ETV Bharat / bharat

ದೇಶದಲ್ಲಿ 24 ಗಂಟೆಯಲ್ಲಿ 61,871 ಕೋವಿಡ್​ ಕೇಸ್: 1,033 ಮಂದಿ ಸೋಂಕಿಗೆ ಬಲಿ

ಮಹಾಮಾರಿ ಕೊರೊನಾ ವೈರಸ್​ ಹಾವಳಿ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 61 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗಿವೆ.

COVID19
COVID19
author img

By

Published : Oct 18, 2020, 10:40 AM IST

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 61,871 ಕೋವಿಡ್​ ಕೇಸ್​ ಪತ್ತೆಯಾಗಿವೆ. ಇದರ ಜತೆಗೆ 1,033 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.

ಸದ್ಯ ದೇಶದಲ್ಲಿ 74,94,552 ಕೋವಿಡ್​ ಕೇಸ್​ಗಳಿದ್ದು, ಇದರಲ್ಲಿ 7,83,311 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ 65,97,210 ಜನರು ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದು, 1,14,031 ಜನರು ಸಾವನ್ನಪ್ಪಿದ್ದಾರೆ. ನಿನ್ನೆ ಮಹಾರಾಷ್ಟ್ರದಲ್ಲಿ 10,259 ಪ್ರಕರಣ, ಕೇರಳದಲ್ಲಿ 9,016, ಕರ್ನಾಟಕ 7,184, ತಮಿಳುನಾಡು 4,295, ಪಶ್ಚಿಮ ಬಂಗಾಳ 3,865 ಪ್ರಕರಣ ದಾಖಲಾಗಿವೆ.

ಇನ್ನು ವಿಶ್ವದಾದ್ಯಂತ ನಿನ್ನೆ ಒಂದೇ ದಿನ 4 ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಭಾರತ, ಅಮೆರಿಕ ಹಾಗೂ ಬ್ರೇಜಿಲ್​​ಗಳಿಗಿಂತಲೂ ಯುರೋಪ್​ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಕಾಣಿಸಿಕೊಂಡಿವೆ. ಅಮೆರಿಕದಲ್ಲಿ ಇದೀಗ 8,342,665 ಕೋವಿಡ್​ ಸೋಂಕಿತ ಪ್ರಕರಣಗಳಿದ್ದು, ಭಾರತದಲ್ಲಿ 74,94,551 ಕೋವಿಡ್​​ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.