ETV Bharat / bharat

ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ - World War 2

ಭಾರತೀಯರ ವಿರುದ್ಧ ಕಟುವಾದ ಟೀಕೆಗಳಿಗೆ ಹೆಸರುವಾಸಿಯಾದ ಬ್ರಿಟಿಷ್ ಪ್ರಧಾನಿ ವಿನ್​ಸ್ಟನ್​ ಚರ್ಚಿಲ್, ‘ಭಾರತೀಯ ಸೈನಿಕರು ಮತ್ತು ಅಧಿಕಾರಿಗಳ ಧೈರ್ಯಕ್ಕೆ’ ಗೌರವ ಸಲ್ಲಿಸಿದ್ದರು.

ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ
ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ
author img

By

Published : Aug 22, 2020, 8:28 PM IST

ವಿಶ್ವ ಸಮರ 2 ಸೆಪ್ಟೆಂಬರ್ 2, 1945 ರಲ್ಲಿ ಜಪಾನ್ ಶರಣಾಗತಿಯಿಂದ ಅಂತ್ಯಗೊಂಡಿತು. ಎರಡನೇ ಮಹಾಯುದ್ಧದಲ್ಲಿ 2.3 ದಶಲಕ್ಷಕ್ಕೂ ಹೆಚ್ಚು ವಸಾಹತುಶಾಹಿ ಭಾರತೀಯ ಸೈನಿಕರು ಭಾಗವಹಿಸಿದ್ದರು. 89,000 ಅವಿಭಜಿತ ಭಾರತೀಯ ಸೈನಿಕರು ಸಮರದಲ್ಲಿ ಸಾವನ್ನಪ್ಪಿದರು.

ಭಾರತೀಯ ಸೈನಿಕರು ಉತ್ತರ, ಪೂರ್ವ ಆಫ್ರಿಕಾ ಮತ್ತು ಪಶ್ಚಿಮ ಮರುಭೂಮಿ ಮತ್ತು ಯುರೋಪ್‌ನಲ್ಲಿ ನಡೆದ ಯುದ್ಧದಲ್ಲಿ ಭಾಗವಹಿಸಿದ್ದರು. ಆದರೆ ಭಾರತದ ಸೈನ್ಯವನ್ನು ಜಪಾನಿನ ಸೈನ್ಯದ ವಿರುದ್ಧ ಹೋರಾಡಲು ಬಳಸಲಾಯಿತು. ಟೋಬ್ರೂಕ್, ಮಾಂಟೆ ಕ್ಯಾಸಿನೊ, ಕೊಹಿಮಾ ಮತ್ತು ಇಂಫಾಲ್ ಯುದ್ಧಗಳಲ್ಲಿ ಭಾರತೀಯ ಸೈನಿಕರು ಪ್ರಮುಖ ಪಾತ್ರ ವಹಿಸಿದರು. 1940 ರ ದಶಕದಲ್ಲಿ ಮೂವತ್ತು ಭಾರತೀಯರು ವಿಕ್ಟೋರಿಯಾ ಕ್ರಾಸ್‌ಗಳನ್ನು ಗೆದ್ದರು.

ಕೊಹಿಮಾದಲ್ಲಿ ಭಾರತೀಯರ ಶೌರ್ಯ:

ಕೊಹಿಮಾ ಮತ್ತು ಇಂಫಾಲ್ ಕದನವು ಭಾರತದಲ್ಲಿ ಎರಡನೆಯ ಮಹಾಯುದ್ಧದ ಇತಿಹಾಸದಲ್ಲಿ ರಕ್ತಪಾತದ ಅಧ್ಯಾಯ ಮತ್ತು ಇದು ಬರ್ಮಾದ ಜಪಾನ್‌ನ ಅತ್ಯುತ್ತಮ ಸೈನ್ಯಕ್ಕೆ ಹೆಚ್ಚಿನ ಹೊಡೆತ ನೀಡಿತು.

1942 ರಲ್ಲಿ ಜಪಾನಿನ ಪಡೆಗಳು ಬರ್ಮಾದಲ್ಲಿ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಎರಡು ವರ್ಷಗಳ ನಂತರ ಯುದ್ಧ ಪ್ರಾರಂಭವಾಯಿತು. ಇದು ಜಪಾನಿನ ಸೈನ್ಯವನ್ನು ಭಾರತದ ಪೂರ್ವ ಗಡಿಗೆ ತಂದಿತು. ಬ್ರಿಟಿಷ್ ಪ್ರತಿದಾಳಿಯನ್ನು ತಡೆಯುವ ಭರವಸೆಯಲ್ಲಿ ಇಂಫಾಲ್ ಮತ್ತು ಕೊಹಿಮಾದಲ್ಲಿ ಬ್ರಿಟಿಷ್ ಪಡೆಗಳ ಮೇಲೆ ದಾಳಿ ನಡೆಸಲು ರೆನ್ಯಾ ಮುಟಗುಚಿ ತನ್ನ ಜಪಾನಿನ ಮೇಲಾಧಿಕಾರಿಗಳ ಮನವೊಲಿಸಿದರು.

