ETV Bharat / bharat

ಫಲಪ್ರದವಾಗದ ಚೀನಾ-ಭಾರತ ಮಾತುಕತೆ: ಇಂದು ಮೇಜರ್ ಜನರಲ್​ ಹಂತದಲ್ಲಿ ಸಭೆ - ಭಾರತ ಚೀನಾ ಸಂಬಂಧ

ಭಾರತ- ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವಿನ ಮಿಲಿಟರಿ ಹಂತದ ಮಾತುಕತೆಗಳು ಬುಧವಾರ ಸ್ಥಗಿತಗೊಂಡಿವೆ. ಮೂರು ಗಂಟೆಗಳ ಕಾಲ ಮಾತುಕತೆ ಫಲಪ್ರದವಾಗದ ಕಾರಣ, ಇವತ್ತು ಮೇಜರ್ ಜನರಲ್ ಹಂತದಲ್ಲಿ ಮಾತುಕತೆ ನಡೆಯುತ್ತಿದೆ.

Galwan Valley
ಭಾರತ ಚೀನಾ ಸಂಘರ್ಷ
author img

By

Published : Jun 18, 2020, 10:28 AM IST

ನವದೆಹಲಿ: ಗಾಲ್ವನ್​ ಕಣಿವೆಯಲ್ಲಿ ಭಾರತ- ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವಿನ ಮಿಲಿಟರಿ ಹಂತದ ಮಾತುಕತೆಗಳು ಬುಧವಾರ ಸ್ಥಗಿತಗೊಂಡಿವೆ. ಮೂರು ಗಂಟೆಗಳ ಕಾಲ ಮಾತುಕತೆ ಫಲಪ್ರದವಾಗದ ಕಾರಣ, ಇವತ್ತು ಮೇಜರ್‌ ಜನರಲ್‌ ಹಂತದ ಮಾತುಕತೆ ನಡೆಯುತ್ತಿದೆ.

ಭಾರತೀಯ ಸೇನೆಯ ಮೂರನೇ ವಿಭಾಗದ ಕಮಾಂಡರ್​ ಮೇಜರ್​​ ಜನರಲ್​ ಅಭಿಜಿತ್​ ಬಾಪಟ್ ಮಾತುಕತೆಯಲ್ಲಿ ಭಾಗಿಯಾಗಿದ್ದು, ​ಕೆಲವೊಂದು ಮುಖ್ಯವಾದ ವಿಷಯಗಳನ್ನು ಮಾತುಕತೆಯಲ್ಲಿ ಚರ್ಚಿಸಲಿದ್ದಾರೆ.

ಮಾತುಕತೆ ವೇಳೆ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ ತನ್ನ ಸೇನಾ ತಂಡಗಳನ್ನು ಹಿಂತೆಗೆದುಕೊಳ್ಳುವ ಭರವಸೆ ನೀಡಿತ್ತು. ಅದರಂತೆಯೇ ಗಾಲ್ವನ್​ ಕಣಿವೆಯಲ್ಲಿ ಮಿಲಿಟರಿ ಗ್ರೇಡ್​ನ ಟೆಂಟ್​ಗಳನ್ನು ಅದು ತೆರವು ಮಾಡಿತ್ತು.

ಸುಮಾರು 120 ಭಾರತೀಯ ಯೋಧರು ಚೀನಾ ಯೋಧರಿಂದ ಸುತ್ತುವರೆದಿದ್ದು, ಗಂಭೀರವಾಗಿ ಥಳಿಸಲ್ಪಟ್ಟಿದ್ದರು. ಚೀನಾ ಯೋಧರಿಂದ ಭಾರತೀಯ ಯೋಧರು ಕಿರುಕುಳಕ್ಕೆ ಒಳಗಾಗಿದ್ದರು. ಭಾರತ ಸರ್ಕಾರ ಶಸ್ತ್ರಾಸ್ತ್ರಗಳನ್ನು ಬಳಸಬಾರದೆಂದು ನಿರ್ದೇಶನ ನೀಡಿದ್ದ ಕಾರಣ ಕೆಲವು ಸೈನಿಕರು ಅಸಹಾಯಕರಾಗಿದ್ದರು. ಇನ್ನೂ ಕೆಲವರು ಕೆಚ್ಚೆದೆಯಿಂದಲೇ ಚೀನಿ ಸೈನಿಕರ ವಿರುದ್ಧ ಹೋರಾಡಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಲೈನ್ ಆಫ್​ ಆಕ್ಚುವಲ್ ಕಂಟ್ರೋಲ್​ನ ಪಾಯಿಂಟ್​ ನಂಬರ್ 14ರ ಬಳಿ ಗಸ್ತು ತಿರುಗುವಾಗ ಚೀನಾ ಸೇನೆ ದಾಳಿ ನಡೆಸಿತ್ತು. ಚೀನಾ ಸೈನ್ಯದ ಐದನೇ ಒಂದು ಭಾಗದಷ್ಟು ಭಾರತದ ಸೇನೆ ದಾಳಿಗೆ ಒಳಗಾಗಿತ್ತು. 6 ರಿಂದ 7 ಗಂಟೆ ಕಾಲ ಘರ್ಷಣೆ ನಡೆದಿದ್ದು, ಇದು ಚೀನಾ ಸೇನೆಯ ಕ್ರೂರ ದಾಳಿಯಾಗಿತ್ತು ಸೇನಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.