ETV Bharat / bharat

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ, ವಾಯುಪಡೆಗೆ ಬಂತು ಭೀಮ ಬಲ! - ಡಸಾಲ್ಟ್​ ಕಂಪನಿ

ಬಹಳಷ್ಟು ವಿವಾದಕ್ಕೆ ಕಾರಣವಾಗಿದ್ದ ಫ್ರಾನ್ಸ್​​ ಕಂಪನಿಯ ರಫೇಲ್​ ಯುದ್ಧ ವಿಮಾನ ಕೊನೆಗೂ ಭಾರತ ಸೇರಿದ್ದು, ಔಪಚಾರಿಕವಾಗಿ ಒಂದು ಯುದ್ಧ ವಿಮಾನವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರಿಗೆ​ ಹಸ್ತಾಂತರ ಮಾಡಲಾಗಿದೆ.

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ
author img

By

Published : Oct 8, 2019, 6:07 PM IST

ಫ್ರಾನ್ಸ್​: ಭಾರೀ ವಿವಾದಕ್ಕೆ ಗ್ರಾಸವಾಗಿದ್ದ ರಫೇಲ್​ ಯುದ್ಧ ವಿಮಾನ ಕೊನೆಗೂ ಭಾರತದ ಶಸ್ತ್ರಾಸ್ತ್ರ ಬತ್ತಳಿಕೆ ಸೇರಿಕೊಂಡಿದೆ. ಫ್ರಾನ್ಸ್​​ನ ಮೆರಿಗ್​ನ್ಯಾಕ್​​ನಲ್ಲಿ ಡಸಾಲ್ಟ್​ ಕಂಪನಿ ಸಿಇಒ ಎರಿಕ್​ ಟ್ರಾಫಿಯರ್​​ ಔಪಚಾರಿಕವಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರಿಗೆ ಅತ್ಯಾಧುನಿಕ ಫೈಟರ್ ಜೆಟ್ ಹಸ್ತಾಂತರಿಸಿದ್ದಾರೆ.

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ

ಯುದ್ದ ವಿಮಾನ ಹಸ್ತಾಂತರಕ್ಕೂ ಮೊದಲು ಸಚಿವ ರಾಜನಾಥ್​ ಸಿಂಗ್​ ಖುದ್ದಾಗಿ ಪರೀಕ್ಷಾರ್ಥ ಹಾರಾಟ ನಡೆಸಿದರು. ಅಂತಿಮವಾಗಿ ಮೊದಲ ರಫೇಲ್ ಯುದ್ಧ ವಿಮಾನ ಭಾರತದ ಕೈಸೇರಿದ್ದರಿಂದ, ವಾಯುಪಡೆಯ ಶಕ್ತಿ ದ್ವಿಗುಣಗೊಂಡಿದೆ.

2020ರ ವೇಳೆಗೆ ಒಟ್ಟು 36 ರಫೇಲ್​ ಯುದ್ಧ ವಿಮಾನಗಳನ್ನು ಫ್ರಾನ್ಸ್‌ ಭಾರತಕ್ಕೆ ಹಸ್ತಾಂತರಿಸಬೇಕಿದೆ. ಅದಕ್ಕಾಗಿ ಒಟ್ಟು 59 ಸಾವಿರ ಕೋಟಿ ರೂ ಹಣ ಖರ್ಚು ಮಾಡಲಾಗಿದ್ದು, 2016ರಲ್ಲಿ ದಿ. ಮನೋಹರ್‌ ಪರಿಕ್ಕರ್ ಕೇಂದ್ರ ರಕ್ಷಣಾ ಸಚಿವರಾಗಿದ್ದಾಗ ಈ ಒಪ್ಪಂದ ನಡೆದಿತ್ತು.

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ ರಫೇಲ್!
ಅತ್ಯಂತ ವೇಗದ ಯುದ್ಧ ವಿಮಾನವಾಗಿರುವ ರಫೇಲ್, ನಿಮಿಷದಲ್ಲೇ 60,000 ಅಡಿ ಮೇಲಕ್ಕೆ ಕ್ಷಿಪಣಿ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ. 24,600 ಕೆಜಿ ತೂಕದ ಈ ವಿಮಾನ ಸುಮಾರು 9,545 ಕೆ.ಜಿ ತೂಕದ ಕ್ಷಿಪಣಿ ಹೊತ್ತೊಯ್ಯಬಲ್ಲದು. ತೀವ್ರ ವೇಗದಲ್ಲಿ ಆಗಸ ಸೀಳಿಕೊಂಡು ಶರವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ರಫೇಲ್ ಗರಿಷ್ಟ ವೇಗ ಗಂಟೆಗೆ 1,389 ಕಿ.ಮೀ.!

Intro:Body:

ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಹಸ್ತಾಂತರ... ವಾಯುಪಡೆ ಶಕ್ತಿ ದ್ವಿಗುಣ! 

ಫ್ರಾನ್ಸ್​:  ಭಾರೀ ಚರ್ಚೆಗೆ ಗ್ರಾಸವಾಗಿದ್ದ ರಫೇಲ್​ ಯುದ್ಧ ವಿಮಾನ ಕೊನೆಗೂ ಭಾರತ ಬತ್ತಳಿಕೆ ಸೇರಿಕೊಂಡಿದ್ದು, ಫ್ರಾನ್ಸ್​​ನ ಮೆರಿಗ್​ನ್ಯಾಕ್​​ನಲ್ಲಿ ಡಸಾಲ್ಟ್​ ಕಂಪನಿ ಸಿಇಒ ಎರಿಕ್​ ಟ್ರಾಫಿಯರ್​​ ಔಪಚಾರಿಕವಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ಗೆ ಹಸ್ತಾಂತರ ಮಾಡಿದ್ದಾರೆ. 

ಹಸ್ತಾಂತರಕ್ಕೂ ಮೊದಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರೇ ಖುದ್ದಾಗಿ ಪರೀಕ್ಷಾರ್ಥ ಹಾರಾಟ ನಡೆಸಿದರು.  ಅಂತಿಮವಾಗಿ ಮೊದಲ ರಫೇಲ್ ಯುದ್ಧ ವಿಮಾನ ಭಾರತದ ಕೈಸೇರಿದ್ದರಿಂದ, ವಾಯುಪಡೆಯ ಶಕ್ತಿ ದ್ವಿಗುಣಗೊಂಡಿದೆ.

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ

ಅತ್ಯಂತ ವೇಗದ ಯುದ್ಧ ವಿಮಾನವಾದ ರಫೇಲ್, ನಿಮಿಷದಲ್ಲೇ 60,೦೦೦ ಅಡಿ ಮೇಲಕ್ಕೆ ಏರುವ ಸಾಮರ್ಥ್ಯ ಹೊಂದಿದೆ. ತೂಕ 24,600 ಕೆ ಜಿ ತೂಕದ ಈ ವಿಮಾನ ಸುಮಾರು 9545 ಕೆ.ಜಿ ತೂಕವನ್ನು ಹೊತ್ತೊಯ್ಯಬಲ್ಲದು.ತೀವ್ರ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿರುವ ರಫೇಲ್ ವಿಮಾನದ ಗರಿಷ್ಟ ವೇಗ ಗಂಟೆಗೆ 1389 ಕಿ.ಮೀ. ರಫೇಲ್ ಯುದ್ಧವಿಮಾನವು ಒಂದು ಗಂಟೆಯಲ್ಲಿ 1389 ಕಿ.ಮೀಗಳನ್ನು ಕ್ರಮಿಸಬಲ್ಲದು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.