾತ್ರಿಯಿಡೀ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

AN-32
author img

By

Published : Jun 4, 2019, 8:26 AM IST

ನವದೆಹಲಿ: ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ AN-32 ವಿಮಾನಕ್ಕಾಗಿ ರಾತ್ರಿಯಿಡೀ ಹುಡುಕಾಟ ನಡೆಸಿದರೂ ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಅಸ್ಸೋಂನ ಜೊಹ್ರಾತ್​ನಿಂದ ಟೇಕ್​ಆಫ್ ಆಗಿದ್ದ AN-32 ವಿಮಾನ ನಿನ್ನೆ ನಾಪತ್ತೆಯಾಗಿತ್ತು. ಸುಖೊಯ್-30 ವಿಮಾನ ಹಾಗೂ C-130 ವಿಶೇಷ ಕಾರ್ಯಾಚರಣೆ ವಿಮಾನ ಸೇರಿ ಹಲವಾರು ವಿಮಾನಗಳು, ಭಾರತೀಯ ಸೇನೆ, ಐಟಿಬಿಪಿ ಹುಡುಕಾಟ ನಡೆಸುತ್ತಿವೆ. ರಾತ್ರಿಯಿಡೀ ಹುಡುಕಾಟ ನಡೆಸಿದರೂ ವಿಮಾನ ಪತ್ತೆಯಾಗಿಲ್ಲದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

  • An IAF AN-32 took off from Jorhat at 1227 hrs for Menchuka ALG. Aircraft last contacted ground control at 1300 hrs. There was no further contact with the aircraft. Efforts are on to establish the whereabouts of the aircraft. 1/4

    — Indian Air Force (@IAF_MCC) June 3, 2019 " class="align-text-top noRightClick twitterSection" data=" ">

ಮಧ್ಯಾಹ್ನ 12:25 ಅಸ್ಸೋನಿಂದ ಹೊರಟ ವಿಮಾನದಲ್ಲಿ 15 ಮಂದಿ ವಾಯುಪಡೆಯ ಸಿಬ್ಬಂದಿ ಇದ್ದರು. ಈ ವಿಮಾನ ಅರುಣಾಚಲ ಪ್ರದೇಶದ ಮೆಂಚುಕದಲ್ಲಿ ಲ್ಯಾಂಡ್​​ ಆಗಬೇಕಿತ್ತು. ಆದರೆ ಮಧ್ಯಾಹ್ನ 1 ಗಂಟೆಗೆ ಸಂಪರ್ಕ ಕಡಿದುಕೊಂಡಿತ್ತು.

ಇನ್ನು ಅರುಣಾಚಲಪ್ರದೇಶದ ಪಶ್ಚಿಮ ಶಿಯಾಂಗ್​ನಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂಬ ವರದಿಯನ್ನು ವಾಯುಪಡೆ ತಳ್ಳಿಹಾಕಿದೆ. ಇಂತಹ ಯಾವುದೇ ಅವಶೇಷಗಳು ನಮಗೆ ಸಿಕ್ಕಿಲ್ಲ ಎಂದು ಸ್ಪಷ್ಟನೆ ನೀಡಿದೆ.

  • IAF is coordinating with Indian Army, various government and civil agencies to locate the missing aircraft. Search operations will continue from air and by ground parties of Indian Army through the night. 4/4

ಇದೇ ಮೊದಲಲ್ಲ:

2009ರ ಜೂನ್​ನಲ್ಲಿ ವಾಯುಪಡೆಯ AN-32 ವಿಮಾನ ಅರುಣಾಚಲಪ್ರದೇಶದ ಪಶ್ಚಿಮ ಸಿಯಾಂಗ್​ನ ರಿಂಚಿ ಹಿಲ್ಸ್​ ಬಳಿಯ ಹೆಯೊ ಗ್ರಾಮದ ಬಳಿ ಪತನವಾಗಿತ್ತು. ಭದ್ರತಾ ಪಡೆಯ 13 ಸಿಬ್ಬಂದಿ ಈ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವಿಮಾನ ಲ್ಯಾಂಡ್ ಆಗಬೇಕಿದ್ದ ಮೆಚುಕ ಪ್ರದೇಶದಿಂದ 30 ಕಿ.ಮೀ. ದೂರದಲ್ಲಿ ಪತನವಾಗಿತ್ತು.

ಇನ್ನು 2016ರ ಸೆಪ್ಟೆಂಬರ್​ನಲ್ಲಿ ಚೆನ್ನೈನ ಪೋರ್ಟ್​ ಬ್ಲೈರ್​ನಿಂದ AN-32 ವಿಮಾನ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ವಿಮಾನದಲ್ಲಿ 7 ಮಂದಿ ಭದ್ರತಾ ಸಿಬ್ಬಂದಿ ಇದ್ದರು.

Intro:Body:

AN-32

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.