ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆ 75 ಲಕ್ಷ ಗಡಿ ದಾಟಿರುವ ಭಾರತದಲ್ಲಿ ಹೊಸ ಕೇಸ್ಗಳ ಹಾಗೂ ಸಾವಿನ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ. ನಿನ್ನೆ 10 ಲಕ್ಷ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದರೂ ಕೂಡ ಅರ್ಧ ಲಕ್ಷಕ್ಕಿಂತಲೂ ಕಡಿಮೆ ಮಂದಿಯ ವರದಿ ಪಾಸಿಟಿವ್ ಬಂದಿದೆ.
ದೇಶದ ಕೊರೊನಾಪೀಡಿತ ಟಾಪ್ 5 ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಲ್ಲಿ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ ತಗ್ಗುತ್ತಿರುವುದಾಗಿ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
-
Trend of daily cases in 5 most affected states-Maharashtra, Karnataka,Kerala,Andhra Pradesh & Tamil Nadu-reveals stages of decline of active cases. It mirrors steady decrease in active cases in India with caseload being sustained below 8 lakhs for 3 days in a row: Health Ministry pic.twitter.com/BRIowIqE5N
— ANI (@ANI) October 20, 2020 " class="align-text-top noRightClick twitterSection" data="
">Trend of daily cases in 5 most affected states-Maharashtra, Karnataka,Kerala,Andhra Pradesh & Tamil Nadu-reveals stages of decline of active cases. It mirrors steady decrease in active cases in India with caseload being sustained below 8 lakhs for 3 days in a row: Health Ministry pic.twitter.com/BRIowIqE5N
— ANI (@ANI) October 20, 2020Trend of daily cases in 5 most affected states-Maharashtra, Karnataka,Kerala,Andhra Pradesh & Tamil Nadu-reveals stages of decline of active cases. It mirrors steady decrease in active cases in India with caseload being sustained below 8 lakhs for 3 days in a row: Health Ministry pic.twitter.com/BRIowIqE5N
— ANI (@ANI) October 20, 2020
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 46,791 ಸೋಂಕಿತರು ಪತ್ತೆಯಾಗಿದ್ದು, 587 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 75,97,064 ಹಾಗೂ ಮೃತರ ಸಂಖ್ಯೆ 1,15,197ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 67,33,329 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 7,48,538 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 19ರ ವರೆಗೆ 9,61,16,771 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,32,795 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.