ಹೈದರಾಬಾದ್: ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 14,821 ಹೊಸ ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ಈ ಮೂಲಕ ದೇಶದಲ್ಲಿ 4,25,282 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 13,699 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಕಳೆದ 24 ಗಂಟೆಯಲ್ಲಿ 9,440 ಕೋವಿಡ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಸದ್ಯ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 55.77 ಆಗಿದೆ ಎಂದು ತಿಳಿಸಿದೆ. ಜಾಗತಿಕವಾಗಿ ಹೋಲಿಕೆ ಮಾಡಿದಾಗ ದೇಶದಲ್ಲಿ ಕೊರೊನಾ ಹರಡುತ್ತಿರುವ ಪರಿ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹಿಂದಿನ ದಿನಗಳಿಗೆ ಹೋಲಿಸಿ ನೋಡಿದಾಗ ಇದೀಗ ದೇಶದಲ್ಲಿ ಟೆಸ್ಟಿಂಗ್ ಮಾಡುವುದು ಮತ್ತಷ್ಟು ವೇಗ ಪಡೆದುಕೊಂಡಿದ್ದು, ಕಳೆದ 24 ಗಂಟೆಯಲ್ಲಿ 1,43,267 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ತಿಳಿಸಿದೆ.
ಸದ್ಯ ದೇಶದಲ್ಲಿ 1,74,387 ಆ್ಯಕ್ಟೀವ್ ಕೇಸ್ಗಳಿದ್ದು, ಉಳಿದಂತೆ 2,37,196 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ 1,35,796 ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 61,793 ಆ್ಯಕ್ಟೀವ್ ಕೇಸ್ಗಳಿವೆ. 6,283 ಜನರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂದು 3721 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 62 ಜನರು ಬಲಿಯಾಗಿದ್ದಾರೆ. 1,962 ಜನರು ಡಿಸ್ಚಾರ್ಜ್ ಆಗಿದ್ದಾರೆ. ತಮಿಳುನಾಡಿನಲ್ಲಿ ಕಳೆದ 24 ಗಂಟೆಯಲ್ಲಿ 2,710 ಕೋವಿಡ್ ಕೇಸ್ಗಳು ಹೊಸದಾಗಿ ಪತ್ತೆಯಾಗಿದ್ದು, 37 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು 62,087 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು 794 ಜನರು ಸಾವನ್ನಪ್ಪಿದ್ದು, ಚೆನ್ನೈನಲ್ಲೇ 42,752 ಕೇಸ್ಗಳಿವೆ.
ರಾಜಸ್ಥಾನದಲ್ಲಿಂದು 302 ಹೊಸ ಕೊರೊನಾ ಕೇಸ್ ಪತ್ತೆಯಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ 15,232 ಪಾಸಿಟಿವ್ ಕೇಸ್ಗಳಿದ್ದು, ಕೇವಲ 2966 ಆ್ಯಕ್ಟೀವ್ ಕೇಸ್ಗಳಿವೆ.
ಗುಜರಾತ್ನಲ್ಲಿಂದು 563 ಹೊಸ ಕೇಸ್ಗಳು ಪತ್ತೆಯಾಗಿವೆ. ಸೋಂಕಿತರ ಒಟ್ಟು ಸಂಖ್ಯೆ 26,278 ಆಗಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ 413 ಹೊಸ ಕೇಸ್, ಗೋವಾದಲ್ಲಿ 46, ಮಣಿಪುರದಲ್ಲಿ 57 ಕೋವಿಡ್, ಜಮ್ಮು-ಕಾಶ್ಮೀರದಲ್ಲಿ 132, ಕೇರಳದಲ್ಲಿ 138, ಪಂಜಾಬ್ನಲ್ಲಿ 177, ಆಂಧ್ರ ಪ್ರದೇಶದಲ್ಲಿ 443 ಹಾಗೂ ಕರ್ನಾಟಕದಲ್ಲಿ 249 ಕೊರೊನಾ ಕೇಸ್ ಇಂದು ಪತ್ತೆಯಾಗಿವೆ.