ETV Bharat / bharat

ರೈತರು, ಕಾರ್ಮಿಕರ ಕಾರ್ಯನಿರ್ವಹಣೆಗೆ ಅನುವು: ಈ ಸಲದ ಲಾಕ್​ಡೌನ್​ ವಿಭಿನ್ನ - COVID-19

ರಾಜ್ಯದಲ್ಲಿನ ರೈತರು ನಮ್ಮ ಮೊದಲ ಆದ್ಯತೆಯಾಗಿದ್ದು, ಅವರಿಗೆ ಯಾವುದೇ ರೀತಿಯ ತೊಂದರೆ ಅಗುವುದಕ್ಕೆ ಬಿಡಲ್ಲ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

Chief Minister BS Yediyurappa
Chief Minister BS Yediyurappa
author img

By

Published : Apr 11, 2020, 5:19 PM IST

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ 30ರವರೆಗೆ ಲಾಕ್‌ಡೌನ್ ಅನಿವಾರ್ಯವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕೆಲ ಸಡಿಲಿಕೆಯೊಂದಿಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಎರಡು ದಿನಗಳಲ್ಲಿ ಲಾಕ್‌ಡೌನ್ ಬಗ್ಗೆ ಮಾರ್ಗಸೂಚಿ ಹೊರಡಿಸುವುದಾಗಿ ಪ್ರಧಾನಿ ತಿಳಿಸಿದ್ದಾರೆ. ಅದರಂತೆ ಮುಂದಿನ 15 ದಿನ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ರೈತರಿಗೆ, ಕೈಗಾರಿಕೆಗಳಿಗೆ, ಕಾರ್ಮಿಕರಿಗೆ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಲಾಗುವುದು. ಬಾಗಶಃ ಸರ್ಕಾರಿ ಕಚೇರಿಗಳನ್ನು ನಡೆಸಲು ಸೂಚನೆ ನೀಡುವುದಾಗಿ ಪ್ರಧಾನಿ ತಿಳಿದ್ದಾರೆ. ಈ ಸಂಬಂಧ ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಲಾಕ್​ಡೌನ್​ ಬಿಗಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ

ಕಾಳಸಂತೆಯಲ್ಲಿ ಅಗತ್ಯ ವಸ್ತು ಮಾರಾಟದ ಬಗ್ಗೆ ಕಟ್ಟುನಿಟ್ಟಿನ ಕ್ರಮ‌ಕೈಗೊಳ್ಳಲು ಪ್ರಧಾನಿ ಸೂಚನೆ ನೀಡಿದ್ದಾರೆ. ಜೊತೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಜೊತೆ ಅನುಚಿತ ವರ್ತನೆ‌ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪ್ರಧಾನಿ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

801 ತಬ್ಲಿಘಿಗಳ ಕ್ವಾರಂಟನ್:

ರಾಜ್ಯದಲ್ಲಿ ಒಟ್ಟು 801 ತಬ್ಲಿಘಿಗಳನ್ನ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದರು. ಈವರಗೆ 50 ವಿದೇಶಿ ತಬ್ಲಿಘಿ ಅವರನ್ನು ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಅವರು ವೀಸಾ ನಿಯಮ ಉಲ್ಲಂಘನೆ ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬೆಂಗಳೂರಿನಲ್ಲಿ 269 ತಬ್ಲಿಘಿಯರನ್ನು ಕ್ವಾರಂಟೈನ್ ಮಾಡಲಾಗಿದೆ. 472 ತಬ್ಲೀಘಿಯರನ್ನು ಇತರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

ಈವರೆಗೆ ಲಾಕ್​ಡೌನ್ ಉಲ್ಲಂಘಿಸಿದ 1,558 ಪ್ರಕರಣ ದಾಖಲಿಸಲಾಗಿದೆ‌. 2,698 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಒಟ್ಟು 43,432 ವಾಹನಗಳನ್ನು ರಾಜ್ಯಾದ್ಯಂತ ಜಪ್ತಿ‌ ಮಾಡಲಾಗಿದ್ದು, ರೈತರಿಗೆ ಸಮಸ್ಯೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ನಮ್ಮ ಮೊದಲ ಆದ್ಯತೆ. ರೈತರಿಗೆ ನೋವಾಗಲು ಬಿಡುವುದಿಲ್ಲ. ಅವರಿಗೆ ಕಷ್ಟವಾದರೆ ನನಗೆ ಅಥವಾ ಸಚಿವರಿಗೆ ಕರೆ ಮಾಡಿ ಹೇಳಬಹುದು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.