ETV Bharat / bharat

ಮೋದಿ 'ಜನತಾ ಕರ್ಫ್ಯೂ'... ಕೊಹ್ಲಿ, ಕೆಎಲ್​,ರಿಷಭ್​, ಶಾಸ್ತ್ರಿ ಸೇರಿ ಎಲ್ಲರೂ ಜೈಕಾರ!

ಮಹಾಮಾರಿ ಕೊರೊನಾ ವಿರುದ್ಧ ಸಮರ ಸಾರಿದ್ದು, ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿ ಆದೇಶ ಹೊರಹಾಕಿದ್ದಾರೆ.

India captain Virat Kohli
ಮೋದಿ 'ಜನತಾ ಕರ್ಫ್ಯೂ'
author img

By

Published : Mar 20, 2020, 2:29 AM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​​ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕಾರಣ ದೇಶಾದ್ಯಂತ ಮಾರ್ಚ್​ 22ರಂದು ಬೆಳಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆವರೆಗೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಕರೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಇದೀಗ ದೇಶದ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಟೀಂ ಇಂಡಿಯಾದ ಅನೇಕ ಕ್ರಿಕೆಟರ್ಸ್​ ತಮ್ಮ ಬೆಂಬಲ ಸೂಚಿಸಿ ಟ್ಟೀಟ್​ ಮಾಡಿದ್ದಾರೆ.

  • Be alert, attentive and aware to combat the threat posed by the Covid 19. We, as responsible citizens, need to adhere to the norms put in place for our safety as announced by our Honourable Prime Minister Shri @NarendraModi ji. #IndiaFightsCorona

    — Virat Kohli (@imVkohli) March 19, 2020 " class="align-text-top noRightClick twitterSection" data=" ">

ವಿರಾಟ್​ ಕೊಹ್ಲಿ

ಎಚ್ಚರಿಕೆಯಿಂದ ಕೋವಿಡ್​​ 19 ಎದುರಿಸಲು ಜಾಗರೂಕರಾಗಿರಿ. ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಘೋಷಣೆ ಮಾಡಿರುವಂತೆ ಜವಾಬ್ದಾರಿಯುತ ನಾಗರಿಕರಾದ ನಾವು ಸುರಕ್ಷತೆಗಾಗಿ ಜಾರಿಗೆ ತಂದಿರುವ ನಿಯಮ ಪಾಲಿಸಬೇಕಾಗಿದೆ ಎಂದಿರುವ ಅವರು ಭಾರತ ಕೊರೊನಾ ವಿರುದ್ಧ ಹೋರಾಡುತ್ತಿದೆ ಎಂದಿದ್ದಾರೆ.

ಅಲ್ಲದೆ, ಕೊರೊನಾ ವೈರಸ್ ವಿರುದ್ಧ ಹೋರಾಡಲು ಮುಂದಾಗಿರುವ ದೇಶದ ಮತ್ತು ಜಗತ್ತಿನ ಎಲ್ಲ ವೈದ್ಯಕೀಯ ವೃತ್ತಿಪರರಿಗೆ ಧನ್ಯವಾದ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಇವರಿಗೆ ಸಹಾಯ ಮಾಡಿ ಎಂದಿದ್ದಾರೆ.

ರವಿಶಾಸ್ತ್ರಿ

ಪ್ರಧಾನಿ ಮೋದಿಯವರ ಕರೆ ನೀಡಿರುವ ಜನತಾ ಕರ್ಫ್ಯೂಗೆ ನನ್ನ ಸಪೋರ್ಟ್​ ಇದೆ. ಮಾರ್ಚ್​ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ಗಂಟೆವರೆಗೆ ಈ ಕರೆಯಲ್ಲಿ ನಾವು ಭಾಗಿಯಾಗಬೇಕಾಗಿದೆ ಎಂದಿದ್ದಾರೆ.

