ETV Bharat / bharat

ಚೀನಾ ಗಡಿಯಲ್ಲಿ ಭಾರತ - ಚೀನಾ ಭೇಟಿ: ಯುದ್ಧತಂತ್ರಗಳ ಕುರಿತ ಮಾತುಕತೆ

ಹಲವು ದಿನಗಳಿಂದ ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ನಡುವೆ ನಡೆಯುತ್ತಿರುವ ಮಾತುಕತೆ ಉಭಯ ರಾಷ್ಟ್ರಗಳ ನಡುವೆ 'ಕಾರ್ಯತಂತ್ರ'ಗಳನ್ನು ರೂಪಿಸುವಲ್ಲಿ ಮಹತ್ವ ಪಡೆದಿದೆ.

India, China meet at Chushul border
ಭಾರತ-ಚೀನಾ
author img

By

Published : Jun 6, 2020, 11:57 AM IST

Updated : Jun 6, 2020, 12:05 PM IST

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ತಿಳಿಗೊಳಿಸಲು ವಿಶ್ವದಲ್ಲೇ ಪ್ರಬಲ ಸೇನೆ ಹೊಂದಿರುವ ಉಭಯ ದೇಶಗಳ ಲೆಫ್ಟಿನೆಂಟ್ ಜನರಲ್ ಅಧಿಕಾರಿಗಳು ಪೂರ್ವ ಲಡಾಖ್‌ ಭಾಗದ ಚೀನಾದ ಚುಶುಲ್ - ಮೊಲ್ಡೊ ಗಡಿಭಾಗದಲ್ಲಿ ಶನಿವಾರ ಭೇಟಿಯಾಗಿದ್ದಾರೆ.

ಹಲವು ದಿನಗಳಿಂದ ಭಾರತ - ಚೀನಾ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಈ ನಡುವೆ ನಡೆಯುತ್ತಿರುವ ಮಾತುಕತೆಯು 'ಯುದ್ಧತಂತ್ರ' ಎಂದು ಮೇಲ್ನೋಟಕ್ಕೆ ತೋರುತ್ತದೆಯಾದರೂ, ಇದರ ಪರಿಣಾಮಗಳು 'ಕಾರ್ಯತಂತ್ರ'ಗಳನ್ನು ರೂಪಿಸುವಲ್ಲಿ ಮಹತ್ವ ಪಡೆದಿದೆ.

ಸದ್ಯ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಭಯ ರಾಷ್ಟ್ರಗಳು ಹೇಳಿಕೊಳ್ಳುವುದರೊಂದಿಗೆ, ಗಡಿ ಭಾಗದಲ್ಲಿ ಪರಿಸ್ಥಿತಿ ತಿಳಿಗೊಳ್ಳುವ ಮುನ್ಸೂಚನೆ ನೀಡಿದೆ.

ಮಾತುಕತೆಯ ಮೂರು ಪ್ರಮುಖ ಅಂಶಗಳು

- ಮೇ 5 ಹಾಗೂ 6 ರಂದು ಪಾಂಗೊಂಗ್ ಸರೋವರದ ಉತ್ತರದ ದಂಡೆಯಲ್ಲಿ ಸೈನಿಕರ ಮೇಲೆ ನಡೆದ ಹಿಂಸಾಚಾರ

- ಗಡಿ ಹಿಂಸಾಚಾರದ ನಂತರ ಉದ್ವಿಗ್ನ ಪರಿಸ್ಥಿತಿ ಎದುರಾದ ಸ್ಥಳದಲ್ಲಿ ಸೈನಿಕರು ಮತ್ತು ಫಿರಂಗಿಗಳನ್ನು ನಿರ್ಮಿಸುವುದನ್ನು ನಿಲ್ಲಿಸುವುದು

- ಮೇ 5 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ಮರುಸ್ಥಾಪಿಸುವುದು.

ಮಾಧ್ಯಮಗಳಿಗೆ ಸೇನಾ ವಕ್ತಾರ ಸೂಚನೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನಾ ವಕ್ತಾರ, ಭಾರತ ಮತ್ತು ಚೀನಾ ಗಡಿ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಬಗೆಹರಿಸಲು ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ರಾಷ್ಟ್ರಗಳ ಅಧಿಕಾರಿಗಳು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹೀಗಾಗಿ ಈ ಹಂತದಲ್ಲಿ ಈ ವಿಚಾರಗಳ ಬಗ್ಗೆ ಯಾವುದೇ ಊಹಾತ್ಮಕ ಹಾಗೂ ಆಧಾರರಹಿತ ವರದಿಗಾರಿಕೆಯನ್ನು ಮಾಡಬಾರದು ಎಂದು ಸೇನಾ ವಕ್ತಾರ ಮಾಧ್ಯಮಗಳಿಗೆ ಸೂಚಿಸಿದ್ದಾರೆ.

Last Updated : Jun 6, 2020, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.