ETV Bharat / bharat

ದೇಶದಲ್ಲಿ ಕೊರೊನಾ ರೌದ್ರನರ್ತನ... ಮಹಾಮಾರಿಗೆ 40 ಸಾವಿರಕ್ಕೂ ಹೆಚ್ಚು ಮಂದಿ ಬಲಿ..!

ಭಾರತದಲ್ಲಿ ಕೋವಿಡ್​ ಸೋಂಕಿತರ ಸಂಖ್ಯೆ 19,64,537ಕ್ಕೆ ಹಾಗೂ ಮೃತರ ಸಂಖ್ಯೆ 40,699ಕ್ಕೆ ಏರಿಕೆಯಾಗಿದೆ.

Total number of corona cases in India
ಕೊರೊನಾ
author img

By

Published : Aug 6, 2020, 10:09 AM IST

ನವದೆಹಲಿ: ಜಾಗತಿಕ ಮಹಾಮಾರಿ ಕೊರೊನಾ ಭಾರತದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಇದೀಗ ಮೃತರ ಸಂಖ್ಯೆ 40 ಸಾವಿರ ಗಡಿ ದಾಟಿದೆ.

ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 56,282 ಸೋಂಕಿತರು ಪತ್ತೆಯಾಗಿದ್ದು, 904 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 19,64,537ಕ್ಕೆ ಹಾಗೂ ಮೃತರ ಸಂಖ್ಯೆ 40,699ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 13,28,337 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 5,95,501 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Total number of corona cases in India
ಕೋವಿಡ್​ ಟೆಸ್ಟ್​ ಅಪಡೇಟ್ಸ್​​

ಆಗಸ್ಟ್​ 5ರ ವರೆಗೆ 2,21,49,351 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 6,64,949 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.