ETV Bharat / bharat

ಮುಟ್ಟಿದರೆ ಹುಷಾರ್​​​... ಏಳು ಹೆಕ್ಟೇರ್ ಭೂಮಿಯಲ್ಲಿ ಹರಡಿರುವ ‘ಕಾಯಕಲ್ಪ ವೃಕ್ಷ’ - ಪಂಜಾಬ್ ನ ಫತೇಘರ್ ಸಾಹಿಬ್ ನಲ್ಲಿರುವ ದೇಶದ ಅತಿದೊಡ್ಡ ಆಲದ ಮರ

ಛತ್ರಿ ತರಹದ ರಚನೆ ಹೋಲುವ ಈ ಬೃಹತ್ ಮರವು ಆರರಿಂದ ಏಳು ಹೆಕ್ಟೇರ್ ಭೂಮಿಯಲ್ಲಿ ಹರಡಿದೆ. ಸ್ಥಳೀಯ ಜನರ ಪ್ರಕಾರ, ಈ ಮರವು 300 ವರ್ಷಗಳಿಗಿಂತಲೂ ಹಳೆಯದು. ಈ ಮರದ ಬೇರುಗಳು ಎಲ್ಲಿ ಹರಡಿದರೂ, ರೈತರು ಆ ಪ್ರದೇಶಗಳನ್ನು ಕೃಷಿಗೆ ಬಳಸುವುದಿಲ್ಲ. ಈ ಮರದ ಕುರಿತು ಹಳೆಯ ಕಾಲದ ಕಥೆಯೊಂದನ್ನು ಇಲ್ಲಿನ ನಿವಾಸಿಗಳು ಹೇಳುತ್ತಾರೆ.

ಏಳು ಹೆಕ್ಟೇರ್ ಭೂಮಿಯಲ್ಲಿ ಹರಡಿರುವ ‘ಕಾಯ ಕಲ್ಪ ವೃಕ್ಷ’

author img

By

Published : Nov 25, 2020, 6:07 AM IST

ಪಂಜಾಬ್: ಫತೇಘರ್ ಸಾಹಿಬ್ ದೇಶದ ಅತಿದೊಡ್ಡ ಆಲದ ಮರವಾಗಿದೆ. ಚೋಟ್ಲಿ ಖೇಡಿಗೆ ಭೇಟಿ ನೀಡಿದರೆ ನೀವು ಬೃಹತ್ ಮರ ಕಾಣಬಹುದು. ಛತ್ರಿ ತರಹದ ರಚನೆ ಹೋಲುವ ಈ ಬೃಹತ್ ಮರವು ಆರರಿಂದ ಏಳು ಹೆಕ್ಟೇರ್ ಭೂಮಿಯಲ್ಲಿ ಹರಡಿದೆ. ಸ್ಥಳೀಯ ಜನರ ಪ್ರಕಾರ, ಈ ಮರವು 300 ವರ್ಷಗಳಿಗಿಂತಲೂ ಹಳೆಯದು. ಈ ಮರವನ್ನು ಕಾಯ ಕಲ್ಪ ವೃಕ್ಷ ಅಥವಾ ಬರೋತಿ ಸಾಹಿಬ್ ಎಂದು ಕರೆಯಲಾಗುತ್ತದೆ. ಈ ಆಲದ ಮರವು ವಿವಿಧ ರೈತರ ಹತ್ತಿರದ ಹೊಲಗಳಲ್ಲಿ ನಿರಂತರವಾಗಿ ತನ್ನ ಬೇರುಗಳನ್ನು ಹರಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಏಳು ಹೆಕ್ಟೇರ್ ಭೂಮಿಯಲ್ಲಿ ಹರಡಿರುವ ‘ಕಾಯಕಲ್ಪ ವೃಕ್ಷ’

ಭೂಮಾಲೀಕರು ಈ ಮರದ ಬೇರುಗಳನ್ನು ಕತ್ತರಿಸಲು ಪ್ರಯತ್ನಿಸಿದಾಗಲೆಲ್ಲ ಅವರು ಅದಕ್ಕೆ ಭಾರಿ ಬೆಲೆ ತೆರಬೇಕಾಗಿತ್ತು. ಇದರ ಪರಿಣಾಮವಾಗಿ, ಬರೋತಿ ಸಾಹಿಬ್‌ನ ಬೇರುಗಳು ಎಲ್ಲಿ ಹರಡಿದರೂ, ರೈತರು ಆ ಪ್ರದೇಶಗಳನ್ನು ಕೃಷಿಗೆ ಬಳಸುವುದಿಲ್ಲ. ಈ ಆಲದ ಮರದ ಎಲೆಗಳನ್ನು ಬಳಸಲು ಸಹ ಜನರು ಭಯಪಡುತ್ತಾರೆ.