ಆರ್​.ಅಶ್ವಿನ್​

ನಂಬಿ ಅಥವಾ ಬಿಡಿ. ಮಿಲಿಯನ್​ಗಟ್ಟಲೇ ಜನರನ್ನು ಹೊಂದಿರುವ ನ,್, ದೇಶ ಪ್ರಧಾನಿ ಮೋದಿಯವರು ಹೇಳಿರುವುದನ್ನ ಕೇಳಬೇಕು ಎಂದಿದ್ದಾರೆ.

ಶಿಖರ್​ ಧವನ್​

ಪ್ರಧಾನಿ ಮೋದಿ ಮನವಿ ಮಾಡಿಕೊಂಡಿರುವ ಜನತಾ ಕರ್ಫ್ಯೂದಲ್ಲಿ ನಾವೆಲ್ಲ ಭಾಗಿಯಾಗಿ ಸುರಕ್ಷತೆ ಕಾಪಾಡಬೇಕಾಗಿದೆ. ಎಲ್ಲರೂ ಮನೆಯಲ್ಲಿದುಕೊಂಡು ಅವರಿಗೆ ಸಪೋರ್ಟ್​ ಮಾಡಿ ಎಂದಿದ್ದಾರೆ.

ರಿಷಭ್ ಪಂತ್​

  • In these tough times we need to stay vigilant and follow the instructions put in place by the government for our safety. Please avoid going out if unnecessary.. Also, a huge shout out to all our health professionals working tirelessly to keep our country safe. Heroes !🙏🏻

    — Rishabh Pant (@RishabhPant17) March 19, 2020 " class="align-text-top noRightClick twitterSection" data=" ">

ಇಂತಹ ಕಠಿಣ ಸ್ಥಿತಿಯಲ್ಲಿ ನಾವೇ ನಿರ್ಧಾರ ಮಾಡಿಕೊಂಡು ಸರ್ಕಾರದ ನಿಯಮ ಪಾಲಿಸಬೇಕು. ಅನಗತ್ಯವಾಗಿ ಹೊರಗಡೆ ಹೋಗುವುದನ್ನ ಬಿಟ್ಟು ದೇಶದ ಸುರಕ್ಷತೆಗಾಗಿ ಕೈಜೋಡಿಸಿ ಎಂದಿದ್ದಾರೆ.

ಕೆಎಲ್​ ರಾಹುಲ್​

  • These are testing times for all and I salute the work being done by our doctors, nurses and medical staff across the country. I urge everyone as responsible citizens to follow the measures put in place by the government. Be safe and alert. #IndiaFightsCorona

    — K L Rahul (@klrahul11) March 19, 2020 " class="align-text-top noRightClick twitterSection" data=" ">

ಇವೆಲ್ಲ ನಮ್ಮನ್ನ ಪರೀಕ್ಷೆಗೊಳಪಡಿಸುವ ಸಮಯ. ನಮ್ಮ ವೈದ್ಯರು ಮಾಡುತ್ತಿರುವ ಕೆಲಸಕ್ಕೆ ನಾವು ಸೆಲ್ಯೂಟ್​ ಮಾಡಲೇಬೇಕು. ದೇಶದ ಪ್ರತಿಯೊಬ್ಬರು ಸರ್ಕಾರದ ನಿಯಮ ಪಾಲಿಸಬೇಕು ಎಂದಿದ್ದಾರೆ.

ಇವರ ಜತೆಗೆ ಉಮೇಶ್​ ಯಾದವ್​, ರಹಾನೆ, ಕುಲ್ದೀಪ್​ ಯಾದವ್​ ಸೇರಿದಂತೆ ಅನೇಕರು ಟ್ಟೀಟ್ ಮಾಡಿ ತಮ್ಮ ಅಭಿಪ್ರಾಯ ಹೊರಹಾಕಿದ್ದು, ದೇಶದ ಸುರಕ್ಷತೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.