ಸೋನಿಪತ್(ಹರಿಯಾಣ): ಭಯೋತ್ಪಾದನೆಯನ್ನು ನಿಗ್ರಹಿಸುವ ಮೂಲಕ ಪ್ರಾಮಾಣಿಕತೆಯಿಂದ ವರ್ತಿಸಬೇಕೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ಗೆ ಸಲಹೆ ನೀಡಿದ್ದಾರೆ.
ಹರಿಯಾಣದ ಸೋನಿಪತ್ ನಗರದಲ್ಲಿ ನಡೆದ ಸಾರ್ವಜನಿಕ ಸಭೇಯನ್ನುದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ನಿಗ್ರಹಿಸುವ ಮೂಲಕ ಉಭಯ ದೇಶಗಳ ಸ್ನೇಹ-ಸಂಬಂಧ ವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ. ನಮ್ಮದು ನೆರೆ-ಹೊರೆಯ ದೇಶ. ನಾವು ಜೊತೆಜೊತೆಯಾಗಿ ಮುನ್ನುಗ್ಗಬೇಕು ಎಂದು ಪಾಕ್ಗೆ ಪರೋಕ್ಷವಾಗಿ ತಿಳಿ ಹೇಳಿದರು.
ಒಂದು ವೇಳೆ ನಿಮಗೆ ಉಗ್ರರ ವಿರುದ್ಧ ಹೋರಾಡುವ ಸಾಮರ್ಥ್ಯವಿಲ್ಲದಿದ್ದರೆ ಹೇಳಿ. ಮೂಲಭೂತವಾದಿ ಶಕ್ತಿಗಳ ವಿರುದ್ಧ ಹೋರಾಡಲು ಭಾರತ ಶಕ್ತವಾಗಿದೆ. ಅಷ್ಟೇ ಅಲ್ಲ, ಅಗತ್ಯ ಬಿದ್ದರೆ ಹೋರಾಡಿಯೇ ತೀರುತ್ತೇವೆ ಎಂದು ನಾನು ಒತ್ತಿ ಹೇಳಿದರು.