ನವದೆಹಲಿ: ಮೇ.4ರವರೆಗೆ ವಿಸ್ತರಣೆಗೊಂಡಿದ್ದ ಲಾಕ್ಡೌನ್ ಇದೀಗ ಮೇ.17ರವರೆಗೆ ಮುಂದೂಡಿಕೆಯಾಗಿದ್ದು, ಹೀಗಾಗಿ ದೇಶದ ಜನರು ಮತ್ತೆ ಎರಡು ವಾರ ಮನೆಯಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ದೇಶದಲ್ಲಿ ಲಾಕ್ಡೌನ್ ಮುಂದೂಡಿಕೆಯಾಗಿರುವ ಕಾರಣ ಕೇಂದ್ರ ಗೃಹ ಇಲಾಖೆಯಿಂದ ಹೊಸ ಕಾರ್ಯಸೂಚಿ ರಿಲೀಸ್ ಆಗಿದ್ದು, ಈಗಾಗಲೇ ಮೂರು ವಲಯಗಳಾಗಿ ವಿಂಗಡನೆಯಾಗಿರುವ ರೆಡ್, ಗ್ರೀನ್ ಹಾಗೂ ಆರೆಂಜ್ ಝೋನ್ಗಳಲ್ಲಿ ಕೆಲವೊಂದು ನಿರ್ಬಂಧಗಳು ಸಡಿಲಗೊಂಡಿವೆ.
ಏನೆಲ್ಲ ನಿರ್ಬಂಧ?
- ಮೂರು ವಲಯಗಳಲ್ಲಿ ಯಾವುದೇ ರೀತಿಯಲ್ಲೂ ಮೆಟ್ರೋ ಹಾಗೂ ಪ್ಯಾಸೆಂಜರ್ ರೈಲುಗಳ ಸಂಚಾರ ಇರುವುದಿಲ್ಲ.
- ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್, ಹೋಟೆಲ್ಗಳು ಬಂದ್, ಹೋಟೆಲ್ಗಳಲ್ಲಿ ಪಾರ್ಸಲ್ಗಳಿಗೆ ಮಾತ್ರ ಅವಕಾಶ
- ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ನಿರ್ಬಂಧ
- ರೆಡ್ ಝೋನ್ಗಳಲ್ಲಿ ಸೈಕಲ್ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್,ಅಂತಾರಾಜ್ಯ ಬಸ್ ಸಂಚಾರ, ಸಲೂನ್ ಶಾಪ್, ಸ್ಪಾ ಸಂಪೂರ್ಣ ಬಂದ್
- ರೆಡ್ ಝೋನ್ಗಳಲ್ಲಿ ಅನುಮತಿ ಪಡೆದ ವಾಹನ ಸಂಚಾರ
- ಕಾರುಗಳಲ್ಲಿ ಡ್ರೈವರ್ ಹಾಗೂ ಓರ್ವ ಪ್ರಯಾಣಿಕರಿಗೆ ಮಾತ್ರ ಅವಕಾಶ
- ಬೈಕ್ನಲ್ಲಿ ಒಬ್ಬರಿಗೆ ಮಾತ್ರ ಅನುಮತಿ.
- ರೆಡ್ ಝೋನ್‌ನಲ್ಲಿ 130 ಜಿಲ್ಲೆಗಳಿದ್ದು, ಕಟ್ಟಿನಿಟ್ಟಿನ ಆದೇಶ ಜಾರಿಯಲ್ಲಿರುತ್ತವೆ. ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಕೂಡ ಸೇರಿಕೊಂಡಿವೆ.
-
National Directives for #Covid_19 Management and penalties for violations of #Lockdown3 measures 👇 pic.twitter.com/G3WvFj6hjh
— Spokesperson, Ministry of Home Affairs (@PIBHomeAffairs) May 1, 2020 " class="align-text-top noRightClick twitterSection" data="
">National Directives for #Covid_19 Management and penalties for violations of #Lockdown3 measures 👇 pic.twitter.com/G3WvFj6hjh
— Spokesperson, Ministry of Home Affairs (@PIBHomeAffairs) May 1, 2020National Directives for #Covid_19 Management and penalties for violations of #Lockdown3 measures 👇 pic.twitter.com/G3WvFj6hjh
— Spokesperson, Ministry of Home Affairs (@PIBHomeAffairs) May 1, 2020
-
ಆರೆಂಜ್ ಝೋನ್:
- ಆರೆಂಜ್ ಜೋನ್ನಲ್ಲಿ ಮಿತ ಸಂಚಾರಕ್ಕೆ ಅವಕಾಶ
- ಕಾರಲ್ಲಿ ಇಬ್ಬರು, ಬೈಕ್ನಲ್ಲಿ ಒಬ್ಬರು ಓಡಾಡಲು ಅನುಮತಿ
ಗ್ರೀನ್ ಝೋನ್:
- ಇನ್ನು ಗ್ರೀನ್ ಝೋನ್‌ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
- ಮದ್ಯದ ಅಂಗಡಿ ಮುಂದೆ 6 ಮಂದಿಗೆ ಮಾತ್ರ ನಿಂತು ಪಾರ್ಸಲ್ ತೆಗೆದುಕೊಂಡು ಹೋಗಬಹುದು.
- ಮದುವೆ ಕಾರ್ಯಕ್ರಮಗಳಲ್ಲಿ 50 ಜನರು ಭಾಗಿಯಾಗುವುದಕ್ಕೆ ಅವಕಾಶ.
- ಗ್ರೀನ್ ಝೋನ್‌ನಲ್ಲಿ 50 ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಅವಕಾಶ
- ಖಾಸಗಿ ಆಸ್ಪತ್ರೆಗಳಲ್ಲಿ OPD ತೆರೆಯಲು ಅವಕಾಶ
- ಕಟ್ಟಡ ಕಾರ್ಮಿಕರು, ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಷರತ್ತುಬದ್ಧ ಅನುಮತಿ
- ಗ್ರಾಮೀಣ ಪ್ರದೇಶಗಳಲ್ಲೂ ಮಾಲ್ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ
- ಕೃಷಿ ಕಾರ್ಯಗಳು, ಹೈನುಗಾರಿಕೆ, ಮೀನುಗಾರಿಕೆ ಚಟುವಟಿಕೆಗಳಿಗೆ ಹಾಗೂ ಪ್ಲಾಂಟೇಶನ್ ಚಟುವಟಿಕೆಗಳಿಗೆ ಅನುಮತಿ
- ಬ್ಯಾಂಕ್ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ವಿಮೆ ಮತ್ತು ಕ್ಯಾಪಿಟಲ್ ಮಾರ್ಕೆಟ್ ಚಟುವಟಿಕೆಗಳು ಹಾಗೂ ಕ್ರೆಡಿಟ್ ಕೊ-ಅಪರೇಟಿವ್ ಸೊಸೈಟಿ ಕಾರ್ಯ
- ಕಟ್ಟಡ ಕಾರ್ಮಿಕರನ್ನು ಹೊರ ರಾಜ್ಯಗಳಿಂದ ಕರೆದು ತರುವಂತಿಲ್ಲ.
- ಅಂತಾರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ
- ಎಲ್ಲರೂ ಆರೋಗ್ಯ ಸೇತು ಆ್ಯಪ್ ಬಳಸುವುದು ಕಡ್ಡಾಯ
- ಕೈಗಾರಿಕೆಗಳಿಗೆ ಶರತ್ತುಬದ್ಧ ಅನುಮತಿ