ETV Bharat / bharat

Covid Update: ಕಳೆದ 24 ಗಂಟೆಯಲ್ಲಿ 20,550 ಹೊಸ ಕೊರೊನಾ ಪ್ರಕರಣ ವರದಿ

ಕಳೆದೊಂದು ದಿನದಲ್ಲಿ ದೇಶಾದ್ಯಂತ 20,550 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. 286 ಜನ ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,48,439ಕ್ಕೆ ಏರಿಕೆಯಾಗಿದೆ.

India reports 20,550 new COVID-19 cases
ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ
author img

By

Published : Dec 30, 2020, 10:23 AM IST

ನವೆದೆಹಲಿ: ದೇಶದಲ್ಲಿ ನಿನ್ನೆಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಸೋಂಕಿತ ಪ್ರಕರಣಗಳು ಏರಿಕೆ ಕಂಡಿವೆ.

ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 20,550 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,02,44,853 ಕ್ಕೆ ಏರಿದೆ.

ಓದಿ: ರೂಪಾಂತರ ಕೊರೊನಾ ಅಬ್ಬರ : 20 ಮಂದಿಗೆ ತಗುಲಿದ ಪರಿವರ್ತಿತ ಸೋಂಕು

286 ಜನ ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,48,439 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 26,572 ಜನ ಕೋವಿಡ್​-19ನಿಂದ ಗುಣಮುಖರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 98,34,141 ತಲುಪಿದೆ. ಸದ್ಯ 2,62,272 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.

ಓದಿ: ‘ಭಾರತದ ಲಸಿಕೆಗಳು ಕೊರೊನಾ ರೂಪಾಂತರದ ವಿರುದ್ಧ ಕಾರ್ಯನಿರ್ವಹಿಸುತ್ತವೆ’

ನಿನ್ನೆ 11,20,281 ಮಾದರಿಗಳನ್ನು ಪರೀಕ್ಷಿಸಿದ್ದು, ಡಿಸೆಂಬರ್ 29 ರವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳು 17,09,22,030 ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.