ETV Bharat / bharat

ಇಂದು ಭಾರತದ ನೇತೃತ್ವದಲ್ಲಿ ಶಾಂಘೈ ಸಹಕಾರ ಸಂಘಟನೆ ರಾಷ್ಟ್ರಗಳ ಸಭೆ - ಕೋವಿಡ್-19

ಭಾರತವು ಈ ಶಾಂಘೈ ಸಭೆಯನ್ನು ಶಾಂತಿ, ಭದ್ರತೆ, ವ್ಯಾಪಾರ, ಆರ್ಥಿಕತೆ ಮತ್ತು ಸಂಸ್ಕೃತಿ ಕ್ಷೇತ್ರಗಳ ಸಹಕಾರ ಉತ್ತೇಜಿಸುವ ಪ್ರಮುಖ ಪ್ರಾದೇಶಿಕ ಸಂಸ್ಥೆಯಾಗಿ ಪರಿಗಣಿಸಿದೆ. ಎಸ್​​ಎಸ್​​ಸಿಒ ರಾಷ್ಟ್ರಗಳ ಜೊತೆ ಸಹಕಾರ ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದು ತಿಳಿಸಿದೆ.

india-to-host-sco-heads-of-government-meet-today
ಭಾರತ ನೇತೃತ್ವದಲ್ಲಿ ಶಾಂಘೈ ಸಹಕಾರ ಸಂಘಟನೆ ರಾಷ್ಟ್ರಗಳ ಸಭೆ
author img

By

Published : Nov 30, 2020, 6:31 AM IST

ನವದೆಹಲಿ: ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧ್ಯಕ್ಷತೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್​​​​​​​​​​​​ಸಿಒ) ಸರ್ಕಾರದ ಮುಖ್ಯಸ್ಥರ ಶೃಂಗಸಭೆ ನಡೆಯಲಿದೆ.

2017ರಲ್ಲಿ ಈ ಸಂಘಟನೆಯ ಪೂರ್ಣ ಸದಸ್ಯತ್ವವನ್ನು ಪಡೆದ ನಂತರ ಇದೇ ಮೊದಲ ಬಾರಿಗೆ ಭಾರತದ ಅಧ್ಯಕ್ಷತೆಯಲ್ಲಿ ಶೃಂಗಸಭೆ ನಡೆಯಲಿದೆ ಎಂದು ಎಂಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್​​ಸಿಒ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ದೇಶಗಳ ಪ್ರಧಾನ ಮಂತ್ರಿಗಳು ಈ ಸಭೆಯಲ್ಲಿ ವರ್ಚುಯಲ್ ಮೂಲಕ ಭಾಗಿಯಾಗಲಿದ್ದಾರೆ. ಅದೇ ರೀತಿ, ಪಾಕಿಸ್ತಾನದಿಂದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಎಸ್‌ಸಿಒ ಸದಸ್ಯ ರಾಷ್ಟ್ರಗಳಲ್ಲದೇ, ಎಸ್‌ಸಿಒದ ನಾಲ್ಕು ಪರಿವೀಕ್ಷಣ ರಾಷ್ಟ್ರಗಳಾದ ಅಫ್ಘಾನಿಸ್ತಾನದ ಅಧ್ಯಕ್ಷ, ಇರಾನ್‌ನ ಉಪಾಧ್ಯಕ್ಷ, ಬೆಲಾರಸ್‌ನ ಪ್ರಧಾನ ಮಂತ್ರಿ ಮತ್ತು ಮಂಗೋಲಿಯಾದ ಉಪ ಪ್ರಧಾನಿ ಸಹ ಭಾಗಿಯಾಗಲಿದ್ದಾರೆ. ತುರ್ಕಮೆನಿಸ್ತಾನವನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದ್ದು, ಸಚಿವ ಸಂಪುಟದ ಉಪಾಧ್ಯಕ್ಷರು ಪ್ರತಿನಿಧಿಸಲಿದ್ದಾರೆ.

ಈ ಸಭೆಯಲ್ಲಿ ಎಸ್​​ಸಿಒದ ಎರಡು ಪ್ರಮುಖ ರಚನೆಗಳಾದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆಯ ಕಾರ್ಯನಿರ್ವಾಹಕ ನಿರ್ದೇಶಕರು ಪ್ರತಿನಿಧಿಸಲಿದ್ದಾರೆ.

ಭಾರತವು ಶಾಂಘೈ ಸಭೆಯನ್ನು ಶಾಂತಿ, ಭದ್ರತೆ, ವ್ಯಾಪಾರ, ಆರ್ಥಿಕತೆ ಮತ್ತು ಸಂಸ್ಕೃತಿ ಕ್ಷೇತ್ರಗಳ ಸಹಕಾರವನ್ನು ಉತ್ತೇಜಿಸುವ ಪ್ರಮುಖ ಪ್ರಾದೇಶಿಕ ಸಂಸ್ಥೆಯಾಗಿ ಪರಿಗಣಿಸಿದೆ. ಎಸ್​​ಎಸ್​​ಸಿಒ ರಾಷ್ಟ್ರಗಳ ಜೊತೆ ಸಹಕಾರ ವಿಸ್ತರಿಸುಲು ಭಾರತ ಬದ್ಧವಾಗಿದೆ ಎಂದು ತಿಳಿಸಿದೆ.

ಕೋವಿಡ್-19ಯಿಂದ ಎದುರಾಗಿರುವ ಆರ್ಥಿಕ ಸವಾಲುಗಳನ್ನು ನಿವಾರಿಸಲು ಭಾರತದ ಕಾರ್ಯಕ್ರಮಗಳು ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಸಹಕಾರಿಯಾಗುತ್ತವೆ ಎಂದು ಭಾವಿಸುತ್ತೇವೆ. ಆದರೆ, ಸಂಘಟನೆಯನ್ನು ಬಲಪಡಿಸುವ ನಮ್ಮ ನಿರಂತರ ಬದ್ಧತೆಯನ್ನು ಇದು ತೋರಿಸಲಿದೆ. ಜಂಟಿ ಸಂವಹನವನ್ನು ಅಳವಡಿಸಿಕೊಳ್ಳುವುದರೊಂದಿಗೆ ಶೃಂಗಸಭೆ ಕೊನೆಗೊಳ್ಳಲಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.