ನವದೆಹಲಿ: ಚೀನಾ, ಪೂರ್ವ ಲಡಾಖ್ನ ಎಲ್ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಬಳಿ ಸೇನೆ ನಿಯೋಜಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಸೇನಾ ಮಾತುಕತೆಗಳು ಮುಂದುವರೆಯುತ್ತವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆಲವು ದಿನಗಳ ಹಿಂದೆ ಮೇಜರ್ ಜನರಲ್, ಬೆಟಾಲಿಯನ್ ಹಂತದ ಮಾತುಕತೆಗಳು ನಡೆದಿದ್ದು, ವಿವಾದದ ಕೇಂದ್ರ ಬಿಂದುವಾದ ಚುನ್ಶುಲ್ನಲ್ಲಿ ವಿವಿಧ ಹಂತದ ಮಾತುಕತೆಗಳು ನಡೆಯುವ ಭರವಸೆಯಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಈ ಮಾತುಕತೆಗಳು ಗಲ್ವಾನಾ ಪ್ರದೇಶದ ಗಸ್ತು ಕೇಂದ್ರ 14, 114 ಬ್ರಿಗೇಡ್ ಪ್ರದೇಶದ ಗಸ್ತು ಕೇಂದ್ರ 15 ಹಾಗೂ ಹಾಟ್ಸ್ಪ್ರಿಂಗ್ ಪ್ರದೇಶದ ಗಸ್ತು ಕೇಂದ್ರ 17 ವಿವಾದವನ್ನು ಬಗೆಹರಿಸುವ ಸಾಧ್ಯತೆಗಳಿವೆ.
ಇದಕ್ಕೂ ಮೊದಲು ಜೂನ್ 6ರಂದು ಮಿಲಿಟರಿ ಕಮಾಂಡರ್ ಹಂತದ ಮಾತುಕತೆ ನಡೆದಿತ್ತು. ಇದರಲ್ಲಿ ಭಾರತದ ಲೆಫ್ಟಿನೆಂಟ್ ಜನರಲ್ ಹರೀಂದರ್ ಸಿಂಗ್ ಹಾಗೂ ಚೀನಾದ ಮಜ್ ಜೆನ್ ಲಿಯು ಲಿನ್ ನಡುವೆ ಮಾತುಕತೆ ಅಷ್ಟೇನೂ ಫಲಪ್ರದವಾಗಿರಲಿಲ್ಲ. ಈ ನಡುವೆಯೂ ಸಮಸ್ಯೆ ಪರಿಹಾರಕ್ಕಾಗಿ ಮಾತುಕತೆಗಳು ಮುಂದುವರೆದಿದ್ದು, ಆಶಾ ಭಾವನೆ ಮೂಡಿಸಿದೆ.