ಈ ಮರದ ಕುರಿತು ಹಳೆಯ ಕಾಲದ ಕಥೆಯೊಂದನ್ನು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಒಂದು ಕಾಲದಲ್ಲಿ ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಒಬ್ಬ ಸನ್ಯಾಸಿ ಹಾದು ಹೋಗುತ್ತಿದ್ದ. ಆ ಸನ್ಯಾಸಿ ಕಂಡ ರೈತ, ಅವನ ಕುಟುಂಬದೊಂದಿಗೆ ಕೆಲವು ದಿನಗಳ ಕಾಲ ಇರಬೇಕೆಂದು ಸನ್ಯಾಸಿಯನ್ನು ಬೇಡಿಕೊಂಡನಂತೆ. ರೈತ ಮತ್ತು ಅವನ ಹೆಂಡತಿ ಸನ್ಯಾಸಿಗೆ ಹಲವು ದಿನಗಳ ಕಾಲ ಸೇವೆ ಸಲ್ಲಿಸಿದರು. ಒಂದು ದಿನ ರೈತನ ಹೆಂಡತಿ ಸನ್ಯಾಸಿಗೆ ಆಹಾರ ನೀಡಲು ಹೋದಳು. ಅವಳು ಸಂತೋಷವಾಗಿದ್ದಾಳೆ ಎಂದು ಸನ್ಯಾಸಿಗೆ ಅನ್ನಿಸಲಿಲ್ಲ. ಹೀಗಾಗಿ ಭಕ್ತೆಯನ್ನ ನಿನ್ನ ದುಃಖಕ್ಕೆ ಕಾರಣ ಏನು ಎಂದು ಕೇಳುತ್ತಾನೆ. ರೈತನ ಹೆಂಡತಿ ಮನೆಯಲ್ಲಿ ಮಗು ಇಲ್ಲ. ನನಗೂ ಮಗುವಾಗಬೇಕೆಂಬ ಆಸೆಯಿದೆ ಎಂದು ಉತ್ತರಿಸಿದಳಂತೆ. ಆಗೆ ಆಕೆಗೆ ಭಸ್ಮವನ್ನು ಸನ್ಯಾಸಿ ನೀಡಿದನಂತೆ. ಅದನ್ನು ಪಡೆದು ರೈತನ ಹೆಂಡತಿ ಮನೆಗೆ ಹಿಂದಿರುಗಿ, ಅವಳು ಪತಿಗೆ ಅಲ್ಲಿ ನಡೆದ ಸಂಭಾಷಣೆಯ ವಿವರ ನೀಡುತ್ತಾಳೆ. ಈ ಮಾತನ್ನು ಕೇಳಿದ ರೈತ ಇದರಿಂದ ನಮಗೆ ಮಗುವಾಗುವುದಿಲ್ಲ. ಆದ್ದರಿಂದ, ಸನ್ಯಾಸಿ ನೀಡಿದ ಪವಿತ್ರ ಭಸ್ಮವನ್ನು ಹೊಲಗಳಲ್ಲಿ ಎಸೆಯಲು ಹೇಳಿದನಂತೆ. ಹಾಗಾಗಿ ಈ ಆಲದ ಮರವು ಪವಿತ್ರ ಭಸ್ಮವನ್ನು ಎಸೆದ ಸ್ಥಳದಲ್ಲಿದೆ ಎಂಬುದು ಈ ಊರಿನ ಜನರ ನಂಬಿಕೆ ಆಗಿದೆ.

ಈ ಮರದ ಬೇರುಗಳು ನಿರಂತರವಾಗಿ ಹರಡುತ್ತಿರುವಂತೆಯೇ, ರೈತರ ಕುಟುಂಬವೂ ಬೆಳೆಯುತ್ತಿದೆ ಎಂದು ಗ್ರಾಮಸ್ಥರು ನಂಬುತ್ತಾರೆ. ಆಲದ ಮರದ ಮುಂದೆ ತಮ್ಮ ಆಸೆಗಳನ್ನು ಹೇಳಿಕೊಂಡರೆ ಅವರ ಆಕಾಂಕ್ಷೆಗಳು ಈಡೇರುತ್ತದೆ ಎಂದು ಜನರು ನಂಬಿದ್ದಾರೆ. ಗ್ರಾಮಸ್ಥರು ಈ ಬೃಹತ್ ಆಲದ ಮರವನ್ನು ಸಿದ್ಧ ಬಾಬಾ ಬರೋತಿ ಸಾಹಿಬ್ ಎಂದು ಪೂಜಿಸುತ್ತಿದ್ದಾರೆ. ಈ ಕಾಯಕಲ್ಪ ಮರ ಈಗ ಅನೇಕ ಪಕ್ಷಿಗಳಿಗೆ ನೆಲೆಯಾಗಿದೆ. ಶತಮಾನಗಳೇ ಕಳೆದಿದ್ದರೂ ಈ ಆಲದ ಮರ ಮಾತ್ರ ಇನ್ನೂ ಬೆಳೆಯುತ್ತಲೇ ಇರುವುದು ಅಚ್ಚರಿಯಾದರೂ ಸತ್ಯ ಸಂಗತಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.