ETV Bharat / bharat

ಭಾರತ-ಯುಎಸ್ ಮಾತುಕತೆ ; ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ - ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚೆ

ವರ್ಚುವಲ್ ಫಾರಿನ್ ಆಫೀಸ್ ಸಮಾಲೋಚನೆಯ ಸಮಯದಲ್ಲಿ, ಇಬ್ಬರು ಅಧಿಕಾರಿಗಳು ಪೂರ್ಣ ಪ್ರಮಾಣದ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಿದರು..

ಭಾರತ-ಯುಎಸ್ ಮಾತುಕತೆ
ಭಾರತ-ಯುಎಸ್ ಮಾತುಕತೆ
author img

By

Published : Jul 8, 2020, 4:38 PM IST

ವಾಷಿಂಗ್ಟನ್ : ಭಾರತ ಮತ್ತು ಯುಎಸ್ ನಡುವೆ ನಡೆದ ಮಾತುಕತೆಯಲ್ಲಿ ಉಭಯ ಪಕ್ಷಗಳು ಪೂರ್ಣ ಪ್ರಮಾಣದ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿವೆ. ಮುಕ್ತ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್‌ ಖಾತರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ತಮ್ಮ ಬದ್ಧತೆ ಪುನರುಚ್ಚರಿಸಿವೆ.

ರಾಜಕೀಯ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ ಡೇವಿಡ್ ಹೇಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ನಿಯಮಗಳ ಆಧಾರಿತ ಅಂತಾರಾಷ್ಟ್ರೀಯ ಆದೇಶ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ರಾಜತಾಂತ್ರಿಕ ಸಹಕಾರ, ಕಡಲ ಸುರಕ್ಷತೆ ಮತ್ತು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಜಾಗತಿಕವಾಗಿ ಪ್ರತಿಕ್ರಿಯಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಚುವಲ್ ಫಾರಿನ್ ಆಫೀಸ್ ಸಮಾಲೋಚನೆಯ ಸಮಯದಲ್ಲಿ, ಇಬ್ಬರು ಅಧಿಕಾರಿಗಳು ಪೂರ್ಣ ಪ್ರಮಾಣದ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರದ ಬಗ್ಗೆ ಚರ್ಚಿಸಿದರು. ತಮ್ಮ ನಾಯಕರು ಸ್ಥಾಪಿಸಿದ ಯುಎಸ್-ಇಂಡಿಯಾ ಸಮಗ್ರ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ದೃಢವಾದ ಕ್ರಮಗಳನ್ನು ಅಭಿವೃದ್ಧಿಪಡಿಸಿದರು ಎಂದು ತಿಳಿಸಿದೆ.

ಔಷಧ ಮತ್ತು ಲಸಿಕೆ ಅಭಿವೃದ್ಧಿಯ ಸಹಕಾರ ಸೇರಿದಂತೆ ಯುಎಸ್-ಇಂಡಿಯಾ ಆರೋಗ್ಯ ಸಹಭಾಗಿತ್ವವು ಕೋವಿಡ್​ನಿಂದ ವಿಶ್ವದ ಚೇತರಿಕೆಗೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಒಪ್ಪಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.