ನವದೆಹಲಿ: ಕೊರೊನಾ ವೈರಸ್ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 564ಕ್ಕೆ ಏರಿಕೆಯಾಗಿದ್ದು, ಹಾಂಕಾಂಗ್, ಮಕಾವೋ ಹಾಗೂ ತೈವಾನ್ ಹೊರತುಪಡಿಸಿ, ಚೀನಾದ ಪಾಸ್‌ಪೋರ್ಟ್ ಹೊಂದಿರುವ ವಿದೇಶಿ ಪ್ರಜೆಗಳಿಗೆ ಫೆಬ್ರವರಿ 5 ರ ಒಳಗೆ ನೀಡಲಾದ ಎಲ್ಲಾ ವೀಸಾಗಳನ್ನು ಭಾರತದ ವಲಸೆ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.
ವಿಶ್ವದ ಯಾವುದೇ ಭಾಗದಿಂದ ಭಾರತಕ್ಕೆ ಪ್ರಯಾಣ ಮಾಡಬಯಸುವ, ಚೀನಾದ ಪಾಸ್‌ಪೋರ್ಟ್ ಹೊಂದಿರುವವರಿಗೆ ಫೆ.5 ರ ಒಳಗೆ ನೀಡಲಾಗಿರುವ, ಅಂದರೆ ಪ್ರಸ್ತುತ ಚಾಲ್ತಿಯಲ್ಲಿರುವ ಸಾಮಾನ್ಯ ವೀಸಾ, ಇ-ವೀಸಾ ಸೇರಿದಂತೆ ಯಾವ ವೀಸಾಗಳು ಮಾನ್ಯವಾಗುವುದಿಲ್ಲ. ಭಾರತೀಯ ವೀಸಾಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಬಯಸುವವರು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಅಥವಾ ಶಾಂಘೈ ಮತ್ತು ಗುವಾಂಗ್ ದೂತಾವಾಸಗಳನ್ನು ಸಂಪರ್ಕಿಸಬಹುದುಎಂದು ಭಾರತದ ಆರೋಗ್ಯ ಸಚಿವಾಲಯ ತಿಳಿಸಿದೆ.
ಚೀನಾದಲ್ಲಿನ ಭಾರತೀಯ ರಾಯಭಾರ ಕಚೇರಿಯು ಈಗಾಗಲೇ ಹಾಟ್‌ಲೈನ್ ಸಂಖ್ಯೆಗಳಾದ (ಸಹಾಯವಾಣಿ) +8618610952903, +8618612083629 ಹಾಗೂ -helpdesk.beijing@mea.gov.in ಇಮೇಲ್ ಐಡಿಯನ್ನು ನೀಡಿದ್ದು, ಯಾವುದೇ ಸಹಾಯದ ಅಗತ್ಯವಿದ್ದರೆ ಇವುಗಳ ಮೂಲಕ ಸಂಪರ್ಕಿಸಬಹುದು ಎಂದು ಸಚಿವಾಲಯ ಹೇಳಿದೆ.