ETV Bharat / bharat

ಒಂದೇ ದಿನ 4.2 ಲಕ್ಷ ಕೊರೊನಾ ಟೆಸ್ಟ್​​... ಹೊಸ ದಾಖಲೆ ನಿರ್ಮಿಸಿದ ಭಾರತ!

author img

By

Published : Jul 25, 2020, 5:44 PM IST

ಭಾರತದಲ್ಲಿ ಇಲ್ಲಿಯವರೆಗೆ 8,49,431 ಸೋಂಕಿತರು ಕೋವಿಡ್​ನಿಂದ ಗುಣಮುಖರಾಗಿದ್ದು, 31,358 ಜನರು ಸಾವನ್ನಪ್ಪಿದ್ದಾರೆ.

COVID-19
COVID-19

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಅತಿ ಹೆಚ್ಚು ಕೋವಿಡ್​ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಇದರ ಮಧ್ಯೆ ಭಾರತ ಒಂದೇ ದಿನದಲ್ಲಿ ಅತಿ ಹೆಚ್ಚು ಕೋವಿಡ್​​ ಟೆಸ್ಟ್​​ ಮಾಡಿರುವ ಹೊಸ ದಾಖಲೆ ನಿರ್ಮಾಣ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 4 ಲಕ್ಷದ 20 ಸಾವಿರ ಕೋವಿಡ್​​​ ಟೆಸ್ಟ್​​ ನಡೆಸಿರುವುದಾಗಿ ಹೇಳಿದೆ. ಜನವರಿ ತಿಂಗಳಲ್ಲಿ ಕೇವಲ ಒಂದು ಕೋವಿಡ್​ ಟೆಸ್ಟ್​ ಕೇಂದ್ರ ಭಾರತದಲ್ಲಿತ್ತು. ಆದರೆ ಇದೀಗ ಅದರ ಸಂಖ್ಯೆ 1,301 ಆಗಿದ್ದು, ಇದರಲ್ಲಿ ಖಾಸಗಿ ಲ್ಯಾಬ್​ಗಳು ಸೇರಿಕೊಂಡಿವೆ ಎಂದು ತಿಳಿಸಿದೆ.

ಭಾರತದಲ್ಲಿ ಇಲ್ಲಿಯವರೆಗೆ 1,58,49,068 ಕೋವಿಡ್​ ಟೆಸ್ಟ್​​ ನಡೆಸಲಾಗಿದ್ದು, ಕಳೆದ ವಾರದಿಂದ ಪ್ರತಿದಿನ 3.50 ಲಕ್ಷ ಟೆಸ್ಟ್​ ನಡೆಯುತ್ತಿದೆ ಎಂದು ತಿಳಿಸಿದೆ. ಇದರ ಜತೆಗೆ ದೇಶದಲ್ಲಿ ಕೋವಿಡ್​​ನಿಂದ ಗುಣಮುಖರಾಗುತ್ತಿರುವ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದ್ದು, ಸದ್ಯ ಶೇ. 63.54ರಷ್ಟಿದೆ ಎಂದು ತಿಳಿಸಿದೆ. ಸದ್ಯ ದೇಶದಲ್ಲಿ 3,93,360 ಆ್ಯಕ್ಟೀವ್​ ಕೇಸ್​​ಗಳಿದ್ದು, ನಿನ್ನೆ ಒಂದೇ ದಿನ 48,916 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.