ETV Bharat / bharat

ಆತ್ಮಸಾಕ್ಷಿ ಒಪ್ಪುತ್ತಿಲ್ಲ.. ಆರ್​ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲ್ಲ ಎಂದ ಪ್ರಧಾನಿ ಮೋದಿ...ನಿಟ್ಟುಸಿರು ಬಿಟ್ಟ ಹೈನುಗಾರ - ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದ ಮೋದಿ

ಭಾರತೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಆರ್​ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ
author img

By

Published : Nov 4, 2019, 7:36 PM IST

ಬ್ಯಾಂಕಾಕ್: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸೇರದಿರಲು ಭಾರತ ನಿರ್ಧರಿಸಿದೆ. ಆರ್‌ಸಿಇಪಿ ಒಪ್ಪಂದವು ಅದರ ಮೂಲ ಆಶಯವನ್ನು ಪ್ರತಿಬಿಂಬಿಸುವುದಿಲ್ಲ. ಫಲಿತಾಂಶವು ನ್ಯಾಯೋಚಿತ ಅಥವಾ ಸಮತೋಲಿತವಾಗಿಲ್ಲ ಎಂದು ಭಾರತ ನಿರ್ಧರಿಸಿದೆ.

  • #WATCH Vijay Thakur Singh, Secretary (East),MEA: India conveyed its decision at the summit not to join RCEP (Regional Comprehensive Economic Partnership) Agreement. This reflects both our assessments of current global situation&of the fairness & balance of the agreement. pic.twitter.com/IAT6xiq02R

    — ANI (@ANI) November 4, 2019 " class="align-text-top noRightClick twitterSection" data=" ">

ಭಾರತದಲ್ಲಿ ರೈತರು, ಸಣ್ಣಪುಟ್ಟ ಉದ್ದಿಮೆದಾರರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತಿದ್ದಾರೆ. ಭಾರತೀಯರ ಒಳಿತನ್ನ ಗಮನದಲ್ಲಿ ಇಟ್ಟುಕೊಂಡು ಈ ಒಪ್ಪಂದವನ್ನ ಪರಿಶೀಲನೆ ನಡೆಸಿದಾಗ ನಮಗೆ ಉತ್ತಮ ಫಲಿತಾಂಶ ಸಿಗುತ್ತಿಲ್ಲ. ಹೀಗಾಗಿ ಆರ್​ಸಿಇಪಿ ಒಪ್ಪಂದಕ್ಕೆ ಸೇರಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಮೋದಿ ತಿಳಿಸಿದ್ದಾರೆ.

  • Pham Sanh Chau, Ambassador of Vietnam to India: We understand the concerns raised by India in terms of RCEP (Regional Comprehensive Economic Partnership) but we hope all the concerned parties will be able to sit down & address the differences in a satisfactory way. pic.twitter.com/radds154CU

ಆರ್‌ಸಿಇಪಿ ವಿಷಯದಲ್ಲಿ ಭಾರತ ಎತ್ತಿರುವ ಕಳವಳಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಕುಳಿತುಕೊಂಡು ಇರುವ ವ್ಯತ್ಯಾಸವನ್ನ ಸರಿಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಯೆಟ್ನಾಂ ರಾಯಭಾರಿ ಪಾಮ್ ಸಾನ್ ಚೌ ಹೇಳಿದ್ದಾರೆ.

ದೇಶಾದ್ಯಂತ ಆರ್​ಸಿಇಪಿ ಒಪ್ಪಂದಕ್ಕೆ ವಿರೋಧ ಕೇಳಿಬಂದಿತ್ತು. ಪ್ರತಿಪಕ್ಷ ಕಾಂಗ್ರೆಸ್​ ಕೂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್​ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತೀಯ ರೈತರು ಮತ್ತು ಚಿಕ್ಕಪುಟ್ಟ ಉದ್ದಿಮೆದಾರರು, ಅಂಗಡಿಯವರನ್ನ ಬೀದಿಗೆ ತರುತ್ತಾರೆ ಎಂದು ಟೀಕಿಸಿದ್ದರು.

  • "Make in 🇮🇳" has become “Buy from 🇨🇳”.

    Each year we import Rs. 6,000/ worth of goods from 🇨🇳 for every Indian! A 100% increase since 2014. #RCEP will flood India with cheap goods, resulting in millions of job losses & crippling the 🇮🇳 economy. https://t.co/4DqzARiL6D

    — Rahul Gandhi (@RahulGandhi) November 4, 2019 " class="align-text-top noRightClick twitterSection" data=" ">

ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದರೆ ಲಕ್ಷಾಂತರ ಮಂದಿ ಬೀದಿಗೆ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ. ಈ ಮೂಲಕ ಕೋಟ್ಯಂತರ ಹೈನುಗಾರರ ಹಾಗೂ ಸಣ್ಣ ವ್ಯಾಪಾರಿಗಳ ಹಿತವನ್ನ ಪ್ರಧಾನಿ ಕಾಯುವ ಮೂಲಕ ಮಂದಹಾಸ ಮೂಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.