ಜನರಲ್ ಮುತಗುಚಿ ಬ್ರಿಟಿಷ್ ರಾಜ್ ಅನ್ನು ಅಸ್ಥಿರಗೊಳಿಸಲು ಭಾರತವನ್ನು ದೂರ ತಳ್ಳಲು ಯೋಜಿಸಿದರು. ಬ್ರಿಟಿಷ್​ ಸೇನೆಯ ನೇತೃತ್ವವನ್ನು ಲೆಫ್ಟಿನೆಂಟ್ ಜನರಲ್ ವಿಲಿಯಂ ಸ್ಲಿಮ್ ವಹಿಸಿದ್ದರು.

ಜಪಾನಿಯರ ಅಚ್ಚರಿಯ ದಾಳಿ:

ಜಪಾನಿಯರನ್ನು ತಮ್ಮ ಸರಬರಾಜು ಮಾರ್ಗಗಳಿಂದ ದೂರವಿಡುವ ಯುದ್ಧಕ್ಕೆ ಸೆಳೆಯುವ ಆಶಯದೊಂದಿಗೆ ಜನರಲ್ ಸ್ಲಿಮ್ ತನ್ನ ಪಡೆಗಳನ್ನು ಪಶ್ಚಿಮ ಬರ್ಮಾದಿಂದ ಹಿಂತೆಗೆದುಕೊಂಡನು.

ಆದರೆ ಬ್ರಿಟಿಷ್ ಕಮಾಂಡರ್​ಗಳಲ್ಲಿ ಯಾರೂ, ಜಪಾನಿಯರು ಕೊಹಿಮಾ ಸುತ್ತಮುತ್ತಲಿನ ದಟ್ಟ ಕಾಡುಗಳನ್ನು ದಾಟಬಹುದೆಂದು ನಂಬಲಿಲ್ಲ. ಆದ್ದರಿಂದ ಸುಮಾರು 15,000 ಜಪಾನಿ ಸೈನಿಕರ ಪೂರ್ಣ ವಿಭಾಗವು ಏಪ್ರಿಲ್ 4 ರಂದು ಕಾಡಿನಿಂದ ಹೊರಬಂದಿತು. ಈ ವೇಳೆ ಪಟ್ಟಣವನ್ನು ಕೇವಲ ಬ್ರಿಟಿಷ್​ ಮತ್ತು ಭಾರತೀಯರನ್ನೊಳಗೊಂಡ 1,500 ಮಂದಿ ಸೈನಿಕರು ಮಾತ್ರ ಇದ್ದರು.

ಜೂನ್ 22, 1944 ರಂದು ಬ್ರಿಟಿಷ್ ಮತ್ತು ಭಾರತೀಯ ಪಡೆಗಳು ಇಂಫಾಲ್ ಮತ್ತು ಕೊಹಿಮಾವನ್ನು ಸಂಪರ್ಕಿಸುವ ನಿರ್ಣಾಯಕ ರಸ್ತೆಯಿಂದ ಜಪಾನಿಯರ ಕೊನೆಯ ಭಾಗವನ್ನು ತೆರವುಗೊಳಿಸಿ ಮುತ್ತಿಗೆಯನ್ನು ಕೊನೆಗೊಳಿಸಿದವು.

ಭಾರತದ ಆಕ್ರಮಣಕ್ಕೆ 85,000 ಪ್ರಬಲವಾದ ಜಪಾನಿನ 15 ನೇ ಸೈನ್ಯವು ಮೂಲಭೂತವಾಗಿ ನಾಶವಾಯಿತು. 53,000 ಜನರು ಸಾವನ್ನಪ್ಪಿದರು.

ಇಟಲಿಯಲ್ಲಿ ಹೋರಾಡಿದ ಭಾರತೀಯ ಸೈನಿಕರು:

ಸುಮಾರು 50,000 ಭಾರತೀಯ ಸೈನಿಕರು, ಹೆಚ್ಚಾಗಿ 19 ರಿಂದ 22 ವರ್ಷದೊಳಗಿನವರು, ಎರಡನೇ ಮಹಾಯುದ್ಧದ ಸಮಯದಲ್ಲಿ ಇಟಲಿಯ ವಿಮೋಚನೆಗಾಗಿ ಹೋರಾಡಿದರು.

ಮೊದಲ ಭಾರತೀಯ ಪಡೆಗಳು ಸೆಪ್ಟೆಂಬರ್ 19, 1943 ರಂದು ನೇಪಲ್ಸ್‌ನ ದಕ್ಷಿಣದ ಟ್ಯಾರಂಟೊದಲ್ಲಿ ಬಂದಿಳಿದವು. ಅಂದಿನಿಂದ ಏಪ್ರಿಲ್ 29, 1945 ರವರೆಗೆ, ಅವರು ಇಟಲಿ ಪರವಾಗಿ ಫ್ಯಾಸಿಸ್ಟ್ ಪಡೆಗಳ ವಿರುದ್ಧ ಹೋರಾಡಿದರು. 20 ವಿಕ್ಟೋರಿಯಾ ಕ್ರಾಸ್ ಪ್ರಶಸ್ತಿ ಪುರಸ್ಕೃತರಲ್ಲಿ ಆರು ಮಂದಿ ಭಾರತೀಯರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.