ನವದೆಹಲಿ : ಪೂರ್ವ ಲಡಾಖ್‌ನ ಮೂರು ಸ್ಥಳಗಳಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂದೆ ಸರಿದಿದ್ದರೂ ಸಹ ಗಡಿ ನಿಯಂತ್ರಣಾ ರೇಖೆ ಬಳಿ ಇರುವ 10 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಫಿರಂಗಿ ಮತ್ತು ಟ್ಯಾಂಕ್ ರೆಜಿಮೆಂಟ್‌ಗಳನ್ನು ಚೀನಾ ಹಿಂದಕ್ಕೆ ಕರೆಸಿಕೊಂಡಾಗ ಮಾತ್ರ ಗಡಿಯಲ್ಲಿನ ಉದ್ವಿಗ್ನತೆ ಸಂಪೂರ್ಣ ದೂರವಾಗಲಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತ ಮತ್ತು ಚೀನಾ ನಡುವಿನ ಮಾತುಕತೆ ನಂತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕ್ರಮವಾಗಿ ಭಾರತ ಮತ್ತು ಚೀನಾದ ಸೈನಿಕರು ಗಾಲ್ವಾನ್ ಕಣಿವೆ ಪ್ರದೇಶ ಸೇರಿ ಮೂರು ಸ್ಥಳಗಳಿಂದ ಹಿಂದಕ್ಕೆ ಸರಿದಿದ್ದರು.
-
India wants China to de-induct its 10,000 troops, heavy weapons deployed along the LAC
— ANI Digital (@ani_digital) June 10, 2020 " class="align-text-top noRightClick twitterSection" data="
Read @ANI Story | https://t.co/BiZw8STaNz pic.twitter.com/1d6ms3rtMY
">India wants China to de-induct its 10,000 troops, heavy weapons deployed along the LAC
— ANI Digital (@ani_digital) June 10, 2020
Read @ANI Story | https://t.co/BiZw8STaNz pic.twitter.com/1d6ms3rtMYIndia wants China to de-induct its 10,000 troops, heavy weapons deployed along the LAC
— ANI Digital (@ani_digital) June 10, 2020
Read @ANI Story | https://t.co/BiZw8STaNz pic.twitter.com/1d6ms3rtMY
ಪೂರ್ವ ಲಡಾಖ್ ವಲಯದಲ್ಲಿ ಸೈನಿಕರು ಹಿಂದಕ್ಕೆ ಹೋಗಲು ಪ್ರಾರಂಭಿಸಿದ್ದಾರೆ. ಆದರೆ, ಗಡಿಯುದ್ದಕ್ಕೂ ನಿಯೋಜನೆಗೊಂಡಿರುವ10 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಚೀನಾ ಹಿಂದಕ್ಕೆ ಕರೆಸಿಕೊಳ್ಳುವುದು ಮುಖ್ಯ ಎಂದು ಭಾರತ ತಿಳಿಸಿದೆ.
ಭಾರೀ ಫಿರಂಗಿ, ಟ್ಯಾಂಕ್‌ಗಳು ಮತ್ತು ಯುದ್ಧ ವಾಹನಗಳ ಜೊತೆಗೆ ಹೆಚ್ಚಿನ ಸೈನ್ಯವನ್ನು ನಿಯೋಜಿಸಲಾಗಿದೆ. ಚೀನಾದ ನಿಯೋಜನೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಚಟುವಟಿಕೆಗಳನ್ನು ತಡೆಯಲು ಲಡಾಖ್ ವಲಯದಲ್ಲಿ ಭಾರತ ಕೂಡ 10 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ.