ನವದೆಹಲಿ: ಕೊರೊನಾ ವೈರಸ್ ತಂದೊಡ್ಡಿದ ಸಂಕಷ್ಟ ಹಾಗೂ ಅಮೆರಿಕದ ಸ್ಪರ್ಧಾತ್ಮಕತೆಗಾಗಿ ಹೆಚ್ 1-ಬಿ ವೀಸಾದ ದೀರ್ಘಾವಧಿಯ ಪ್ರಯೋಜನಗಳನ್ನು ಅಮೆರಿಕ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಭಾರತ ಆಶಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾ ಹೇಳಿದ್ದಾರೆ.
ಅಮೆರಿಕ ಆಡಳಿತವು ತಮ್ಮ ವಲಸೆರಹಿತ ವೀಸಾ ಆಡಳಿತದ ಪರಿಶೀಲನೆ ಭಾಗವಾಗಿ ಎಚ್ 1-ಬಿ ವೀಸಾದ ಮೇಲಿನ ನಿರ್ಬಂಧಗಳ ಬಗ್ಗೆ ಭಾರತೀಯರು ಮತ್ತು ಅವರ ಉದ್ಯಮದ ಮೇಲೆ ಪ್ರಭಾವ ಬೀರಲಿದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕೊರೊನಾ ವೈರಸ್ ಸೋಂಕು ಅಂತ್ಯವಾಗುವವರೆಗೂ ಭಾರತೀಯ ನಾಗರಿಕರ ಹೆಚ್ -1 ಬಿ ಮತ್ತು ಇತರ ವೀಸಾಗಳನ್ನು ವಿಸ್ತರಿಸುವಂತೆ ಅಮೆರಿಕವನ್ನ ಭಾರತ ಈ ಹಿಂದೆ ಕೇಳಿಕೊಂಡಿತ್ತು.
ಈ ಪ್ರಕಾರ ಭಾರತ ಸರ್ಕಾರವು ಎಲ್ಲ ಸ್ಟೇಕ್ ಹೋಲ್ಡರ್ಗಳೊಂದಿಗೆ ನಿಕಟವಾಗಿ ಸಮಾಲೋಚನೆ ನಡೆಸಿದ್ದು, ಈ ವಿಷಯದ ಬಗ್ಗೆ ಈಗಾಗಲೇ ಯುಎಸ್ ಸರ್ಕಾರದೊಂದಿಗೆ ತೊಡಗಿಸಿಕೊಂಡಿದೆ. 2020 ರ ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ಮೋದಿ ಅವರ ಜೊತೆ ಮಾತುಕತೆ ನಡೆಸಿರುವುದು ಇದರ ಒಂದು ಭಾಗವಾಗಿದೆ ಎಂದು ಶಿಂಗ್ಲಾ ಹೇಳಿದ್ದಾರೆ.
ಹೆಚ್ 1-ಬಿ ವೀಸಾ ಹೊಂದಿರುವವರಿಗೆ ತಾತ್ಕಾಲಿಕ ಪರಿಹಾರದ ವಿಷಯದಲ್ಲಿ ಅಮೆರಿಕ ಸರ್ಕಾರದೊಂದಿಗೆ ಲಾಕ್‌ಡೌನ್‌ನಿಂದಾಗಿ ನಾವು ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಾಯಿತು, ಈ ಅವಧಿಯಲ್ಲಿ ವೀಸಾಗಳ ಅವಧಿ ಹೆಚ್ಚಾಗಿ ಮೀರುತ್ತಿರುವುದರಿಂದ ಈ ಬಗ್ಗೆ ಮಾತುಕತೆ ನಡೆಸಲಾಗಿದೆ.
ಹೆಚ್ 1-ಬಿ ವೀಸಾದ ಸಮಸ್ಯೆ ಪರಿಹಾರದ ವಿಷಯವಾಗಿ ಯುಎಸ್ ಜೊತೆಗಿನ ಸಂಬಂಧ, ಇದು ಪರಸ್ಪರ ಲಾಭದಾಯಕ ಪಾಲುದಾರಿಕೆಯಾಗಿದೆ ಎಂದು ಭಾರತ ಹೇಳಿದ್ದು, ಇದನ್ನು ಪೋಷಿಸುವುದು ನಮ್ಮ ಜವಾಬ್ದಾರಿ ಎಂದು ಶಿಂಗ್ಲಾ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಅಮೆರಿಕ ನಡುವಿನ ಸ್ನೇಹಕ್ಕೆ ಅಡಿಪಾಯಗಳನ್ನು ಹಾಕಿ ಕೊಟ್ಟಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿನ ವೃತ್ತಿಪರರು ಮತ್ತು ಭಾರತೀಯ ವಿದ್ಯಾರ್ಥಿಗಳು, ಭಾರತೀಯ ವಲಸೆಗಾರರು ಯುಎಸ್ನಲ್ಲಿ ಇದಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಆರ್ಥಿಕ ಮತ್ತು ವ್ಯಾಪಾರ ಸಂಪರ್ಕಗಳು ಇಂಡೋ - ಯುಎಸ್ ಕಾರ್ಯತಂತ್ರದ ಸಹಭಾಗಿತ್ವದ ಬಲವಾದ ಆಧಾರ ಸ್ತಂಭವಾಗಿದೆ. ವಿಶೇಷವಾಗಿ ತಂತ್ರಜ್ಞಾನ ಮತ್ತು ಇನ್ನೋವೇಷನ್ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಪ್ರಕಾರ, ಹೆಚ್ 1-ಬಿ ಮತ್ತು ಸಂಬಂಧಿತ ವಲಸೆ ರಹಿತ ವೀಸಾ ಪ್ರಭುತ್ವಗಳ ಮೂಲಕ ಅಮೆರಿಕದಲ್ಲಿ ಕೆಲಸ ಮಾಡುವ ಉನ್ನತ ನುರಿತ ಭಾರತೀಯ ವೃತ್ತಿಪರರು, ನಿರ್ಣಾಯಕ ಕೌಶಲವನ್ನ ನಿವಾರಿಸುತ್ತಿದ್ದಾರೆ ಹಾಗೂ ಯುಎಸ್ ಕಂಪನಿಗಳಿಗೆ ತಾಂತ್ರಿಕ ಮತ್ತು ಸ್ಪರ್ಧಾತ್ಮಕತೆಯನ್ನು ಒದಗಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕ ಸರ್ಕಾರವು ವಲಸೆರಹಿತ ವೀಸಾವನ್ನು ಪರಿಶೀಲಿಸುವುದರಿಂದ, ಸ್ಪರ್ಧಾತ್ಮಕತೆಗಾಗಿ ಹೆಚ್ 1-ಬಿ ವೀಸಾದ ದೀರ್ಘಕಾಲೀನ ಪ್ರಯೋಜನಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ಈ ನಿರ್ಣಾಯಕ ಘಟ್ಟದಲ್ಲಿ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾರತ ಆಶಿಸಿದೆ.