ನವದೆಹಲಿ: ಕೆಲ ತಿಂಗಳ ಹಿಂದೆ ಲಕ್ಷ ಸನಿಹ ಕೊರೊನಾ ಕೇಸ್ಗಳು ವರದಿಯಾಗುತ್ತಿದ್ದ ಭಾರತದಲ್ಲಿ ಸೋಮವಾರ ಅತಿ ಕಡಿಮೆ ಅಂದರೆ 10,064 ಸೋಂಕಿತರು ಪತ್ತೆಯಾಗಿದ್ದು, 137 ಮಂದಿ ವೈರಸ್ಗೆ ಬಲಿಯಾಗಿದ್ದಾರೆ.
ದೇಶದಲ್ಲೀಗ ಸೋಂಕಿತರ ಸಂಖ್ಯೆ 1,05,81,837 ಹಾಗೂ ಮೃತರ ಸಂಖ್ಯೆ 1,52,556ಕ್ಕೆ ಏರಿಕೆಯಾಗಿದೆ. ಆದರೆ, ಕೋವಿಡ್ ಪೀಡಿತ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾವು - ನೋವಿನ ಸಂಖ್ಯೆ ಕಡಿಮೆಯೇ ಇದ್ದು, ನಿತ್ಯ ದೇಶದ ಸೋಂಕಿನ ವಿರುದ್ಧದ ಸಮರ ಯಶಸ್ಸಿನತ್ತ ಸಾಗುತ್ತಿದೆ.
-
#CoronaVaccineDrive Update
— Dr Harsh Vardhan (@drharshvardhan) January 18, 2021 " class="align-text-top noRightClick twitterSection" data="
🔶 More than 3.81 lakh beneficiaries have been vaccinated across the country so far.
🔷 No case of serious/severe AEFI reported@PMOIndia #Unite2FightCorona pic.twitter.com/avXO0JXXEo
">#CoronaVaccineDrive Update
— Dr Harsh Vardhan (@drharshvardhan) January 18, 2021
🔶 More than 3.81 lakh beneficiaries have been vaccinated across the country so far.
🔷 No case of serious/severe AEFI reported@PMOIndia #Unite2FightCorona pic.twitter.com/avXO0JXXEo#CoronaVaccineDrive Update
— Dr Harsh Vardhan (@drharshvardhan) January 18, 2021
🔶 More than 3.81 lakh beneficiaries have been vaccinated across the country so far.
🔷 No case of serious/severe AEFI reported@PMOIndia #Unite2FightCorona pic.twitter.com/avXO0JXXEo
ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕೆ ವ್ಯಾಕ್ಸಿನೇಷನ್ ಆರಂಭಗೊಂಡಿದ್ದು, ನಿನ್ನೆಯವರೆಗೆ 3.81 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಡೋಸ್ ನೀಡಲಾಗಿದೆ. ಲಸಿಕೆ ಪಡೆದವರ ಯಾರ ಮೇಲೂ ವ್ಯತಿರಿಕ್ತ ಅಡ್ಡ ಪರಿಣಾಮ ಬೀರಿಲ್ಲವೆಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ಒಟ್ಟು 1.05 ಕೋಟಿ ಸೋಂಕಿತರ ಪೈಕಿ 1,02,28,753 ಜನರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದು, 2,00,528 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನವರಿ 19ರ ವರೆಗೆ 18,78,02,827 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,09,791 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.