ಹೈದರಾಬಾದ್: ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ಇಲ್ಲಿ ಧರ್ಮ ಮತ್ತು ಸಂಸ್ಕೃತಿಯ ವೈವಿಧ್ಯತೆ ಲೆಕ್ಕಿಸದೆ ಸಂಘವು ದೇಶದ 130 ಕೋಟಿ ಜನರನ್ನೂ ಹಿಂದೂಗಳೆಂದು ಪರಿಗಣಿಸುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಯಾವುದೇ ಭಾಷೆ ಮಾತನಾಡಲಿ, ಯಾವುದೇ ಧರ್ಮದವರಾಗಿರಲಿ ಭಾರತವನ್ನ ತಾಯಿನಾಡು ಎಂದು ಪರಿಗಣಿಸುವವರನ್ನು ಆರ್‌ಎಸ್‌ಎಸ್, ಹಿಂದೂ ಎಂದು ಕರೆಯುತ್ತದೆ ಎಂದು ಭಾಗವತ್ ಹೇಳಿದ್ದಾರೆ. ಭಾರತದ 130 ಕೋಟಿ ಜನರು ಹಿಂದೂ ಸಮಾಜದವರು. ಆರ್‌ಎಸ್‌ಎಸ್ ಪ್ರತಿಯೊಬ್ಬರನ್ನು ತಮ್ಮವರೇ ಎಂದು ಪರಿಗಣಿಸುತ್ತದೆ ಮತ್ತು ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಎಲ್ಲರನ್ನೂ ಒಂದುಗೂಡಿಸಲು ಸಂಘ ಬಯಸಿದೆ ಎಂದಿದ್ದಾರೆ.
-
India has traditionally been 'Hindutvawadi', RSS regards 130 cr population of India as Hindu society: Mohan Bhagwat
— ANI Digital (@ani_digital) December 25, 2019 " class="align-text-top noRightClick twitterSection" data="
Read @ANI story | https://t.co/i2xXGNRxFq pic.twitter.com/3FlqrS9MOS
">India has traditionally been 'Hindutvawadi', RSS regards 130 cr population of India as Hindu society: Mohan Bhagwat
— ANI Digital (@ani_digital) December 25, 2019
Read @ANI story | https://t.co/i2xXGNRxFq pic.twitter.com/3FlqrS9MOSIndia has traditionally been 'Hindutvawadi', RSS regards 130 cr population of India as Hindu society: Mohan Bhagwat
— ANI Digital (@ani_digital) December 25, 2019
Read @ANI story | https://t.co/i2xXGNRxFq pic.twitter.com/3FlqrS9MOS
ಭಾರತದ ಸಾಂಪ್ರದಾಯಿಕ ಚಿಂತನೆ ಒಟ್ಟಿಗೆ ಮುಂದುವರಿಯುವುದು. ಜನರು ನಮ್ಮನ್ನು ಹಿಂದುತ್ವವಾದಿ ಎನ್ನುತ್ತಾರೆ. ನಮ್ಮ ದೇಶ ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ನಮ್ಮ ಸಂಘವು ದೇಶಕ್ಕಾಗಿ ಕೆಲಸ ಮಾಡುತ್ತದೆ ಮತ್ತು ನಾವು ಯಾವಾಗಲೂ ಧರ್ಮ ಗೆಲ್ಲಬೇಕೆಂದು ಬಯಸುತ್ತೇವೆ. ರವೀಂದ್ರನಾಥ ಟ್ಯಾಗೋರ್ ಅವರ ಮಾತು ಉಲ್ಲೇಖಿಸಿದ ಭಾಗವತ್, ರಾಜಕೀಯದಿಂದ ಮಾತ್ರ ದೇಶದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ, ಬದಲಾವಣೆಯನ್ನು ಜನರು ಮಾತ್ರ ತರಬಹುದು ಎಂದಿದ್ದಾರೆ.
ವಿವಿಧತೆಯಲ್ಲಿ ಏಕತೆ ಇದೆ ಎಂಬ ಮಾತಿದೆ ಆದರೆ ನಮ್ಮ ದೇಶ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲಿ ನಮಗೆ ವೈವಿಧ್ಯತೆಯಲ್ಲಿ ಏಕತೆ ಮಾತ್ರವಲ್ಲ, ಏಕತೆಯ ವೈವಿಧ್ಯತೆಯೂ ಇದೆ ಎಂದು ಹೇಳಿದ್ದಾರೆ.